ಜಾಲ್ಸೂರು: ಸಹಜ ಫ್ಯಾಬ್ ವತಿಯಿಂದ ಬಡ ಕುಟುಂಬಗಳಿಗೆ ಆಹಾರ ಸಾಮಾಗ್ರಿಗಳ ಕಿಟ್ ವಿತರಣೆ

Advt_Headding_Middle
Advt_Headding_Middle

 

ಜಾಲ್ಸೂರು ಗ್ರಾಮದ ಬೇರ್ಪಡ್ಕದ ಸಹಜ ಫ್ಯಾಬ್ ವತಿಯಿಂದ ಬಡ ಕುಟುಂಬಗಳಿಗೆ ಅಗತ್ಯ ಆಹಾರ ಸಾಮಾಗ್ರಿಗಳ ಕಿಟನ್ನು ಎ.24ರಂದು ವಿತರಿಸಲಾಯಿತು.
ಜಾಲ್ಸೂರು ಗ್ರಾಮದ ಸುಮಾರು ಇಪ್ಪತ್ತು ಕಡುಬಡ ಕುಟುಂಬಗಳಿಗೆ ಅಗತ್ಯ ಆಹಾರ ಸಾಮಾಗ್ರಿಗಳಾದ ಅವಲಕ್ಕಿ, ಸಕ್ಕರೆ, ಬೆಲ್ಲ, ಮೆಣಸು, ನೀರುಳ್ಳಿ, ಹುಳಿ, ಕೊತ್ತಂಬರಿ, ಪಾಮೊಯಿಲ್ ಎಣ್ಣೆ, ಚಾಹುಡಿ, ಬೆಳ್ಳುಳ್ಳಿ, ಸಾಂಬಾರ್ ಹುಡಿ,ಅರಶಿನ ಹುಡಿ, ಜೀರಿಗೆ,ತೊಗರಿ ಬೇಳೆ, ಉಪ್ಪು, ಪೇಸ್ಟ್, ಸೋಪ್ ಸೇರಿದಂತೆ ಅಗತ್ಯ ಆಹಾರ ಸಾಮಾಗ್ರಿಗಳನ್ನು ವಿತರಿಸಲಾಯಿತು.
ಈ ಸಂದರ್ಭದಲ್ಲಿ ಸಹಜ ಫ್ಯಾಬ್ ಮಾಲಕ ಜಗದೀಶ್ ಬೇರ್ಪಡ್ಕ, ಬ್ರಿಜೇಶ್ ಮರಸಂಕ, ಸತೀಶ್ ಮರಸಂಕ, ರೋಷನ್ ಜಾಲ್ಸೂರು, ಆಶಾ ಕಾರ್ಯಕರ್ತೆ ಶ್ರೀಮತಿ ಸರಸ್ವತಿ ಮರಸಂಕ ಮತ್ತಿತರರು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.