ಪೈಚಾರ್ ಜಮಾಯತ್ ವ್ಯಾಪ್ತಿಯ ಎಲ್ಲಾ ಮನೆಗಳಿಗೂ ಕಿಟ್ ವಿತರಣೆ

Advt_Headding_Middle
Advt_Headding_Middle

ಕೊರೋನಾ ಮಹಾಮಾರಿಯಿಂದಾಗಿ ಜಗತ್ತೇ ಲಾಕ್‌ಡೌನ್‌ನಲ್ಲಿದೆ. ಇದರ ಪರಿಣಾಮ ಜನರು ಸಂಕಷ್ಟದಲ್ಲಿದ್ದಾರೆ. ಹೊತ್ತಿನ ಊಟಕ್ಕೂ ಪರದಾಡುವ ಕೆಲವು ಕುಟುಂಬಗಳೂ ನಮ್ಮೊಳಗೆ ಇದೆ. ನೂರಾರು ಸಂಘಟನೆಗಳು, ಜನಪ್ರತಿನಿಧಿಗಳು, ಸಹಕಾರಿ ಸಂಘಗಳು ಸೇರಿದಂತೆ ನಾಡಿನೆಲ್ಲೆಡೆ ಇರುವ ಸಾಮಾಜಿಕ ಸಂಘಟನೆಗಳು ಜನರ ಹಸಿವನ್ನು ನೀಗಿಸುವ ಪ್ರಯತ್ನವನ್ನು ಮಾಡುತ್ತಲೇ ಇದೆ. ಪೈಚಾರ್ ಬದ್ರಿಯಾ ಜುಮ್ಮಾ ಜಮಾತ್ ಕಮಿಟಿ ಜಮಾತ್ ವ್ಯಾಪ್ತಿಯ ಎಲ್ಲಾ ಮನೆಗಳಿಗೂ ಕಿಟ್ ವಿತರಿಸುವ ಮೂಲಕ ಎಲ್ಲರಿಗೂ ಮಾದರಿಯಾಗಿದೆ.


ಸಾಧಾರಣವಾಗಿ ಜಮಾತ್ ಕಮಿಟಿ ವತಿಯಿಂದ ಕಿಟ್ ವಿತರಣೆ ಮಾಡುವಾಗ ಜಮಾತ್ ಸದಸ್ಯರ ಅಥವಾ ಜಮಾತ್ ವ್ಯಾಪ್ತಿಯ ಬಡವರನ್ನು ಮಾತ್ರ ಗುರುತಿಸಿ ಅವರಿಗೆ ಕಿಟ್ ಕೊಡುತ್ತಾರೆ. ಆದರೆ ಪೈಚಾರ್ ಬದ್ರಿಯಾ ಜಮಾತ್ ಕಮಿಟಿಯ ಕಿಟ್ ವ್ಯಾಪ್ತಿಯ ಬಹುತೇಕ ಎಲ್ಲಾ ಮನೆಗಳಿಗೂ ತಲುಪಿದೆ. ಬಡವ, ಮಧ್ಯಮವರ್ಗ, ಶ್ರೀಮಂತ ಎಂಬ ಬೇಧಬಾವಿಲ್ಲದೆ ಎಲ್ಲರ ಮನೆಗೂ ಕಿಟ್ ತಲುಪಿಸುವ ಮೂಲಕ ಮಾದರಿ ಎನಿಸಿಕೊಂಡಿದ್ದಾರೆ ಜಮಾತ್ ವ್ಯಾಪ್ತಿಯ 103 ಮನೆಗಳಿಗೆ ಕಿಟ್ ವಿತರಿಸಲಾಗಿದೆ. ಅಕ್ಕಿ ಸಹಿತಿ ದಿನಸಿ ಸಾಮಾಗ್ರಿಗಳನ್ನು ನೀಡಲಾಗಿದೆ. ಒಟ್ಟು ಜಮಾತ್ ನಡೆಗೆ ಸರ್ವತ್ರ ಶ್ಲಾಘನೆ ವ್ಯಕ್ತವಾಗಿದೆ

ಲಾಕೌಡೌನ್ ಪರಿಣಾಮ ಬಡವ ಶ್ರೀಮಂತ ಎಂಬ ಬೇಧವಿಲ್ಲದೆ ಎಲ್ಲರೂ ಕಷ್ಟದಲ್ಲಿದ್ದಾರೆ. ಹಸಿವು ಎಂಬುದು ಎಲ್ಲರಿಗೂ ಒಂದೇ ರೀತಿಯಾಗಿರುತ್ತದೆ. ಈ ಕಾರಣಕ್ಕೆ ಜಮಾತ್ ವ್ಯಾಪ್ತಿಯ ಎಲ್ಲಾ ಮನೆಗಳಿಗೂ ಕಿಟ್ ವಿತರಣೆ ಮಾಡಿದ್ದೇವೆ. ಒಟ್ಟು 150 ಕ್ಕೂ ಹೆಚ್ಚು ಮನೆಗಳಿಗೆ ಕಿಟ್ ವಿತರಣೆ ಮಾಡಿದ್ದೇವೆ.ಜಮಾಯತ್ ವ್ಯಾಪ್ತಿಯಲ್ಲಿ ಜಮಾಯತ್ ಸದಸ್ಯರಲ್ಲದ ಕೆಲವು ಆಯ್ದ ಮನೆಗಳಿಗೂ ಕಿಟ್ ವಿತರಿಸಿದ್ದೆವೆ ಲಾಕ್ ಡೌನ್ ಮುಂದುವರೆದಲ್ಲಿ ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ನೆರವು ನೀಡುವ ಉದ್ದೇಶವೂ ನಮಗಿದೆ ಎಂದು ಬದ್ರಿಯಾ ಜುಮ್ಮಾ ಮಸೀದಿ ಜಮಾತ್ ಕಮಿಟಿ ಅಧ್ಯಕ್ಷ ಪಿ.ಕೆ ಇಬ್ರಾಹಿಂ ತಿಳಿಸಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.