Breaking News

ಎ.28 ರಂದು ಮಂಗಳೂರಿನಲ್ಲಿ ಪತ್ರಕರ್ತರಿಗೆ ಕೋವಿಡ್ ಟೆಸ್ಟ್

Advt_Headding_Middle
Advt_Headding_Middle

ದ.ಕ.ಜಿಲ್ಲೆಯ ಪತ್ರಕರ್ತರಿಗೆ ಕೋವಿಡ್ ಟೆಸ್ಟ್ ಅವಕಾಶವನ್ನು ಎಪ್ರಿಲ್ 28 ರಂದು ಒದಗಿಸಲು ಜಿಲ್ಲಾಡಳಿತ ನಿರ್ಧರಿಸಿದೆ. ಮಂಗಳೂರಿನಲ್ಲಿ ಮತ್ತು ಜಿಲ್ಲೆಯ ಗ್ರಾಮಾಂತರ ಭಾಗದಲ್ಲಿ ವರದಿಗಾಗಿ ಸಕ್ರಿಯರಾಗಿ ಓಡಾಡುತ್ತಿರುವ ಪತ್ರಕರ್ತರು ಈ ಅವಕಾಶವನ್ನು ಬಳಸಿಕೊಳ್ಳಬೇಕೆಂದು ಕರ್ನಾಟಕ ಜರ್ನಲಿಸ್ಟ್ ಯೂನಿಯನ್ ನ ದ.ಕ. ಜಿಲ್ಲಾ ಘಟಕದ ಅಧ್ಯಕ್ಷ ಹರೀಶ್ ಬಂಟ್ವಾಳ್ ವಿನಂತಿಸಿ ಕೊಂಡಿದ್ದಾರೆ.
ಮುಂಬೈ ಮತ್ತು ಚೆನ್ನೈ ಯಲ್ಲಿ ಜನರಿಗೆ ಕ್ಷಣಕ್ಷಣದ ಸುದ್ದಿ ಮುಟ್ಟಿಸುವುದಕ್ಕಾಗಿ ನಿರಂತರ ಕಾರ್ಯಪ್ರವೃತ್ತರಾಗಿರುವ ಪತ್ರಕರ್ತರನ್ನು ಕೋವಿಡ್ ಪರೀಕ್ಷೆಗೆ ಒಳಪಡಿಸಿದಾಗ ಕೆಲವರಿಗೆ ಪಾಸಿಟಿವ್ ಕಂಡುಬಂದ ಹಿನ್ನೆಲೆಯಲ್ಲಿ ಕರ್ನಾಟಕ ರಾಜ್ಯದಲ್ಲಿಯೂ ಪತ್ರಕರ್ತರಿಗೆ ಕೋವಿಡ್ ಟೆಸ್ಟ್ ನಡೆಸಬೇಕೆಂಬ ಕೂಗು ಎದ್ದಿತ್ತು. ಶಿಕ್ಷಣ ಸಚಿವ ಸುರೇಶ್ ಕುಮಾರ್ ಇದಕ್ಕೆ ಪೂರಕವಾಗಿ ಮುಖ್ಯಮಂತ್ರಿ ಯವರಿಗೆ ಪತ್ರವನ್ನೂ ಬರೆದಿದ್ದರು. ಈ ಹಿನ್ನೆಲೆಯಲ್ಲಿ ಸರಕಾರ ರಾಜ್ಯದ ಎಲ್ಲಾ ಪತ್ರಕರ್ತರಿಗೆ ಉಚಿತವಾಗಿ ಕೋವಿಡ್ ಟೆಸ್ಟ್ ನಡೆಸಲು ನಿರ್ಧರಿಸಿದೆ.
ಇದಕ್ಕನುಗುಣವಾಗಿ ದ.ಕ.ಜಿಲ್ಲಾಡಳಿತ ಇಂದು ದಿನಾಂಕ ನಿರ್ಧರಿಸಿದೆ. ಎ.28 ರಂದು ದೃಶ್ಯ ಮಾಧ್ಯಮದ ವರದಿಗಾರರು ಹಾಗೂ ಕ್ಯಾಮರಮೆನ್ ಗಳಿಗೆ ಹಾಗೂ ಮಧ್ಯಾಹ್ನ ನಂತರ ಮುದ್ರಣ ಮಾಧ್ಯಮದ ವರದಿಗಾರರಿಗೆ ಟೆಸ್ಟ್ ನಡೆಸಲು ನಿರ್ಧರಿಸಲಾಗಿದೆ. ಫೀಲ್ಡಲ್ಲಿ ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿರುವವರು ಆರೋಗ್ಯ ತಪಾಸಣೆ ಮಾಡಿಕೊಳ್ಳಬಹುದು. ಜ್ವರ, ಕೆಮ್ಮು, ನೆಗಡಿಯ ಲಕ್ಷಣ ಕಂಡುಬಂದರೆ ಮಾತ್ರ ಕೋವಿಡ್ ಟೆಸ್ಟ್ ಮಾಡಲಾಗುವುದೆಂದು ತಿಳಿದು ಬಂದಿದೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.