ಕೊರೊನಾ‌ ಕಲಿಸಿದ ಪಾಠ

Advt_Headding_Middle
Advt_Headding_Middle

✍️ ಸೌಮ್ಯ ಸಿ.ಡಿ.

ಭಾರತವನ್ನು ತಬ್ಬಿರುವುದು ಕೊರೊನಾ
ವಿಶ್ವದೆಲ್ಲೆಡೆ ಹಬ್ಬಿರುವುದು ಕೊರೊನಾ

ಸಾವಿರಾರು ಜನರನ್ನು ಬಲಿತೆಗೆದುಕೊಂಡಿರುವುದು ಕೊರೊನಾ
ಜನರಲ್ಲಿ ಭಯದ ವಾತಾವರಣವನ್ನು ಸೃಷ್ಟಿಸಿರುವುದು ಕೊರೊನಾ

ಎಲ್ಲಾ ಜನರನ್ನು ಮನೆಯಲ್ಲಿಯೇ ಬಂಧಿಸಿರುವುದು ಕೊರೊನಾ
ಕುಟುಂಬದ ಮಹತ್ವವನ್ನು ತಿಳಿಸಿರುವುದು ಕೊರೊನಾ

ಅನ್ನದ ಮಹತ್ವವನ್ನು ವಿವರಿಸಿರುವುದು ಕೊರೊನಾ
ಪುಸ್ತಕದ ಪ್ರಾಮುಖ್ಯತೆಯನ್ನು ಬಿಂಬಿಸಿರುವುದು ಕೊರೊನಾ

ವೈದ್ಯರ ಮಹತ್ವವನ್ನು ವರ್ಣಿಸಿರುವುದು ಕೊರೊನಾ
ಪೊಲೀಸರ ಮಹತ್ವವನ್ನು ಬಿಂಬಿಸಿರುವುದು ಕೊರೊನಾ

ಮಾಧ್ಯಮಗಳ ಪ್ರಾಮುಖ್ಯತೆಯನ್ನು ಜಗತ್ತಿಗೆ ಸಾರಿರುವುದು ಕೊರೊನಾ
ಆಶಾ ಕಾರ್ಯಕರ್ತೆಯರ ಕಾರ್ಯವನ್ನು ತಿಳಿಸಿರುವುದು ಕೊರೊನಾ

ಜನರಲ್ಲಿ ಆತಂಕವನ್ನು ಹೆಚ್ಚಿಸಿರುವುದು ಕೊರೊನಾ
ಹಣವೇ ಜೀವನವಲ್ಲ ಎಂದು ವಿವರಿಸಿರುವುದು ಕೊರೊನಾ

ಭಾರತೀಯ ಸಂಸ್ಕೃತಿಯನ್ನು ಮತ್ತೆ ಬಿಂಬಿಸಿದೆ ಕೊರೊನಾ
ಪ್ರಕೃತಿಯ ಮಹತ್ವವನ್ನು ವಿವರಿಸಿರುವುದು ಕೊರೊನಾ

ಅಹಂಕಾರದಲ್ಲಿ ಮಲಗಿದ್ದ ಮಾನವನ ಬಡಿದೆಬ್ಬಿಸಿತು ಕೊರೊನಾ
ಮನುಷ್ಯನಲ್ಲಿರುವ ಒಣಜಂಬ ಓಡಿಸಿರುವುದು ಕೊರೊನಾ

ಮನುಷ್ಯತ್ವ ಕಳೆದುಕೊಂಡಿರುವ ಜನರಿಗೆ ಬುದ್ಧಿ ತಿಳಿಸಿರುವುದು ಕೊರೊನಾ
ಪ್ರೀತಿ, ವಾತ್ಸಲ್ಯ, ಬಾಂಧವ್ಯವನ್ನು ರೂಪಿಸಿರುವುದು ಕೊರೊನಾ

ಜನರ ಕನಸನ್ನು ನುಚ್ಚು ನೂರು ಮಾಡಿರುವುದು ಕೊರೊನಾ
ಕಣ್ಣಿಗೆ ಕಾಣಿಸದೆ ಎಲ್ಲರನ್ನು ಕಾಡಿಸಿರುವುದು ಕೊರೊನಾ

ಕಾರ್ಮಿಕರನ್ನು ಸಂಕಷ್ಟಕ್ಕೆ ಸಿಲುಕಿ‌ಸಿರುವುದು ಕೊರೊನಾ
ವಲಸಿಗರನ್ನು ಬಂಧಿಸಿರುವುದು ಕೊರೊನಾ

ಜೀವನದ ಬೆಲೆಯನ್ನು ಎತ್ತಿಹಿಡಿದಿರುವುದು ಕೊರೊನಾ
ಮರಣದ ಭಯವನ್ನು ಬಿಂಬಿಸಿರುವುದು ಕೊರೊನಾ

ಜನರಲ್ಲಿ ಜಾಗೃತಿ ಮೂಡಿಸಿರುವುದು ಕೊರೊನಾ
ಪ್ರಪಂಚದ ನಿದ್ದೆಕೆಡಿಸಿರುವ ಮಾಹಾಮಾರಿ ಈ ಕೊರೊನಾ

ಇನ್ನು ಮುಂದೆಯಾದರು ಎಚ್ಚೆತ್ತುಕೊಳ್ಳೋಣ
ಸರ್ಕಾರದ ನಿಯಮಗಳನ್ನು ಪಾಲಿಸೋಣ

ಸ್ವಚ್ಚಂದ ಭಾರತವನ್ನು ನಿರ್ಮಿಸೋಣ
ಈ ಕೊರೊನಾ ಎಂಬ ಹೆಮ್ಮಾರಿಯನ್ನು ಓಡಿಸೋಣ

✍🏻 ಸೌಮ್ಯ ಸಿ.ಡಿ. ಕೆ. ಎಸ್. ಎಸ್. ಕಾಲೇಜು ಸುಬ್ರಹ್ಮಣ್ಯ

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.