ಚೆಂಬು ಗ್ರಾಮದ 2 ಮನೆಗಳಿಗೆ ಅಬಕಾರಿ ದಾಳಿ

Advt_Headding_Middle
Advt_Headding_Middle


ಚೆಂಬು ಗ್ರಾಮದ 2 ಮನೆಗಳಲ್ಲಿ ಕಳ್ಳಭಟ್ಟಿ ತಯಾರಿಸುತ್ತಿದ್ದಾರೆಂಬ ಮಾಹಿತಿ ಪಡೆದ ಮಡಿಕೇರಿ ಅಬಕಾರಿ ಪೊಲೀಸರು ದಾಳಿ ನಡೆಸಿ ಗೇರುಹಣ್ಣಿನ ಪುಳಿಗಂಜಿಯನ್ನು ನಾಶಪಡಿಸಿದ್ದಾರೆ.

ಕೆ. ಪದ್ಮನಾಭ ಎಂಬವರ ಮನೆಯಿಂದ 20 ಲೀಟರ್‌ನಷ್ಟು ಗೇರುಹಣ್ಣಿನ ಪುಳೀಗಂಜಿ ಹಾಗೂ 2 ಲೀ. ಕಳ್ಳಭಟ್ಟಿ ಹಾಗೂ ಬಾಲಕೃಷ್ಣ ಎಂಬವರ ಮನೆಯಿಂದ 25 ಲೀಟರ್‌ನಷ್ಟು ಗೇರುಹಣ್ಣಿನ ಪುಳಿಗಂಜಿ ವಶಪಡಿಸಿಕೊಂಡು ನಾಶಪಡಿಸಿದರು. ಈ ಬಗ್ಗೆ ಪದ್ಮನಾಭ ಮತು ಬಾಲಕೃಷ್ಣ ಎಂಬವರ ಮೇಲೆ ಅಬಕಾರಿ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.
ಅಬಕಾರಿ ನಿರೀಕ್ಷಕ ಯಶವಂತ್ ಮತ್ತು ಸಿಬ್ಬಂದಿಗಳಾದ ಚೇತನ್, ರಾಜೇಂದ್ರ, ಚಾಲಕ ಕುಶಾಲಪ್ಪ ಕಾರ್ಯಾಚರಣೆಯಲ್ಲಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.