ನೆಲ್ಲೂರು ‌ಕೆಮ್ರಾಜೆ ಗ್ರಾಮಕ್ಕೆ‌ ಬಂದ ಆಂಧ್ರ ಮೂಲದ ವ್ಯಕ್ತಿ

Advt_Headding_Middle
Advt_Headding_Middle

ಕೊರೋನಾ ಕಾರ್ಯಪಡೆಯ ಮೂಲಕ ಸರಕಾರಿ ಆಸ್ಪತ್ರೆಗೆ

ಪುತ್ತೂರು ಕಡೆಯಿಂದ ಬಂದ ಅಪರಿಚಿತ ವ್ಯಕ್ತಿಯೊಬ್ಬರು ನೆಲ್ಲೂರು ಕೆಮ್ರಾಜೆ ಗ್ರಾಮದ ಕೊರತ್ತೋಡಿ ಬಸ್ ಸ್ಟ್ಯಾಂಡ್ ‌ನಲ್ಲಿರುವುದನ್ನು‌ ಗಮನಿಸಿದ ಸ್ಥಳೀಯರು ಪಂಚಾಯತ್ ಕೊರೋನಾ ಕಾರ್ಯಪಡೆಗೆ ಮತ್ತು ಸುಳ್ಯ‌ ತಹಶೀಲ್ದಾರ್ ಗೆ ವಿಷಯ ಮುಟ್ಟಿಸಿ ಬಳಿಕ‌ ನೆಲ್ಲೂರು ಕೆಮ್ರಾಜೆ ಕಾರ್ಯಪಡೆಯ ಮೂಲಕ ಆ ವ್ಯಕ್ತಿಯನ್ನು ಸುಳ್ಯ ಸರಕಾರಿ‌ ಆಸ್ಪತ್ರೆಗೆ‌ ಕೊಂಡೊಯ್ದ ಘಟನೆ ಇಂದು ನಡೆದಿದೆ.

ಆಂಧ್ರ ಮೂಲದವರೆಂದು ಆ ವ್ಯಕ್ತಿ ಹೇಳಿದ್ದು, ರವಿ ಎಂದು ತನ್ನ ಹೆಸರು ಹೇಳಿಕೊಂಡಿದ್ದಾನೆ.

ಬಸ್ ಸ್ಟ್ಯಾಂಡ್ ನಲ್ಲಿ ಆಂದ್ರ ಮೂಲದ ವ್ಯಕ್ತಿ ಇದ್ದ ಮಾಹಿತಿಯನ್ನು ಸುದ್ದಿ ಬಿಡುಗಡೆ ವರದಿಗಾರ ದಯಾನಂದರವರು ತಾಲೂಕು‌ ಆಡಳಿತ ಮತ್ತು  ನೆಲ್ಲೂರು ಕೆಮ್ರಾಜೆ ಕಾರ್ಯಪಡೆಗೆ ನೀಡಿದ್ದರು. ಕಾರ್ಯಪಡೆ ವ್ಯಕ್ತಿ ಯನ್ನು ಸುಳ್ಯಕ್ಕೆ ಕಳುಹಿಸುವ ವ್ಯವಸ್ಥೆ ಮಾಡಿದರು.

ಈ ಸಂದರ್ಭದಲ್ಲಿ ಪಂಚಾಯತ್ ಕಾರ್ಯಪಡೆಯ ಅಧ್ಯಕ್ಷ ದಿವಾಕರ ನಾಯಕ್ ಎರ್ಮೆಟ್ಟಿ, ಕಾರ್ಯಪಡೆಯ ಸದಸ್ಯರುಗಳಾದ  ಮಾರುತಿ ಕಾಂಬ್ಲೆ, ಧನಂಜಯ ಕುಮಾರ್ ಎರ್ಮೆಟ್ಟಿ, ಶೀಲಾವತಿ‌ ಬೊಳ್ಳಾಜೆ, ಅರುಣಾ ಕುಮಾರ್, ಪ್ರಭಾಕರ ಸುಳ್ಳಿ, ಜೀವನ್ ತುಂಬೆತ್ತಡ್ಕ, ಆಶಾ ಕಾರ್ಯಕರ್ತೆ ಲೀಲಾವತಿ ಬೆಟ್ಟ ಉಪಸ್ಥಿತರಿದ್ದರು.

ಆದರೆ ಈತ ಹೇಗೆ ಇಲ್ಲಿಗೆ ಬಂದ ಎಂಬ ವಿಚಾರ ಸ್ಪಷ್ಟಗೊಂಡಿಲ್ಲ

ನೋಡೆಲ್ ಅಧಿಕಾರಿ ವಿಜಯ್ ರವರ ನೇತೃತ್ವದಲ್ಲಿ ಸರಕಾರಿ ಆಸ್ಪತ್ರೆ ಯಲ್ಲಿ ತಪಾಸಣೆ ನಡೆಸಿ ಆ ವ್ಯಕ್ತಿ ಯನ್ನು ಸುಳ್ಯದ ಸಂಗಂ ಕಾಂಪ್ಲೆಕ್ಸ್ ನಲ್ಲಿ ಸುಳ್ಯ ತಹಶಿಲ್ದಾರ್ ಸೂಚನೆಯಂತೆ ವಾಸ್ತವ್ಯಕ್ಕೆ ವ್ಯವಸ್ಥೆ ಮಾಡಲಾಗಿದ್ದು, ನಾಳೆ ಸುಬ್ರಹ್ಮಣ್ಯದ ನಿರ್ಗತಿಕರ ಕೇಂದ್ರಕ್ಕೆ ಕಳುಹಿಸಲಾಗುತ್ತದೆ ಎಂದು‌ ತಿಳಿದು ಬಂದಿದೆ.

ಕೊರೋನಾ‌ ವೈರಾಸ್ ಮುಂಜಾಗ್ರತಾ ಕ್ರಮವಾಗಿ ಅಪರಿಚಿತ ವ್ಯಕ್ತಿ ಇದ್ದ ಕಾರಣ ಕೊರತ್ತೋಡಿ ಬಸ್‌ಸ್ಟ್ಯಾಂಡ್ ನ್ನು ನಾಳೆ ಎ.27ರ ಸಂಜೆಯವರೆಗೆ ಉಪಯೋಗಿಸದಂತೆ ನೆಲ್ಲೂರು‌ ಕೆಮ್ರಾಜೆ ಪಂಚಾಯತ್ ವತಿಯಿಂದ ತಡೆ ಮಾಡಲಾಗಿದೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.