ಕತ್ತಲೆಯ ಜಗತ್ತು ಆರಲಿ

Advt_Headding_Middle
Advt_Headding_Middle

 

ಕವನ: ✍️ ಸಿಂಚನ ಕೆ.ಎನ್.

ಖುಷಿಯಿಂದ ಜೀವಿಸುತ್ತಿದ್ದೆವು ಈ ಪ್ರಪಂಚದಲ್ಲಿ
ಆದರೆ, ಈಗ ಬದುಕುತ್ತಿದ್ದೇವೆ ಭಯದ ನರಕದಲ್ಲಿ

ಮೊದಲು ಟಿ.ವಿ ,ಮಾಧ್ಯಮದಲ್ಲಿ ಬರುತಿತ್ತು ರಾಜಕಾರಣಿಯರ ಜಗತ್ತು
ಇಂದು ಟಿ.ವಿಯಲ್ಲಿ ತೋರಿಸುತ್ತಿದ್ದಾರೆ ರಾಶಿ-ರಾಶಿ ಹೆಣಗಳ ಜಗತ್ತು

ಇನ್ನು ಹೇಗೆ ಬದುಕುವುದು ಈ ಕೊರೋನಾ ಎಂಬ ಕತ್ತಲೆಯಲ್ಲಿ
ಧೈರ್ಯದಿಂದ ಎದುರಿಸಬೇಕು ಈ ಕೊರೋನಾ ಎಂಬ ಜಗತ್ತಿನಲ್ಲಿ

ನಮಗಾಗಿ ದುಡಿಯುವವರು ಪೊಲೀಸ್ ಇಲಾಖೆ, ಆಸ್ಪತ್ರೆಯ ಸಿಬ್ಬಂದಿಗಳು ಅಲ್ಲಿ;
ಎಂದಿಗೂ ಚಿರ ಋಣಿಯಾಗಿರಬೇಕು ನಾವು ಅವರಲ್ಲಿ

ಹಣಕ್ಕೆ ಬೆಲೆ ಇಲ್ಲದಾಗ ಬಂತು ಈ ರೋಗವು ಇಂದು
ಎಲ್ಲರಿಗೂ ತಿಳಿಯಿತು ಹಣಕ್ಕಿಂತ ಮಾನವೀಯತೆ ಮುಖ್ಯವೆಂದು

ನಾ ಪ್ರಾರ್ಥಿಸುವೆನು ಆ ದೇವರಲ್ಲಿ;
ಕತ್ತಲೆ ಎಂಬ ಜಗತ್ತು ಆರಲಿ
ಬೆಳಕೆಂಬ ಬದುಕು ಎಲ್ಲರದಾಗಲಿ…

– ✍️ ಸಿಂಚನ ಕೆ.ಯನ್
ಕುಕ್ಕೆ ಶ್ರೀ ಸುಬ್ರಹ್ಮಣ್ಯೇಶ್ವರ ಕಾಲೇಜು ಸುಬ್ರಹ್ಮಣ್ಯ

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.