ಸುಳ್ಯ ಜಯನಗರದ ಮೂರನೇ ವಾರ್ಡಿನ ಎಲ್ಲ ಮನೆಗಳಿಗೆ ತರಕಾರಿ ಮತ್ತು ಅಗತ್ಯ ವಸ್ತು ವಿತರಿಸಿದ ಬಾಲಕೃಷ್ಣ ಭಟ್

Advt_Headding_Middle
Advt_Headding_Middle

ಸುಳ್ಯ ನಗರ ಪಂಚಾಯತ್ ನ ಮೂರನೇ ವಾರ್ಡಿನ ಸದಸ್ಯ ಕೊಡಂಕಿರಿ ಬಾಲಕೃಷ್ಣ ಭಟ್ ಅವರು ತಮ್ಮ ಅಧ್ಯಕ್ಷತೆಯ ದೃಷ್ಟಿ ಚಾರಿಟೇಬಲ್ ಟ್ರಸ್ಟ್ ವತಿಯಿಂದ ತನ್ನ ವಾರ್ಡಿನ ನೂರ ಎಪ್ಪತ್ತು ಮನೆಗಳಿಗೆ ತರಕಾರಿ ಮತ್ತು ಅಗತ್ಯ ವಸ್ತುಗಳನ್ನು ಉಚಿತವಾಗಿ ವಿತರಿಸಿದರು.

ಈ ಸಂದರ್ಭದಲ್ಲಿ ಜಯನಗರ ಮೂರನೇ ವಾರ್ಡಿನ ಕಾವಲು ಸಮಿತಿ ಅಧ್ಯಕ್ಷ ದೀಕ್ಷಿತ್ ಜಯನಗರ , ಕಾರ್ಯದರ್ಶಿ ಸುಂದರ ಕುದ್ಪಾಜೆ, ಸದಸ್ಯರಾದ ಅವಿಲ್, ಮಹಮ್ಮದ್ ಮುಟ್ಟ ತ್ತೋಡಿ ಮತ್ತಿತರರು ಉಪಸ್ಥಿತರಿದ್ದರು.
ಇದೇ ವೇಳೆ ಅರ್ಹ ಬಡವರಿಗೆ ನಗರ ಪಂಚಾಯಿತಿ ವತಿಯಿಂದ ನೀಡಲಾದ ತಲಾ ಹತ್ತು ಕೆ.ಜಿ. ಅಕ್ಕಿಯನ್ನು ಕ್ಷೇತ್ರದ ಎಂಟು ಮನೆಗಳಿಗೆ ವಿತರಿಸಲಾಯಿತು. ತಾಪಂ ಮುಖ್ಯಾಧಿಕಾರಿ ಮತ್ತಡಿ, ಸಿಬ್ಬಂದಿ ಶಶಿಕಲಾ ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.