Breaking News

ನ.ಪಂ. ಸದಸ್ಯೆ ಶಿಲ್ಪಾ ಸುದೇವ್‌ರಿಂದ 260 ಆಹಾರ ಕಿಟ್‌ಗಳ ವಿತರಣೆ

Advt_Headding_Middle
Advt_Headding_Middle


ಸುಳ್ಯ ನಗರದ 19ನೇ ವಾರ್ಡ್ ಸದಸ್ಯೆ ಶ್ರೀಮತಿ ಶಿಲ್ಪಾ ಸುದೇವ್‌ರವರು ತಾನು ಸ್ವತಃ ದಾನಿಗಳಿಂದ ಆಹಾರ ಸಾಮಾಗ್ರಿಗಳನ್ನು ಸಂಗ್ರಹಿಸಿದ ತನ್ನ ಕ್ಷೇತ್ರದ 260 ಮನೆಗಳಿಗೆ ಎ. 26ರಂದು ವಿತರಿಸಿದರು.

ಅಕ್ಕಿ ಹೊರತುಪಡಿಸಿ ಸಕ್ಕರೆ, ಚಾಹುಡಿ, ಮೆಣಸು, ತರಕಾರಿ,ಮತ್ತಿತರ ಹಲವು ಬಗೆಯ ಆಹಾರ ಸಾಮಾಗ್ರಿಗಳನ್ನು ಈ ಕಿಟ್ ಒಳಗೊಂಡಿದ್ದು, ವಿತರಣೆಯ ವೇಳೆ ಸುಳ್ಯ ಸಿ.ಎ. ಬ್ಯಾಂಕ್ ಅಧ್ಯಕ್ಷ ಹರೀಶ್ ಬೂಡುಪನ್ನೆ, ಸ್ಥಳೀಯ ಮುಖಂಡರಾದ ರಾಧಾಕೃಷ್ಣ ನಾಯಕ್, ಕುಸುಮಾಧರ, ಮಾಧವ, ಹಾಗೂ ಮಹೇಶ್ ಮೇನಾಲ ಉಪಸ್ಥಿತರಿದ್ದರು. ಇದೇ ಸಂದರ್ಭ ಕೊರೊನಾ ಜಾಗೃತಿಯ ಕಾರ್ಯದಲ್ಲಿ ತೊಡಗಿಸಿಕೊಂಡಿರುವ ಅಂಗನವಾಡಿ ಕಾರ್ಯಕರ್ತೆ ಶ್ರೀಮತಿ ತಿರುಮಲೇಶ್ವರಿಯವರಿಗೆ ಶಾಸಕರು ಕೊಡಮಾಡಿದಹಾರ ಕಿಟ್‌ನ್ನು ವಿತರಿಸಲಾಯಿತು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.