Breaking News

ಕೋಡಿ ವಸಂತ ಗೌಡರ ಬಡ ಕುಟುಂಬಕ್ಕೆ ಸೇವಾಭಾರತಿಯ ಮೂಲಕ ಆಹಾರ ಸಾಮಾಗ್ರಿ ಹಾಗೂ ವೈದ್ಯಕೀಯ ವೆಚ್ಚ ಕೊಡುಗೆ

Advt_Headding_Middle
Advt_Headding_Middle

 

ಐವತ್ತೊಕ್ಲು ಗ್ರಾಮದ ಕೋಡಿ ವಸಂತ ಗೌಡರ ಬಡ ಕುಟುಂಬಕ್ಕೆ ಸೇವಾಭಾರತಿಯ ಮೂಲಕ ಆಹಾರ ಸಾಮಾಗ್ರಿ ಹಾಗೂ ವೈದ್ಯಕೀಯ ವೆಚ್ಚ ಕೊಡುಗೆ ನೀಡಲಾಯಿತು.

ಆರೋಗ್ಯದ ತೊಂದರೆಯಿಂದ ಬಳಲುತ್ತಿದ್ದ ವಸಂತ ಗೌಡರ ಧರ್ಮಪತ್ನಿ ಶ್ರೀಮತಿ ಲಲಿತರವರ ಅನಾರೋಗ್ಯದ ಕಾರಣದಿಂದಾಗಿ ನೆಲ್ಯಾಡಿಯ ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಕೆ ಎಸ್ ಹೆಗ್ಡೆ ಆಸ್ಪತ್ರೆಗೆ ದಾಖಲಾಗಬೇಕಾಯಿತು. ಇದಕ್ಕಾಗಿ ಆಂಬ್ಯುಲೆನ್ಸ್ ನ್ನು ಪಂಜ ಪಂಚಶ್ರೀ ಸ್ಪೋರ್ಟ್ಸ್ ಕ್ಲಬ್ ನವರು ಆಂಬ್ಯುಲೆನ್ಸ್ ಉಚಿತವಾಗಿ ನೀಡಿ ಸಹಕರಿಸಿದರು.


ನಂತರ ಆಸ್ಪತ್ರೆಯ ಖರ್ಚಿಗಾಗಿ ಕೈಚೆಲ್ಲಬೇಕಾದ ಸಂದರ್ಭ ಅಕ್ಕಪಕ್ಕದ ಮನೆಯ ಯುವಕರು ಜಾಗೃತರಾಗಿ ವಾಟ್ಸಪ್ ಮೂಲಕ ಸಂದೇಶ ಬರೆದು ರವಾನಿಸಿ ಒಟ್ಟು 39,500/ ಸಂಗ್ರಹಿಸಲಾಯಿತು. ಇದರಲ್ಲಿ ಈಗಾಗಲೇ ರೂ 20 ಸಾವಿರ ವೈದ್ಯಕೀಯ ವೆಚ್ಚಕ್ಕೆ ನೀಡಲಾಗಿದೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.