Breaking News

ಅಂತರವಿದ್ದರೂ ಐಕ್ಯತೆಯಿರಲಿ

Advt_Headding_Middle
Advt_Headding_Middle

 

ಕವನ : ✍️ ಲೋಹಿತ್ ಮುಚ್ಚಾರ

ಜಗವು ಸಿಲುಕಿದೆ ಸೋಂಕಿನ ಸುಳಿಗೆ…
ಸೋಂಕು ತೆರೆದಿದೆ ಸಾವಿನ ಮಳಿಗೆ…
ಕಾಯುತಲಿಹುದು ಮತ್ತಷ್ಟು ಬಲಿಗೆ…
ನಮ್ಮನ್ನು ನಾವು ರಕ್ಷಿಸೋಣ..
ಇದ್ದು ಮನೆಯ ಒಳಗೆ…

ಸನ್ನಿವೇಶವಿದು ತುಂಬಾ ಕಠಿಣ..
ಆದರೆ ಶಾಶ್ವತವಲ್ಲ..
ಸೋಂಕಿಗೆದುರಾಗಿ ವಿಶ್ವದ ಕದನ..
ಅಸಡ್ಡೆ ಖಂಡಿತಾ ಸಲ್ಲ..

ಅಂತರವಿದ್ದರೂ ಐಕ್ಯತೆಯಿರಲಿ..
ಪಿಡುಗಿನ ಎದುರಿನ ಸಮರದಲಿ…
ಅಂತರಾಳದ ಗೌರವವಿರಲಿ..
ಪ್ರತಿದಿನ ಸೆಣಸುವ ವೀರರಲಿ…
ಮನೆಯೊಳಗಿದ್ದೇ ಕ್ರಾಂತಿಯಾಗಲಿ..
ಸೋಂಕೇ ಕೊನೆಯುಸಿರೆಳೆಯಲಿ…

ಮಾದರಿಯಾಗುವ ಹಾದಿಯಲಿ..
ಭಾರತದೇಶ ನಡೆಯುತಿದೆ…
ಸಮರ್ಥ ನಾಯಕ ನಮ್ಮ ಅಗ್ರೇಸರನು..
ರೋಗವು ಶೀಘ್ರವೇ ನಶಿಸಲಿದೆ…

ಯುಗಯುಗಗಳಲು..
ಗೆಲುವಿಗೆ ಕೊರಳು..
ಭಾರತ ಮಾತೆಯು ನೀಡಿಹಳು….

ಈ ಯುದ್ಧದಲೂ..
ಜಯವನು ಗಳಿಸಲು..
ನಮ್ಮಲಿ ಭರವಸೆ ಇಟ್ಟಿಹಳು….

✍️ *ಲೋಹಿತ್ ಮುಚ್ಚಾರ*

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.