Breaking News

ಅಡಿಕೆ ಖರೀದಿ : ಕ್ಯಾಂಪ್ಕೊ ಸಂಸ್ಥೆಯಿಂದ ರೈತರ ಶೋಷಣೆಯೇ? – ಉತ್ತರಿಸುವರಾರು

Advt_Headding_Middle
Advt_Headding_Middle

 

ನ.ಪಂ.ಸದಸ್ಯ ಎಂ.ವೆಂಕಪ್ಪ ಗೌಡ ಅಭಿಪ್ರಾಯ

ಸುಳ್ಯದ ರೈತರ ಪಾಲಿಗೆ ಮತ್ತಷ್ಟು ಸಂಕಷ್ಟ.
ಲಾಕ್ ಡೌನ್ ಹಿನ್ನೆಲೆಯಲ್ಲಿ ಅಡಿಕೆ, ಗೇರು ಕೊಕ್ಕೊ ಖರೀದಿಗೆ ಕ್ಯಾಂಪ್ಕೊ ಸಂಸ್ಥೆಗೆ ದ.ಕ. ಜಿಲ್ಲಾಡಳಿತ ಜವಾಬ್ದಾರಿ ವಹಿಸಿಕೊಟ್ಟಿರುದು ಶ್ಲಾಘನೀಯ .ಆದ್ರೆ ಆ ಸಂದರ್ಭದಲ್ಲಿ ಅಡಿಕೆ ಕೆ.ಜಿ. ಒಂದಕ್ಕೆ ರೂ 250 /ಕ್ಕೆ ಕಡಿಮೆಯಾಗದಂತೆಯೂ ಗೇರುಬೀಜ ಕೆ.ಜಿ. ಒಂದಕ್ಕೆ 70 ಕ್ಕೆ ಕಡಿಮೆಯಾಗದಂತೆಯೂ ದರ ನಿಗದಿಮಾಡಿತ್ತು ಅಂತ ನಾನು ತಿಳಿದುಕೊಂಡಿದ್ದೇನೆ .ಇವತ್ತಿನ camco ದರ ಅಡಿಕೆಗೆ 250 /255 ರೂ ಇದ್ದರೆ, ಅದೇ ಯಾರ್ಡ್ ನಲ್ಲಿದ್ದ ಖಾಸಗಿ ವ್ಯಾಪಾರೀ ರೂ. 265 ಕ್ಕೆ ಅಡಿಕೆ ಖರೀದಿಸುತ್ತಾರೆ. ಅದೇ ಪ್ರಕಾರ ಗೇರು ಬೀಜಕ್ಕೆ ರೂ 85 /.ಇದಕ್ಕೆ ರೈತಾಪಿ ವರ್ಗದವರು ಏನು ಹೇಳಬೇಕು ? ನಮ್ಮ ಜನಪ್ರತಿನಿದಿಗಳು ಇದಕ್ಕೂ ಅವರಿಗೂ ಸಂಬಂಧ ಇಲ್ಲದಂತೆ ಕೂತಿರುದು ಸರಿಯೇ ? ಇದೊಂದು ರೀತಿಯಲ್ಲಿ ಸರಕಾರೀ ಸಂಸ್ಥೆಯಾಗಿದ್ದು ರೈತರನ್ನು ದರೋಡೆ ಮಾಡಿದಂತಳ್ವೆ ? ಅಂದು ವಾರಾಣಸಿ ಸುಭ್ರಾಯ ಭಟ್ ರ ನೇತ್ರತ್ವದಲ್ಲಿ ಅಂದಿನ ಕಾಂಗ್ರೆಸ್ ಸರಕಾರದ ಹುಟ್ಟು ಹಾಕಿದ ಸಂಸ್ಥೆಯ ಉದ್ದೇಶ ರೈತ ಸಂಕಷ್ಟದಲ್ಲಿದ್ದಾಗ ಅವನ ಸಹಾಯಕ್ಕೆ ಧಾವಿಸಬೇಕು ಅಂತ .ಆದ್ರೆ ಈಗಿನ ಆಡಳಿತದಲ್ಲಿ ಅದರ ದ್ಯೆಯೋದ್ದೇಶವೇ ಬದಲಾಯಿತೇ ? ಈ ಸಂಕಷ್ಟ ಕಾಲದಲ್ಲೂ ರೈತರ ಶೋಷಣೆಯೇ ? ಇದನ್ನು ಕೇಳುವ ಗಟ್ಟಿ ಸ್ವಭಾವದ ಜನಪ್ರತಿನಿದಿಗಳು ಸುಳ್ಯಕ್ಕೆ ಇಲ್ಲದಂತಾಗಿರುದು ನಮ್ಮ ದುರಂತವೇ ಸರಿ ! ಈ ಹಿಂದೆ ಕೂಡ ಕೇಂದ್ರ ಸರಕಾರದಿಂದ ಎಂ.ಪಿ. ನಳಿನಕುಮಾರ್ ಹೇಳಿದಂತೆ ಇದೇ ಸಂಸ್ಥೆಬಂದ ರೂ 163 ಕೋಟಿ ಹಣವನ್ನು ಕೂಡ ರೈತರಿಗೆ ನೀಡದೆ ಇರೋದನ್ನು ಸರಕರಾದ ಗಮನಕ್ಕೆ ತಂದರೂ ಸರಕರಾದ ಕಿವಿಗೆ ಕೇಳದೆ ಇರೋದು ವಿಪರ್ಯಾಸವೇ ಸರಿ ! ಎಂದು ಕೆ.ಪಿ.ಸಿ.ಸಿ. ಮಾಜಿ ಕಾರ್ಯದರ್ಶಿ, ನ.ಪಂ.ಸದಸ್ಯ ಎಂ.ವೆಂಕಪ್ಪ ಗೌಡ ಅಭಿಪ್ರಾಯ ಪಟ್ಟಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.