ಐವರ್ನಾಡು : ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಿಂದ ನೀಡಿದ ಪಡಿತರ ಕಿಟ್ ವಿತರಣೆ

Advt_Headding_Middle
Advt_Headding_Middle

 

ಶ್ರೀ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಿಂದ ನೀಡಲ್ಪಟ್ಟ ಪಡಿತರ ಕಿಟ್ ನ್ನು ಐವರ್ನಾಡು ಗ್ರಾಮ ಪಂಚಾಯತ್ ವಠಾರದಲ್ಲಿ 32 ರೇಷನ್ ಕಾರ್ಡ್ ಹೊಂದಿಲ್ಲದ ಬಡ ಕುಟುಂಬಗಳಿಗೆ ಐವರ್ನಾಡು ಸ್ಥಳೀಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷರು ಹಾಗೂ ಬೆಳ್ಳಾರೆ ಕ್ಷೇತ್ರದ ಜಿಲ್ಲಾ ಪಂಚಾಯತ್ ಸದಸ್ಯರೂ ಆದ ಎಸ್.ಎನ್.ಮನ್ಮಥರವರ ಅಧ್ಯಕ್ಷತೆಯಲ್ಲಿ ಎ.29 ರಂದು ವಿತರಿಸಲಾಯಿತು.
ಈ ಸಂಧರ್ಭದಲ್ಲಿ ಜಿಲ್ಲಾ ಪಂಚಾಯತ್ ಸದಸ್ಯರಾದ ಶ್ರೀಮತಿ ಪುಷ್ಪಾವತಿ ಬಾಳಿಲ, ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ಬಾಲಕೃಷ್ಣ ಕೀಲಾಡಿ, ಸದಸ್ಯರಾದ ದೇವಿಪ್ರಸಾದ್ ಕೊಪ್ಪತ್ತಡ್ಕ, ಸುಜಾತ ಪವಿತ್ರಮಜಲು,ರಾಜೀವಿ ಲಾವಂತ್ತಡ್ಕ,ಚಂದ್ರಲಿಂಗಂ ಬೇಂಗಮಲೆ ಐವರ್ನಾಡು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಉಪಾಧ್ಯಕ್ಷರಾದ ವಿಕ್ರಂ ಪೈ,ನಿರ್ದೇಶಕರಾದ ಚಂದ್ರಶೇಖರ ಕೊಯಿಲ,ವಾಸುದೇವ ಬೊಳುಬೈಲು, ,ಐವರ್ನಾಡು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ರವಿಪ್ರಸಾದ್ ಸಿ.ಕೆ ಹಾಗೂ ಪಂಚಾಯತ್ ಅಭಿವೃದ್ದಿ ಅಧಿಕಾರಿ ಯು.ಡಿ.ಶೇಖರ್, ಶರವಣ ಬೇಂಗಮಲೆ, ವಿನಯ ಕೋಡ್ತಿಲು, ,ಪ್ರಭಾಕರ ಕುತ್ಯಾಡಿ,ಗೋಪಾಲ ಚೆಮ್ನೂರು, ಪ್ರಮೋದ್ ಕಣಿಲೆಗುಂಡಿ, ಸತ್ಯಶೀಲನ್ , ಸಂಪ್ರಿತ್ ಮಿತ್ತಮೂಲೆ, ಶಿವಪ್ರಸಾದ್ ಕಟ್ಟತ್ತಾರು,ಕಿಶನ್ ಜಬಳೆ , ನಟರಾಜ ಸಿ-ಕೂಪ್ ಮತ್ತು ಐವರ್ನಾಡು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಮಾಜಿ ನಿರ್ದೇಶಕರಾದ ಕಿಶನ್ ಜಬಳೆ ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.