ಬಾಳಿಲದ ಖ್ಯಾತ ವೈದ್ಯ ಪಿ.ಜಿ.ಎಸ್.ಪ್ರಕಾಶ್ ಇನ್ನಿಲ್ಲ

Advt_Headding_Middle
Advt_Headding_Middle

ಪಂಡಿತರೆಂದೇ ಪ್ರಸಿದ್ಧಿಯನ್ನು ಪಡೆದಿದ್ದ ಬಾಳಿಲದ ದಿ. ಪಾಟಾಜೆ ಗೋವಿಂದಯ್ಯನವರ ಪುತ್ರ ಬಾಳಿಲದಲ್ಲಿ ಚಿಕಿತ್ಸಾ ಕ್ಲಿನಿಕನ್ನು ನಡೆಸುತ್ತಿದ್ದ ವೈದ್ಯ ಡಾ. ಪಿ.ಜಿ.ಎಸ್. ಪ್ರಕಾಶ್ ಇಂದು ರಾತ್ರಿ ಹೃದಯಾಘಾತದಿಂದ ನಿಧನರಾದರು. ಅವರಿಗೆ 59 ವರ್ಷ ವಯಸ್ಸಾಗಿತ್ತು. ಮೃತರು ಹಲವಾರು ವರ್ಷಗಳಿಂದ ಕ್ಲಿನಿಕ್ ನಡೆಸುತ್ತಿದ್ದು, ಕಳಂಜ, ಬಾಳಿಲ, ಮುಪ್ಪೇರ್ಯ ಸೇರಿದಂತೆ ಸುತ್ತ ಮುತ್ತಲಿನ ಜನರಿಗೆ ಕಡಿಮೆ ದರದಲ್ಲಿ ಚಿಕಿತ್ಸೆ ನೀಡುತ್ತಾ ಜನಾನುರಾಗಿ ವೈದ್ಯರಾಗಿದ್ದರು. ಮೃತರು ಪತ್ನಿ ಶ್ರೀಮತಿ ಲತಾ ಪ್ರಕಾಶ್, ಓರ್ವ ಪುತ್ರ ನಿಖಿಲ್ ಗೋವಿಂಂದ, ಸಹೋದರರಾದ ಪಿ.ಜಿ.ಎಸ್.ಎನ್. ಪ್ರಸಾದ್, ಡಾ. ಪಿ.ಜಿ.ಎಸ್. ಪ್ರಸನ್ನ, ಓರ್ವ ಸಹೋದರಿ ಶ್ರೀಮತಿ ಲಲಿತಾ ಭೀಮ ಭಟ್ ಸೇರಿದಂತೆ ಕುಟುಂಬ ವರ್ಗವನ್ನು ಅಪಾರ ಅಭಿಮಾನಿಗಳನ್ನು ಅಗಲಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.