*ಡಾ.ಪಿ.ಜಿ.ಎಸ್. ಪ್ರಕಾಶ್ ಅಂತ್ಯಕ್ರಿಯೆ ನಾಳೆ ಬೆಳಿಗ್ಗೆ*

Advt_Headding_Middle
Advt_Headding_Middle

ಇಂದು ರಾತ್ರಿ ಎಂಟು ಗಂಟೆ ಸುಮಾರಿಗೆ ಧಿಡೀರನೆ ಹೃದಯಾಘಾತದಿಂದ ನಿಧನರಾದ ಬಾಳಿಲದ ಜನಪ್ರಿಯ ವೈದ್ಯ ಡಾ.ಪಿ.ಜಿ.ಎಸ್.ಪ್ರಕಾಶ್ ರವರ ಅಂತ್ಯಕ್ರಿಯೆ ನಾಳೆ ಬೆಳಿಗ್ಗೆ ನಡೆಯಲಿದೆ ಎಂದು ಕುಟುಂಬದ ಮೂಲದಿಂದ ತಿಳಿದುಬಂದಿದೆ.
ಬಾಳಿಲ, ಮುಪ್ಪೇರ್ಯ, ಕಳಂಜ ಪರಿಸರದಲ್ಲಿ ಅತ್ಯಂತ ಜನಪ್ರಿಯರಾಗಿದ್ದ ಡಾ.ಪ್ರಕಾಶ್ ರವರು , ಯಾವ ಹೊತ್ತಿನಲ್ಲಿ ಜನರು ಬಂದು ಕರೆದರೂ ಹೋಗಿ ಚಿಕಿತ್ಸೆ ನೀಡುತ್ತಿದ್ದರು. ಬೇಸರಿಸಿಕೊಳ್ಳುತ್ತಿರಲಿಲ್ಲ. ನಗುಮುಖದಿಂದ ಸೇವೆ ನೀಡುತ್ತಿದ್ದರು.
ಇಂದು ರಾತ್ರಿ ಎಂಟು ಗಂಟೆಯ ವರೆಗೆ ತನ್ನ ಮನೆಯ ಸಮೀಪವೇ ಇರುವ ಕ್ಲಿನಿಕ್ ನಲ್ಲಿ ರೋಗಿಗಳಿಗೆ ಮದ್ದು ನೀಡಿದ ಅವರು ಕೊನೆಯ ರೋಗಿಯನ್ನು ಕಳಿಸಿ ಮನೆಗೆ ಹೋದವರು ಮತ್ತೆ ಗೇಟು ವರೆಗೆ ಬಂದು ಗೇಟು ಮುಚ್ಚಿ ಕ್ಲಿನಿಕ್ ಮುಚ್ಚಲು ಬಂದರು. ಆ ವೇಳೆಗೆ ಅವರಿಗೆ ತೀವ್ರ ಹೃದಯಾಘಾತವಾಗಿ ಕುಸಿದು ಬಿದ್ದರೆನ್ನಲಾಗಿದೆ . ಕ್ಲಿನಿಕ್ ನ ಶಟರ್ ಎಳೆದ ಶಬ್ದ ಕೇಳಿ ತುಂಬ ಹೊತ್ತಾದರೂ ಇವರೇನು ಇನ್ನೂ ಬಂದಿಲ್ಲ ಎಂದು ಪತ್ನಿ ತಮ್ಮ ಮನೆಯಲ್ಲಿ ಅಡಿಕೆ ಸುಲಿಯುತ್ತಿದ್ದ ರಾಮಣ್ಣ ಎಂಬವರಲ್ಲಿ ನೋಡಿ ಬರಲು ಕಳುಹಿಸಿದರು. ರಾಮಣ್ಣರು ಬಂದಾಗ ಕ್ಲಿನಿಕ್ ಎದುರು ಡಾಕ್ಟ್ರು ಬಿದ್ದಿದ್ದರೆನ್ನಲಾಗಿದೆ. ಗಾಬರಿಯಾದ ಅವರು ತಕ್ಷಣ ಮನೆಯವರನ್ನು ಕರೆದರು. ಬಳಿಕ ಪಿ.ಜಿ.ಎಸ್.ಎನ್.ಪ್ರಸಾದ್ ರನ್ನು ಕರೆಯಲಾಯಿತು. ಎಲ್ಲರೂ ಸೇರಿ ಕೂಡಲೆ ಆಸ್ಪತ್ರೆಗೆಂದು ಕೊಂಡೊಯ್ದರು. ಆದರೆ ಆ ವೇಳೆಗೆ ಅವರು ಕೊನೆಯುಸಿರೆಳೆದಿರುವುದು ಖಚಿತಪಟ್ಟಿತೆನ್ನಲಾಗಿದೆ. ಬಳಿಕ ಮನೆಗೆ ವಾಪಸ್ ತರಲಾಯಿತು.

ಅವರ ಹಠಾತ್‌ ಅಗಲಿಕೆ ತಿಳಿದು ಅಘಾತಕ್ಕೊಳಗಾದ ಸ್ಥಳೀಯರು ನೂರಾರು ಸಂಖ್ಯೆಯಲ್ಲಿ ಸೇರತೊಡಗಿದಾಗ ಅವರ ಅಣ್ಣ ಪ್ರಸಾದ್ ರವರು ನೀವು ಇಷ್ಟುಸಂಖ್ಯೆಯಲ್ಲಿ ಇಲ್ಲಿ ಇವತ್ತು ಸೇರುವುದು ಬೇಡ. ಅಂತ್ಯಸಂಸ್ಕಾರ ನಾಳೆ ಬೆಳಿಗ್ಗೆ ಮಾಡುತ್ತೇವೆ ಎಂದು ಹೇಳಿ ಜನರನ್ನು ವಾಪಸ್ ಕಳುಹಿಸುತ್ತಿದರೆಂದು ತಿಳಿದಿಬಂದಿದೆ.
ವಿಷಯ ತಿಳಿದು ಆಗಮಿಸಿದ ಬೆಳ್ಳಾರೆ ಠಾಣಾಧಿಕಾರಿ ಆಂಜನೇಯ ರೆಡ್ಡಿ ಮತ್ತು ಸಿಬ್ಬಂದಿ ವರ್ಗ, ಹೊಯ್ಸಳ ಪಡೆಯ ಸಿಬ್ಬಂದಿ ಜನರು ಹೆಚ್ಚು ಸೇರದಂತೆ ವಿನಂತಿಸಿ ಅಲ್ಲಿ ಸೇರಿದ್ದವರನ್ನು ಕಳುಹಿಸಿದರು.

ಸುಳ್ಯ ಶಾಸಕ ಎಸ್. ಅಂಗಾರ, ರಾಷ್ಟ್ರೀಯ ಸ್ವಯಂ ಸೇವಾ ಸಂಘದ ವಿಭಾಗ ಕಾರ್ಯವಾಹ ನ. ಸೀತಾರಾಮ ಸೇರಿದಂತೆ ಅನೇಕ ಗಣ್ಯರು, ಜನಪ್ರತಿನಿಧಿಗಳು, ಸಂಘ ಸಂಸ್ಥೆಗಳ ಮುಖಂಡರು ಬರುತ್ತಲೇ ಇದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.