HomePage_Banner
HomePage_Banner
HomePage_Banner
HomePage_Banner

ಅರಂತೋಡು -ತೊಡಿಕಾನ ಸೊಸೈಟಿ ವತಿಯಿಂದ ರೈತಸ್ನೇಹಿ ಯೋಜನೆ ಪ್ರಾರಂಭ

ಜಾಗತಿಕ ಪಿಡುಗು, ಸಾಂಕ್ರಾಮಿಕ ರೋಗ ಕೋವಿಡ್-೧೯ ಕೊರೊನಾದಿಂದಾಗಿ ತಲ್ಲಣಿಸಿರುವ ಈ ಸಂದರ್ಭದಲ್ಲಿ ದೇಶದ ಬೆನ್ನೆಲುಬಾಗಿರುವ, ಅನ್ನದಾತನು ಬೆಳೆದ ಬೆಳೆಗಳನ್ನು ಮಾರಾಟ ಮಾಡಲಾಗದೇ, ಮಾರಿದರೂ ನ್ಯಾಯಯುತವಾದ ಬೆಲೆ ದೊರಕದೆ ಕಂಗಾಲಾಗಿದ್ದು, ಇನ್ನು ಮುಂಗಾರು ಪ್ರಾರಂಭವಾಗಿ ಕೃಷಿ ಚಟುವಟಿಕೆಗಳು ಚುರುಕಾಗಲಿವೆ. ಕೃಷಿಕರು ತೀವ್ರತರವಾದ ಆರ್ಥಿಕ ಸಂಕಷ್ಟದಿಂದ ತಮ್ಮ ಕೃಷಿ ಚಟುವಟಿಕೆಗಳನ್ನು ಆರಂಭಿಸಲು ಅಸಾಧ್ಯವಾದ ಈ ಸಂದರ್ಭದಲ್ಲಿ ಅರಂತೋಡು -ತೊಡಿಕಾನ ಸಂಘದ ವ್ಯಾಪ್ತಿಯ ಕೃಷಿಕರಿಗೆ ನೆರವಾಗುವ ದೃಷ್ಟಿಯಿಂದ ರೈತಸ್ನೇಹಿ ಯೋಜನೆಯೊಂದನ್ನು ಅರಂತೋಡು-ತೊಡಿಕಾನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ವತಿಯಿಂದ ಪ್ರಾರಂಭಿಸಲಾಗಿದೆ.

ಈ ಯೋಜನೆಯ ವಿವರಗಳು ಈ ಕೆಳಗಿನಂತಿವೆ.

೧. ಸಂಘದ ಸದಸ್ಯರಿಗೆ ಗೊಬ್ಬರ ಮತ್ತು ಕೃಷಿ ಉಪಕರಣ ಖರೀದಿ ಸಾಲವನ್ನು ಗರಿಷ್ಟ ರೂ. ಒಂದು ಲಕ್ಷದ ವರೆಗೆ ಒಟ್ಟು ೩ ತಿಂಗಳ ಅವಧಿ ಮೀರದಂತೆ ವಿತರಿಸಲಾಗುತ್ತದೆ.

೨. ಮೊದಲ ೪೫ ದಿನಗಳವರೆಗೆ ಶೂನ್ಯ ಬಡ್ಡಿದರದಲ್ಲಿ ಗೊಬ್ಬರ ಮತ್ತು ಕೃಷಿ ಉಪಕರಣಗಳನ್ನು ನೀಡಲಾಗುತ್ತದೆ. ಸದಸ್ಯರು ಅಪೇಕ್ಷೆಪಟ್ಟಲ್ಲಿ ಮುಂದಿನ ೪೫ ದಿನಗಳಿಗೆ ಆಕರ್ಷಕ ಬಡ್ಡಿದರದೊಂದಿಗೆ ಸಾಲವನ್ನು ಮರುಪಾವತಿಸಬೇಕಾಗುತ್ತದೆ.

೩. ನಮ್ಮ ಸಹಕಾರ ಸಂಘದಲ್ಲಿ ಬೆಳೆಸಾಲ ಹೊಂದಿರುವ ರೈತರಿಗೆ ಮಾತ್ರ ಈ ಯೋಜನೆ ಅನ್ವಯವಾಗುತ್ತದೆ.

೪. ಈ ಯೋಜನೆಯ ಫಲಾನುಭವಿಗಳಾಗಲು ದಿನಾಂಕ ೧೦.೦೩.೨೦೨೦ರಂದು ಸದಸ್ಯರು ಸಹಕಾರ ಸಂಘದಲ್ಲಿ ಸುಸ್ತಿದಾರರಾಗಿರತಕ್ಕದ್ದಲ್ಲ.

೫. ಒಂದು ಕುಟುಂಬಕ್ಕೆ ಒಬ್ಬ ಸದಸ್ಯರಿಗೆ ಮಾತ್ರ ಈ ಯೋಜನೆ ಅನ್ವಯವಾಗುತ್ತದೆ. (ಕುಟುಂಬವೆಂದರೆ ಪಡಿತರ ಚೀಟಿಯ ಆಧಾರದಲ್ಲಿ ವ್ಯಾಖ್ಯಾನಿಸಲಾಗುತ್ತದೆ.)

೬. ಹೆಚ್ಚಿನ ಮಾಹಿತಿಯನ್ನು ಸಂಘಕ್ಕೆ ಭೇಟಿ ನೀಡಿ ಪಡಕೊಳ್ಳಬೇಕೆಂದು ಅರಂತೋಡು-ತೊಡಿಕಾನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಸಂತೋಷ್ ಕುತ್ತಮೊಟ್ಟೆ ತಿಳಿಸಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.