HomePage_Banner
HomePage_Banner
HomePage_Banner
HomePage_Banner

ಅಮ್ಮನ ಸ್ಮರಣೆಯೊಂದು ಸಾಲದು

 


* ಜಗದ ಒಲವ ಬಣ್ಣಿಸಲು ಕವಿಗಳು ನೂರು ಬೇಕು….ತಾಯಿ ಎನ್ನುವ ಮಹಾಕಾವ್ಯಕ್ಕೆ “ಅಮ್ಮ” ಎಂದರೆ ಸಾಕು.

ಜೀವನದಲ್ಲಿ ಅದೆಷ್ಟೋ ಕಷ್ಟಗಳು ಬರಬಹುದು, ಅದೆಷ್ಟೋ ಸಂತೋಷಗಳು ನಮ್ಮದಾಗಿರಬಹುದು, ಪ್ರತಿಯೊಂದು ಕ್ಷಣದ ಸವಿಯನ್ನು ಹೇಳಿಕೊಳ್ಳಬೇಕು ಎನಿಸುವುದು ಅದು ಅಮ್ಮನ ಹತ್ತಿರ ಮಾತ್ರ. ಯಾಕೆಂದ್ರೆ ಆಕೆ ಅಮ್ಮ.ಬದುಕಿನ ತಲ್ಲಣಗಳ ನಡುವೆ ಪ್ರತಿಯೊಂದು ಕ್ಷಣದಲ್ಲೂ ತನ್ನ ಪಾತ್ರ ಬದಲಿಸುತ್ತಾ ಇರುತ್ತಾಳೆ. ಅಮ್ಮನಾಗಿ, ಅನಿವಾರ್ಯ ಬಂದಾಗ ಅಪ್ಪನಾಗಿಯೂ, ಅಕ್ಕನಾಗಿ ,ಸ್ನೇಹಿತೆಯಾಗಿ, ಎಲ್ಲಾ ಪಾತ್ರಗಳಿಗೂ ಜೀವ ತುಂಬುವವಳು ಅವಳು. ಸದಾ ಇನ್ನೊಬ್ಬರ ಏಳಿಗೆಗಾಗಿಯೇ ಜೀವ ಸವೆಸುವ ಅಮ್ಮತನಗಾಗಿ ಯಾವುದೇ ಸ್ವಾರ್ಥವನ್ನು ಬಯಸಳು ಈ ಭೂಮಿಯಲ್ಲಿ, ಕೆಟ್ಟವರು, ಕೊಲೆಗಡುಕರು, ಅಪರಾಧಿಗಳು , ಇರುತ್ತಾರೆ. ಆದರೆ ಭೂಮಿ ತಾಯಿ ಕೆಟ್ಟವಳೆಂದು ದೂಷಿಸುತ್ತಾರೆಯೇ? ಅದಕ್ಕೆ ಹೇಳುವುದು ಅಮ್ಮ ಕ್ಷಮೆಯ ಧರಿತ್ರಿ ಅಂಥ.. ಕೆಟ್ಟ ಮಕ್ಕಳಿರಬಹುದು ಆದರೆ ಕೆಟ್ಟ ತಾಯಿ ಇರಲು ಸಾಧ್ಯವೇ ಇಲ್ಲ. ತಾಯಿ ಬರೀ ತಾಯಲ್ಲ ಆಕೆ ಎಲ್ಲಾ ರೀತಿಯ ಪಾಪ-ಕರ್ಮಗಳಿಗೆ ಈಡಾಗಿಯೂ, ದೌರ್ಜನ್ಯಕ್ಕೆ ತುತ್ತಾಗಿಯೂ, ಅವನೆಲ್ಲ ಒಡಲೊಳಗೆ ಅದುಮಿಕೊಂಡು, ಹೊರಗೆ ಕಲೆಕಟ್ಟುವ ಭೂಮಿ ತಾಯಿಯಂತೆ ಕ್ಷಮಾ ಗುಣಸಾಗರಿಯಾಗಿರುತ್ತಾಳೆ.

ನಾವು ನಡೆಯುವ ಪ್ರತಿಯೊಂದು ಹೆಜ್ಜೆಯಲ್ಲೂ ಅಮ್ಮ ಬಾಳ ದೀವಿಗೆಯಾಗುತ್ತಾಳೆ ಅಥವಾ ಆಕೆ ಹಾಕಿಕೊಟ್ಟ ಹೂವಿನ ಹಾಸು ನಮ್ಮಗೆ ದಾರಿ ದೀವಿಗೆಯಾಗುತ್ತದೆ. ಮಾಡುವ ಪ್ರತಿಯೊಂದು ಕೆಲಸ-ಕಾರ್ಯದಲ್ಲಿಯೂ ಅಮ್ಮನೆಂಬ ತ್ಯಾಗಮಯಿಯ ಬೆವರು, ಕಣ್ಣೀರು, ರಕ್ತವಿರುತ್ತದೆ. ಆ ಕರುಣಾಮಯಿಯ ಛಾಪು ಖಂಡಿತಾ ಇರುತ್ತದೆ. ಅದಕ್ಕಿಂತ ಹೆಚ್ಚಾಗಿ ನನ್ನ ಮಗು ಮುಂದೆ ಚೆನ್ನಾಗಿ ಬೆಳೆದು ಸಮಾಜದಲ್ಲಿ ಗೌರವಯುತವಾಗಿ ಬಾಳುವಂತಾಗಬೇಕೆಂಬ ಅದಮ್ಯ ತುಡಿತವಿರುತ್ತದೆ. ಇಂದು ನಾವು ಜೀವನದಲ್ಲಿ ಏನಾದರೂ ಸಾಧನೆ ಮಾಡಿರಬಹುದು. ಅದರ ಹಿಂದೆ ಅಮ್ಮ ಎಂಬ ಎರಡಕ್ಷರದ ಚೈತನ್ಯ ಅಡಗಿದೆ.. ಹಲವಾರು ಜೀವನದ ಜಂಜಾಟಗಳಿಗೆ, ಸಾಹಸಕ್ಕೆ ಕೈಜೋಡಿಸುವ ತಾಯಿ ಕೇವಲ ಸಂಬಂಧದ ಸೃಷ್ಟಿಕರ್ತಳಲ್ಲ. ಅವಳು ನಮ್ಮ ಪಾಲಿಗೆ ದೇವತೆಯಾಗುತ್ತಾಳೆ. ಮಕ್ಕಳ ನೋವುಗಳಿಗೆ, ಕಿವಿಯಾಗುವ,ನಲಿವುಗಳಿಗೆ ದನಿಗೂಡಿಸುವ, ಕರುಳ ಕುಡಿ ನಕ್ಕಾಗ ಅಕ್ಕರೆಯಿಂದ ಸಂಭ್ರಮಿಸುವ, ಮುಖ ಬಾಡಿಸಿದಾಗ ಒಳಗೊಳಗೇ ಮುದುಡುವವಳು ಅಮ್ಮ…
ಬದುಕಿನ ಯಾವುದೋ ಒಂದು ಹಂತದಲ್ಲಿ ನಾವು ತೇಲಾಡುವ ಖುಷಿಯಲ್ಲಿ ತಾಯಿಯನ್ನೇ ಮರೆತಿರುತ್ತೇವೆ. ಆದರೆ ತಾಯಿ ತನಗುಂಟಾದ ದುಃಖವನ್ನು ಎಲ್ಲರಿಂದಲೂ ಮುಚ್ಚಿಡುತ್ತಾಳೆ. ಅದೇ ಸಂತೋಷವನ್ನ ಎಲ್ಲರನ್ನೂ ಕರೆದು ಹಂಚಿಕೊಳ್ಳುತ್ತಾಳೆ
“ಅದಕ್ಕಾಗಿಯೇ ಅಲ್ವ ಆಕೆಯನ್ನ ಅಮ್ಮಾ… ಎನ್ನುವುದು”?.

* ಎಷ್ಟು ಹೇಳಿದರೂ ಮುಗಿಯದ , ಎಷ್ಟು ವರ್ಣಿಸಿದರು ಸಾಲದ, ಎಂದೂ ತೀರಿಸಲಾಗದ ಋಣದ,
ನಮ್ಮ ದುಃಖವನ್ನು ಎಂದೂ ಬಯಸದವಳು ತಾಯಿ….

*ನೀವು ಬಹಳಷ್ಟು ಪಾಪ ಮಾಡಿದ್ದಿರೆಂದು, ದೇವರಲ್ಲಿ ಕ್ಷಮೆಯಾಚಿಸಬೇಕೆಂದು ಪುಣ್ಯ ಕ್ಷೇತ್ರಗಳಿಗೆ ಅಲೆಯ ಬೇಕಿಲ್ಲ ಮನೆಯಲ್ಲಿರುವ ತಾಯಿಯ ಸೇವೆ ಮಾಡಿ. ಆಗಲೇ ನೀವು ಪುಣೀತರಾಗತ್ತೀರಿ.

* ತ್ಯಾಗ,ಪೀತಿ ಮಮಕಾರಕೆ ನೀನೆ ಮೂರ್ತ ರೂಪ ಅಮ್ಮ..ನಿನ್ನ ಪ್ರೇಮ ಸಾಗರದ ನಡುವೆ ನಾನೊಂದು ಸ್ವಾರ್ಥಿ ದೀಪ ಅಮ್ಮ….

* ತಾಯಿಯ ಪ್ರೀತಿಗೆ ಕೊನೆ ಎಂಬುದೇ ಇಲ್ಲ ಯಾಕೆಂದರೆ ಅವಳೇ ನನ್ನ ಜೀವಕ್ಕೆಲ್ಲಾ ಅಮ್ಮ…..

ಪ್ರತಿ ಕ್ಷಣವೂ ನಮ್ಮವರಿಗಾಗಿ ಚಿಂತಿಸುವ ತಾಯಿಂದಿರಿಗೆ ಒಂದು ದಿನ ಸೀಮಿತಗೊಳಿಸಿದರೆ ಸಾಲದು.
ಪ್ರತಿ ಕ್ಷಣ ,ಪ್ರತಿ ದಿನವೂ ಆಕೆಯ ಪ್ರೀತಿ, ಶ್ರಮ,ತ್ಯಾಗ,ವನ್ನು ನಾವು ನೆನೆಯಬೇಕು

ಪೂಜಾ. ಬಿ. ಬೇರ್ಯ
ಪಂಜ ಮನೆ
ದ್ವಿತೀಯ. ಬಿ. ಎ
ಸರಕಾರಿ ಪ್ರಥಮ ದರ್ಜೆ ಕಾಲೇಜು ಸುಳ್ಯ

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.