HomePage_Banner
HomePage_Banner
HomePage_Banner
HomePage_Banner

ತೋಟಗಾರಿಕಾ ಇಲಾಖೆಯಿಂದ ರೈತರಿಗೆ ವಿವಿಧ ಸವಲತ್ತುಗಳು

೧)ಹೂ ಬೆಳೆಗಾರರರಿಗೆ ಪರಿಹಾರ:
ಕೋವಿಡ್-೧೯ ಹಿನ್ನೆಲೆಯಲ್ಲಿ ವಿಧಿಸಿದ ಲಾಕ್ ಡೌನ್‌ನಿಂದ ಹೂವಿನ ಬೆಳೆಗಾರರಿಗೆ ಉಂಟಾದ ನಷ್ಟಕ್ಕೆ ಪರಿಹಾರ ನೀಡುವ ಸಲುವಾಗಿ ರಾಜ್ಯ ಸರ್ಕಾರವು ಹೂವು ಬೆಳೆದಿರುವ ರೈತರಿಗೆ ಪ್ರತೀ ಹೆಕ್ಟೇರಿಗೆ(ಎರಡೂವರೆ ಎಕರೆ) ಗರಿಷ್ಟ 25,೦೦೦.೦೦ ರೂ.ಗಳಂತೆ ಪರಿಹಾ ನೀಡಲು ಕಾರ್ಯಕ್ರಮ ಜಾರಿಗೆ ತಂದಿದೆ.
2019-20 ನೇ ಸಾಲಿನಲ್ಲಿ ಕೈಗೊಂಡ ಬೆಳೆ ಸಮೀಕ್ಷೆ ದತ್ತಾಂಶಗಳ ಆಧಾರದಲ್ಲಿ ದಾಖಲಾದ ರೈತರಿಗೆ ಪರಿಹಾರ ನೀಡಲು ಕ್ರಮವಹಿಸಲಾಗುತ್ತಿದೆ.ಈ ಹಿನ್ನೆಲೆಯಲ್ಲಿ ಸುಳ್ಯ ತಾಲೂಕಿನಲ್ಲಿ ಎಣ್ಮೂರು ಗ್ರಾಮಪಂಚಾಯತ್ ವ್ಯಾಪ್ತಿಯಲ್ಲಿ ಮಲ್ಲಿಗೆ ಬೆಳೆಗಾರರಿದ್ದು ಹೂವು ಬೆಳೆದಿರುವ ರೈತರ ವಿವರಗಳನ್ನು ಸಾರ್ವಜನಿಕರ ಅವಗಾಹನೆಗೆ ಗ್ರಾಮ ಪಂಚಾಯತ್ ಹಾಗೂ ರೈತ ಸಂಪರ್ಕ ಕೇಂದ್ರ ಪಂಜದಲ್ಲಿ ಪ್ರಕಟಿಸಲಾಗಿದೆ. ಈ ಪಟ್ಟಿಗೆ ಯಾವುದೇ ಆಕ್ಷೇಪಣೆಗಳಿದ್ದಲ್ಲಿ ಮೇ ೨೭ರೊಳಗೆ ಬರಹ ಮೂಲಕ ಸುಳ್ಯ ತಾಲೂಕಿನ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರ ಕಛೇರಿಗೆ ಅಥವಾ ಆಯಾ ರೈತ ಸಂಪರ್ಕ ವ್ಯಾಪ್ತಿಯ ಸಹಾಯಕ ತೋಟಗಾರಿಕೆ ಅಧಿಕಾರಿಗಳಿಗೆ ಸಲ್ಲಿಸಬೇಕು.
ಪಟ್ಟಿಯಲ್ಲಿ ಯಾವುದೇ ಕಾರಣಕ್ಕೆ ಬಿಟ್ಟು ಹೋದ ಹೂವಿನ ಬೆಳೆ ಕೈಗೊಂಡಿರುವ ಕೃಷಿಕರಿದ್ದಲ್ಲಿ ನಿಗಧಿತ ನಮೂನೆಯಲ್ಲಿ ಹೂವು ಬೆಳೆ ಬೆಳೆದಿರುವ ಜಮೀನಿನ ಆರ್.ಟಿ.ಸಿ.ಯೊಂದಿಗೆ ಆಧಾರ್ ಕಾರ್ಡ್, ಸ್ವಯಂ ದೃಢಿಕೃತ ಘೋಷಣಾ ಪ್ರಮಾಣ ಪತ್ರ, ರೈತರ ಬ್ಯಾಂಕ್ ಪಾಸ್ ಪುಸ್ತಕದ ಜೆರಾಕ್ಸ್ ಪ್ರತಿಯೊಂದಿಗೆ ಅರ್ಜಿ ಸಲ್ಲಿಸಬೇಕು.
ಜಂಟಿ ಖಾತೆಯಾಗಿದ್ದಲ್ಲಿ ಅಥವಾ ಜಮೀನಿನ ಒಡೆತನ ಹೊಂದಿದವರು ಮರಣ ಹೊಂದಿರುವ ಸಂದರ್ಭ ಸೂಕ್ತ ದೃಢೀಕರಣಗಳೊಂದಿಗೆ ಅರ್ಜಿಯನ್ನು ಮೇ ೨೮ ರೊಳಗೆ ಸುಳ್ಯ ತಾಲೂಕಿನ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರ ಕಛೇರಿಗೆ ಅಥವಾ ಆಯಾ ರೈತ ಸಂಪರ್ಕ ವ್ಯಾಪ್ತಿಯ ಸಹಾಯಕ ತೋಟಗಾರಿಕೆ ಅಧಿಕಾರಿಗಳಿಗೆ ಸಲ್ಲಿಸಬೇಕು.
ತಾಲೂಕು ಹಾಗೂ ಜಿಲ್ಲಾ ಸಮಿತಿಗಳಿಂದ ಅನುಮೋದಿತವಾದ ಎಲ್ಲಾ ಫಲಾನುಭವಿಗಳಿಗೆ ಹೂವಿನ ಬೆಳೆ ಆವರಿಸಿರುವ ಪ್ರದೇಶಕ್ಕೆ ಪ್ರತಿ ಸಂಟ್ಸ್‌ಗೆ ನೂರು ರೂಪಾಯಿನಂತೆ ಗರಿಷ್ಟ 5.5 ಎಕರೆಗೆ 25 ಸಾವಿರ ರೂ ಗರಿಷ್ಟ ಪರಿಹಾರ ಧನವನ್ನು ಬೆಳೆಗಾರರ ಆಧಾರ ಕಾರ್ಡ್‌ಗೆ ಲಿಂಕ್ ಆಗಿರುವ ಬ್ಯಾಂಕ್ ಖಾತೆಗಳಿಗೆ ನೇರವಾಗಿ ಸಂದಾಯ ಮಾಡಲಾಗುವುದು.
೨)ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ
ಒಉಓಖಇಉಂ ಯೋಜನೆಯಡಿ ಸ್ಥಳೀಯ ಮಾವಿನ ಕಸಿಗಳು ಲಭ್ಯವಿದ್ದು, ಆಸಕ್ತ ರೈತರು ಒಉಓಖಇಉಂ ಯೋಜನೆಯಡಿ,ಉದ್ಯೋಗ ಚೀಟಿ,ಪಡಿತರ ಚೀಟಿ/BPL ದಾರರಿಗೆ)/ಜಾತಿ ಪ್ರಮಾಣ ಪತ್ರ(SC,ST ರೈತರಿಗೆ)/ಸಣ್ಣ,ಅತೀಸಣ್ಣ ರೈತ ಪ್ರಮಾಣ ಪತ್ರ(ಇತರರಿಗೆ) ದೊಂದಿಗೆ ಅರ್ಜಿ ನೀಡಿ ಉಚಿತವಾಗಿ ಗಿಡಗಳನ್ನು ಪಡಕೊಂಡು ಗುಂಡಿ ಮಾಡಿ ಗಿಡ ನೆಡಲು ಕೂಲಿ ವೆಚ್ಚವನ್ನು ಸಹ ಪಡೆದುಕೊಳ್ಳಬಹುದು. ದಿನಾಂಕ: 30/5/2020 ರೊಳಗಾಗಿ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರ ಕಛೇರಿಯಲ್ಲಿ ಅರ್ಜಿ ನೀಡುವುದು.

೩)ಅಡಿಕೆ, ಕಾಳುಮೆಣಸು, ಕೋಕೋ, ತೆಂಗು ಬೆಳೆಗಳ ಕೊಳೆರೋಗ ನಿಯಂತ್ರಣದಲ್ಲಿ ಬೋರ್ಡೋ ದ್ರಾವಣ
ದಕ್ಷಿಣ ಕನ್ನಡ ಜಿಲ್ಲೆಯ ಜೀವನಾಡಿ ತೋಟಗಾರಿಕಾ ಬೆಳೆಗಳಾದ ಅಡಿಕೆ, ತೆಂಗು, ಕಾಳುಮೆಣಸು, ಕೊಕೋಗಳಿಗೆ ಮಳೆಗಾಲದ ಸಮಯದಲ್ಲಿ ಕೊಳೆ ರೋಗ ತಗಲಿ ಪ್ರತೀ ವರ್ಷ ವ್ಯಾಪಕ ಹಾನಿಯನ್ನು ಉಂಟುಮಾಡುತ್ತಿರುವುದು ನಮಗೆಲ್ಲ ತಿಳಿದಿರುವ ವಿಷಯವೇ. ಮಳೆಗಾಲದ ಸಮಯದಲ್ಲಿ ಬಿಟ್ಟು ಬಿಟ್ಟು ಸುರಿಯುವ ಮಳೆಯಿಂದಾಗಿ ಈ ರೋಗ ಭಾದೆ ವ್ಯಾಪಕವಾಗಿ ಹರಡುತ್ತ ಬಹಳಷ್ಟು ಸಲ ಕೃಷಿಕರು ಇದನ್ನು ನಿಯಂತ್ರಿಸಲು ಹರ ಸಾಹಸ ಪಡುತ್ತಿರುವುದು ಹಾಗೂ ಇದರಲ್ಲಿ ಸಫಲತೆ ಹಾಗೂ ವಿಫಲಗಳನ್ನು ಮಿಶ್ರವಾಗಿ ಅನುಭವಿಸುತ್ತಿರುತ್ತಾರೆ. ಈ ರೀತಿಯಾಗಿ ನಷ್ಟತರುವ ಕೊಳೆ ರೋಗವನ್ನು ಹರಡುವ ಸೂಕ್ಮಾಣು ಜೀವಿಗಳನ್ನು ನಿಯಂತ್ರಿಸಲು ಬಹಳಷ್ಟು ವಿಧಿವಿಧಾನಗಳು ಪ್ರಚಲಿತದಲ್ಲಿದ್ದರೂ ತಲೆತಲಾಂತರದಿಂದ ತಿಳಿದುಬಂದ ಸರ್ಮಪಕ, ಸಮಿಶ್ರ ಬೋರ್ಡೋ ದ್ರಾವಣದಷ್ಟು ಉಪಯುಕ್ತ ಹಾಗೂ ಪರಿಣಾಮಕಾರಿಯಾದಷ್ಟು ಇತರೆ ವಿಧಾನಗಳು ಧೀರ್ಘಕಾಲೀನ ಪರಿಣಾಮಗಳನ್ನು ಕೊಟ್ಟಿರುವುದು ಸಂಶೋಧನೆಗಳಿಂದ ದೃಢಪಟ್ಟಿರುವುದಿಲ್ಲ. ಈ ಔಷಧಿಯ ಬಳಕೆ ಅಷ್ಟೇ ಅಲ್ಲದೆ ಆ ರೋಗಾಣುವನ್ನು ತಡೆಗಟ್ಟಲು ಅನುಸರಿಸಬೇಕಾದ ವಿಧಿವಿಧಾನಗಳನ್ನು ಕೂಡಾ ಕೃಷಿಕರು ಅರ್ಥೈಸಿಕೊಂಡು ಅಷ್ಟೇ ಸರ್ಮಪಕ ಹಾಗೂ ಕ್ರಮಬದ್ದವಾಗಿ ಅನುಸರಿಸುವುದು ಅತೀ ಅಗತ್ಯವಾಗಿದೆ. ರೋಗ ನಿಯಂತ್ರಣದಲ್ಲಿ ರೋಗ ಹರಡುವುದನ್ನು ತಡೆಗಟ್ಟಲು ಅನುಸರಿಸುವ ಮುಂಜಾಗ್ರತಾ ಕ್ರಮಗಳಿಗೆ ಕೃಷಿಕರು ಪ್ರ್ರಾಮುಖ್ಯತೆಯನ್ನು ನೀಡಬೇಕಾದ ಬಗ್ಗೆ ಮನಗಾಣುವುದು ಅತೀ ಅಗತ್ಯ.
ಬೋರ್ಡೋ ದ್ರಾವಣ ತಯಾರಿಕೆ
ಮೇಲೆ ತಿಳಿಸಿದಂತೆ ಪರಿಣಾಮಕಾರಿಯಾದ ಬೋರ್ಡೋ ಮಿಶ್ರಣವನ್ನು ತಯಾರಿಸಲು ಅನುಸರಿಸಬೇಕಾದ ವಿಧಾನವನ್ನು ಈ ಕೆಳಗೆ ವಿವರಿಸಲಾಗಿದೆ. 1೦೦ ಲೀ. ಬೋರ್ಡೋ ಮಿಶ್ರಣ ತಯಾರಿಸಲು ಮೈಲುತ್ತುತ್ತು ಹರಳು ೧ ಕೆ.ಜಿ, ಉತ್ತಮಗುಣಮಟ್ಟದ ಚಿಪ್ಪು ಸುಣ್ಣ 1 ಕೆ.ಜಿ., ನೀರು 1೦೦ ಲೀ., ಪ್ಯಾಸ್ಟಿಕ್/ ಮಣ್ಣಿನ ಪಾತ್ರೆಗಳು, ಠಿಊ ಹ್ಢ್ಜಿಹ್ಙಿನಿ ಮುಂತಾದ ಸಾಮಾಗ್ರಿಗಳು ಅವಶ್ಯಕವಾಗಿದೆ.
ತಯಾರಿಕೆ:
ಬೋರ್ಡೋ ಮಿಶ್ರಣ ತಯಾರಿಸುವಾಗ ಮೈಲುತ್ತುತ್ತು ಹರಳು ಹಾಗೂ ಸುಣ್ಣವನ್ನು ಸಂಪೂರ್ಣವಾಗಿ ನೀರಿನಲ್ಲಿ ಕರಗಿಸುವ ಸಲುವಾಗಿ ಒಂದು ಪಾತ್ರೆಯಲ್ಲಿ ೧೦ ಲೀ. ನೀರಿನಲ್ಲಿ ೧ ಕೆ.ಜಿ. ಮೈಲುತ್ತುತ್ತಿನ ಹರಳುಗಳನ್ನು ಪ್ರತ್ಯೇಕವಾಗಿ ಕರಗಿಸಿ ದ್ರಾವಣ ತಯಾರಿಸಿಕೊಳ್ಳಬೇಕು. ಇನ್ನೊಂದು ಪಾತ್ರೆಯಲ್ಲಿ ೧೦ ಲೀ. ನೀರಿನಲ್ಲಿ ೧ ಕೆ. ಜಿ. ಉತ್ತಮಗುಣಮಟ್ಟದ ಚಿಪ್ಪು ಸುಣ್ಣವನ್ನು ಕರಗಿಸಿ ಸುಣ್ಣದ ನೀರನ್ನು ತಯಾರಿಸಬೇಕು. ನಂತರ ಈ ಎರಡು ಪಾತ್ರೆಗಳ ದ್ರಾವಣವನ್ನು ೮೦ ಲೀ. ನೀರಿರುವ ಮೂರನೆಯ ದೊಡ್ಡ ಪಾತ್ರೆಗೆ ನಿಧಾನವಾಗಿ, ಮರದ ಕೊಲಿನ ಸಹಾಯದಿಂದ ದ್ರಾವಣವನ್ನು ತಿರುಗಿಸುತಾ, ಸುರಿಯಬೇಕು. ಈ ಮಿಶ್ರಣವು ಆಕಾಶ ತಿಳಿ ನೀಲಿಬಣ್ಣಕ್ಕೆ ತಿರುಗುತ್ತಿದ್ದಂತೆ ದ್ರಾವಣವನ್ನು (ಠಿಊ) ಹ್ಢ್ಜಿಹ್ಙಿಬ? ಹ್ಙಿಬ್ಜ? ದ್ರಾವಣದಲ್ಲಿ ಹೆಚ್ಚುವರಿ ತಾಮ್ರದ ಆಂಶ ಇಲ್ಲದಿರುವುದನ್ನು ಖಚಿತಪಡಿಸಿಕೊಳ್ಳಬೇಕು. ಹೆಚ್ಚ್ಚುವರಿ ತಾಮ್ರದ ಆಂಶವಿದ್ದಲ್ಲಿ ಇನ್ನು ಸ್ವಲ್ಪ ಸುಣ್ಣದ ತಿಳಿನೀರನ್ನು ತಯಾರಿಸಿ ಈ ದ್ರಾವಣಕ್ಕೆ ಸುರಿಯಬೇಕು. Pಊ ಹ್ಢ್ಜಿಹ್ಙಿನಿ ಪರೀಕ್ಷೆಯನ್ನು ಪುನಃ ಮಾಡಿ ದ್ರಾವಣವು ಆಮ್ಲೀಯತೆಯಿಂದ ಹೊರ ಬಂದು ನ್ಯೂಟ್ರಲ್ ರಸಸಾರ  ಹೊಂದಿರುವುದನ್ನು ಖಚಿತಪಡಿಸಿಕೊಳ್ಳಬೇಕು.
ಈ ಮೇಲೆ ತಿಳಿಸಿದಂತೆ ತಯಾರಿಸಲಾದ ಹೊಸದಾಗಿರುವ ಬೋರ್ಡೋ ಮಿಶ್ರಣವನ್ನು ಅಡಿಕೆ ಗೊನೆಗಳ ಮೇಲೆ ತೀರ ಹತ್ತಿರದಿಂದ ಸಣ್ಣ ಹನಿಗಳ ರೂಪದಲ್ಲಿ ಸಿಂಪರಣೆಯಾಗುವಂತೆ ಸಿಂಪಡಿಸುವುದು ಪ್ರಮುಖವಾದ ಅಂಶ. ಈ ದ್ರಾವಣಕ್ಕೆ ಅಂದಾಜು ೪೫ ದಿನಗಳಕಾಲ ರೋಗವನ್ನು ತಹಬದಿಗೆ ತರುವ ಶಕ್ತಿ ಇದ್ದರೂ ಕೂಡ ೩೦ ರಿಂದ ೪೫ ದಿನಗಳ ಅಂತರದಲ್ಲಿ ವಾತಾವರಣದ ಲಕ್ಷಣಗಳನ್ನು ಅರಿತುಕೊಂಡು ಮರು ಸಿಂಪರಣೆ ಮಾಡುವುದು ಸೂಕ್ತವಾಗಿರುತ್ತದೆ. ಬೋರ್ಡೋ ಮಿಶ್ರಣವು ಬೇರಾವುದೇ ರಾಸಾಯನಿಕಗಳೊಂದಿಗೆ ಅಥವಾ ಮಿಶ್ರಣದೊಂದಿಗೆ ಹೊಂದಾಣಿಕೆಯನ್ನು ಹೊಂದಿಲ್ಲವಾದ ಕಾರಣ ಬೇರೆ ಯಾವುದೇ ಕೀಟನಾಶಕವನ್ನು ಇದರೊಂದಿಗೆ ಬೆರೆಸಿ ಸಿಂಪಡಣೆ ಮಾಡಬಾರದು.

ಸಿಂಪರಣಾ ವಿಧಾನ:
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಜೂನ್ ನಿಂದ ಆಗಸ್ಟ್‌ವರೆಗೆ ತೀವ್ರತರಹದ ಮಳೆ ಇರುವ ಕಾರಣ ಮುಂಗಾರು ಆರಂಭಕ್ಕೆ ಮುನ್ನ ಒಂದೆರಡು ಮಳೆ ಬಿದ್ದ ಕೂಡಲೆ ಅಡಿಕೆ, ಕಾಳುಮೆಣಸು, ಕೊಕೋ, ತೆಂಗು ಬೆಳೆಗಳಿಗೆ ಬೋರ್ಡೋ ದ್ರಾವಣವನ್ನು ಮುಂಜಾಗರೂಕತಾ ಸಿಂಪಡಣೆ ಮಾಡುವುದು ರೋಗನಿಯಂತ್ರಣದಲ್ಲಿ ಬೆಳೆಗಾರರು ಅನುಸರಿಸಬೇಕಾದ ಪ್ರಥಮ ಹಾಗೂ ಪ್ರಮುಖ ಹೆಜ್ಜೆಯಾಗಿದೆ. ಇದನ್ನು ಕೈಗೊಳ್ಳಲು ಉದಾಸೀನ ಮಾಡಿದಲ್ಲಿ ಬೆಳೆಗಾರರಿಗೆ ಬೋರ್ಡೋ ದ್ರಾವಣ ಸಿಂಪಡಿಸಲು ಯೋಗ್ಯ ವಾತಾವರಣ ಸಿಕ್ಕದೇ ಹೋಗಿ ಬೆಳೆ ರೋಗಕ್ಕೆ ತುತ್ತಾಗಿ ಹಾನಿ ಸಂಭವಿಸುವುದು ನಿಶ್ಚಿತ. ಮೊದಲ ಸಿಂಪರಣೆ ನಂತರ ೩೫-೪೦ ದಿನಗಳ ಅಂತರದಲ್ಲಿ ವಾತಾವರಣವನ್ನು ಅನುಸರಿಸಿಕೊಂಡು ಇನ್ನೊಂದು ಸುತ್ತಿನ ಸಿಂಪರಣೆ ಅಗತ್ಯವಾಗಿ ಕೈಗೊಳ್ಳಬೇಕು. ಮುಂದೆ ಅಗತ್ಯ ಬಿದ್ದಲ್ಲಿ ೩ ನೇ. ಸಿಂಪರಣೆಯನ್ನು ಕೈಗೊಳ್ಳಬೇಕು.
ಸುಮಾರು ೧೯೧೦ರ ಸಂಧರ್ಭದಲ್ಲಿ ಡಾ|| ಕೊಲ್‌ಮನ್ ರವರಿಂದ ಅಡಿಕೆ ಕೊಳೆರೋಗವನ್ನು ಬೋರ್ಡೋ ಮಿಶ್ರಣದಿಂದ ಪರಿಣಾಮಕಾರಿಯಾಗಿ ನಿಯಂತ್ರಿಸಬಹುದು ಎಂದು ದೃಢಪಟ್ಟಲ್ಲಿಂದ ಇಲ್ಲಿಯವರೆಗೆ ಅಡಿಕೆ, ಕಾಳುಮೆಣಸಿಗೆ ಬರುವ ಕೊಳೆರೋಗವನ್ನು ನಿಯಂತ್ರಿಸಲು ಬೋರ್ಡೋ ಮಿಶ್ರಣದಷ್ಟು ಉಪಯುಕ್ತ ರೋಗನಾಶಕ ಬೇರೆಯಾವುದೂ ಕೂಡಾ ದೃಢಪಟ್ಟಿರುವುದಿಲ್ಲ. ಇಷ್ಟು ವರ್ಷಗಳ ಕಾಲ ಈ ಮಿಶ್ರಣವನ್ನು ಕೊಳೆರೋಗ ನಿಯಂತ್ರಣಕ್ಕೆ ವ್ಯಾಪಕವಾಗಿ ಕೃಷಿಕರು ಬಳಸುತ್ತಿದ್ದರೂ, ಇಂದಿಗೂ ಕೂಡ ಈ ಮಿಶ್ರಣ ರೋಗ ನಿಯಂತ್ರಣದಲ್ಲಿ ತನ್ನ ಸಾಮರ್ಥ್ಯವನ್ನು ಸಾಬೀತುಪಡಿಸಿದೆ. ಪ್ರಸ್ತುತ ಬೇರೆ ಬೇರೆ ಖಾಸಗಿ ಕಂಪೆನಿಗಳಿಂದ ಸಸ್ಯಜನ್ಯ ಔಷಧಿ/ ಮಿಶ್ರಣಗಳು ಮಾರುಕಟ್ಟೆಯಲ್ಲಿ ಕೊಳೆ ರೋಗ ನಿಯಂತ್ರಣ ಮಾಡುತ್ತದೆಂದು ಪ್ರಚಾರದಲ್ಲಿದ್ದರೂ ಅವುಗಳ ಉಪಯುಕ್ತತೆಯನ್ನು ಸಂಶೋಧನಾ ಸಂಸ್ಥೆಗಳ ಸಂಶೋಧನೆಗಳು ಪರಿಪೂರ್ಣವಾಗಿ ದೃಢಪಡಿಸಿರುವುದಿಲ್ಲ. ಅಡಿಕೆ ಬೆಳೆಗಾರರು ಈ ವಾಸ್ತವಿಕತೆಯನ್ನು ಅರ್ಥೈಸಿಕೊಂಡು ತಮ್ಮ ಬೆಳೆಯನ್ನು ರಕ್ಷಿಸಿಕೊಳ್ಳಲು ಸಮರ್ಪಕ ವಿಧಿವಿಧಾನಗಳನ್ನು ಅಳವಡಿಸಿಕೊಳ್ಳುವುದು ಮಹತ್ವಪೂರ್ಣ ಅಂಶವಾಗಿರುತ್ತದೆ. ಕೃಷಿಕರು ಪ್ರಸ್ತುತ ಮಾರುಕಟ್ಟೆಯಲ್ಲಿನ ವಿವಿಧ ಅಮಿಷಗಳಿಗೆ ಒಳಗಾಗಿ ಸಂಶೋಧನೆಗಳಿಂದ ಪರಿಪೂರ್ಣವಾಗಿ ದೃಢಪಡದ ಖಾಸಗಿ ಕಂಪೆನಿಗಳ ಸಸ್ಯಜನ್ಯ ಔಷಧಿ/ಮಿಶ್ರಣಗಳನ್ನು ಬಳಸಿ ಮುಂದೆ ನಷ್ಟವನ್ನು ತಂದುಕೊಂಡಲ್ಲಿ ಅದು ಕೃಷಿಕರದೇ ಜವಾಬ್ದಾರಿಯಾಗಿರುತ್ತದೆ. ಈ ಹಿನ್ನೆಲೆಯಲ್ಲಿ ತೋಟಗಾರಿಕೆ ಇಲಾಖೆಯು ೨೦೨೦ ಮುಂಗಾರು ಸಮೀಪಿಸುತ್ತಿರುವ ಈ ಸಂದರ್ಭದಲ್ಲಿ ಅಡಿಕೆ, ಕಾಳುಮೆಣಸು, ಕೊಕೋ, ತೆಂಗುಬೆಳೆಗಾರರನ್ನು ತಮ್ಮ ಬೆಳೆಗಳಿಗೆ ಹರಡುವ ಕೋಳೆರೋಗ ನಿಯಂತ್ರಣಕ್ಕೆ ಮೇಲೆ ತಿಳಿಸಿರುವಂತೆ ಮುನ್ನೆಚ್ಚರಿಕೆ ಕ್ರಮಗಳೊಂದಿಗೆ ಸಕಾಲಿಕ ಸೂಕ್ತ ನಿಯಂತ್ರಣ ಕ್ರಮಗಳನ್ನು ಹಮ್ಮಿಕೊಳ್ಳಲು ಈ ಮೂಲಕ ಕೋರಲಾಗಿದೆ.

೪)ಕಾಳುಮೆಣಸು ಬೆಳೆಯಲ್ಲಿ ಸೊರಗು-ರೋಗದ ಸಮಗ್ರ ಹತೋಟಿ ಕ್ರಮಗಳು
೧)ಶೀಘ್ರ ಸೊರಗು ರೋಗ:
ರೋಗದ ಲಕ್ಷಣಗಳು:
ಮುಂಗಾರು ಹಂಗಾಮಿನಲ್ಲಿ ಹೆಚ್ಚಾಗಿ ಬಾಧಿಸುತ್ತವೆ. ಬಳ್ಳಿಗಳ ಎಲ್ಲಾ ಭಾಗಗಳಲ್ಲೂ ರೋಗ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ.ಎಲೆಗಳ ಮೇಲೆ ಕಪ್ಪು ಚುಕ್ಕೆಗಳು ಕಂಡು ಬಂದು ಅಂಥ ಎಲೆಗಳಲ್ಲಿ ನಾರಿನಂಥ ಬಾಚು ಭಾಗ ಕಾಣುತ್ತವೆ. ಈ ಚುಕ್ಕೆಗಳು ದೊಡ್ಡವಾಗುತ್ತ ಎಲೆಗಳನ್ನು ವ್ಯಾಪಿಸಿ ಕೊನೆಗೆ ಎಲೆಗಳು ಉದುರುತ್ತವೆ. ಮಣ್ಣಿನ ಮೇಲ್ಭಾಗದ ಹರಿಗಳು ಮೃದು ಕಾಂಡ,ಕುಡಿ ಎಲೆಗಳು ರೋಗದಿಂದಾಗಿ ಕಪ್ಪು ವರ್ಣಕ್ಕೆ ತಿರುಗುತ್ತವೆ. ಬಳ್ಳಿಗಳಲ್ಲಿ ರೋಗವು ಪೂರ್ತಿ ವ್ಯಾಪಿಸಿ ಪೂರ್ತಿ ಬಳ್ಳಿ ನಾಶವಾಗುತ್ತದೆ.ಮುಖ್ಯ ಕಾಂಡದ ನೆಲಮಟ್ಟ ಅಥವಾ ಕುತ್ತಿಗೆ ಭಾಗದಲ್ಲಿ ರೋಗ ಬಾಧಿಸಿದಲ್ಲಿ ಪೂರ್ತಿ ಬಳ್ಳಿ ಸೊರಗಿ ಒಣಗುತ್ತದೆ.ಎಲೆಗಳು,ಕಾಳು ಗೊನೆಗಳು ಉದುರಿಹೋಗುತ್ತವೆ.ಇಲ್ಲದೇ ಬಾರದಿರಬಹುದು.ರೆಂಬೆಗಳು ಗೆಣ್ಣು ಭಾಗದಲ್ಲಿ ಮುರಿಯುತ್ತವೆ ಮತ್ತು ಪೂರ್ತಿ ಬಳ್ಳಿ ಒಂದು ತಿಂಗಳಲ್ಲಿ ಕುಸಿಯುತ್ತದೆ.ಪೋಷಕಾಂಶಗಳನ್ನು ಹೀರಿಕೊಳ್ಳುವ ಬೇರಿನ ಭಾಗಗಳಿಗೆ ರೋಗ ತಗುಲಿದಲ್ಲಿ ಬಾಧೆ ಲಕ್ಷಣಗಳು ನಿಧಾನ ಪ್ರಕಟಗೊಂಡು ಮಳೆಯ ಆರಂಭದೊಂದಿಗೆ ಬಳ್ಳಿಗಳ ಎಲೆಗಳು ಹಳದಿ ವರ್ಣಕ್ಕೆ ತಿರುಗಿ,ಬಾಡಿ ಉದುರಿ ಹೋಗುತ್ತವೆ.ಅಕ್ಟೋಬರ್ -ನವೆಂಬರ್ ತಿಂಗಳಿನ ನಂತರ ಸುಧಾರಿಸಿ ಮತ್ತೆರಡು ಹಂಗಾಮುಗಳವರೆಗೆ ಬದುಕುಳಿದು ನಂತರ ಸಾಯುತ್ತವೆ.

ನಿರ್ವಹಣಾ ಕ್ರಮಗಳು:
೧. ರೋಗ ಬಾಧೆಯಿಂದ ಒಣಗಿ ಸತ್ತು ಹೋದ ಬಳ್ಳಿಗಳನ್ನು ಬೇರುಗಳ ಸಮೇತ ಕಿತ್ತು ತೋಟದಿಂದ ಹೊರಗೊಯ್ದು ನಾಶಪಡಿಸಬೇಕು
೨. ನಾಟಿ ಮಾಡಲು ಉಪಯೋಗಿಸುವ ಹರಿ ಬಳ್ಳಿಯ ತುಂಡುಗಳನ್ನು ರೋಗ ಮುಕ್ತ ತೋಟಗಳಿಂದಲೇ ಆಯ್ದ ಸಸಿ ಮಡಿಗಳಲ್ಲಿ ಬೆಳೆಯುವ ಪೂರ್ವದಲ್ಲಿ ಮಡಿಗಳನ್ನು ಧೂಮದಿಂದ ಅಥವಾ ಸೋಲಾರೈಜೇಶನ್(ಬಿಸಿಲಿನಿಂದ ಸುಡು)ಮುಂತಾದ ಕ್ರಮಗಳಿಂದ ಉಪಚರಿಸಿ ನಂತರ ನಾಟಿ ಮಾಡಬೇಕು .
೩. ನೀರು ನಿಲ್ಲದಂತೆ ತೋಟದಲ್ಲಿ ಬಸಿ ಕಾಲುವೆಗಳನ್ನು ನಿರ್ಮಿಸಬೇಕು.
೪. ಬೇಸಾಯ ಕ್ರಮಗಳನ್ನು ಅನುಸರಿಸುವಾಗ ಮಡಿಗಳಲ್ಲಿನ ಬಳ್ಳಿಗಳ ಬೇರುಗಳಿಗೆ ಯಾವುದೇ ರೀತಿಯ ಧಕ್ಕೆಯಾಗದಂತೆ ನೋಡಿಕೊಳ್ಳಬೇಕು.
೫. ಹೊಸದಾಗಿ ಚಿಗುರಿ ಬೆಳೆಯುವ ಹರಿ ಬಳ್ಳಿಗಳನ್ನು ನೆಲದ ಮೇಲೆ ಹರಡಿ ಹಬ್ಬದಂತೆ ಆಧಾರ ಗಿಡಕ್ಕೆ ಎತ್ತಿ ಕಟ್ಟುತ್ತಿರಬೇಕು.ಇಲ್ಲವೇ ಕತ್ತರಿಸಿ ತೆಗೆಯಬೇಕು.
೬. ಆಧಾರ ಗಿಡದ ರೆಂಬೆಗಳನ್ನು ಮಳೆಗಾಲದ ಪ್ರಾರಂಭದಲ್ಲಿ ಕತ್ತರಿಸುವುದರಿಂದ ವಾತಾವರಣದಲ್ಲಿ ಹೆಚ್ಚಿನ ಆರ್ದ್ರತೆ ಉಂಟಾಗದಂತೆ ಹಾಗೂ ಸೂರ್ಯ ರಷ್ಮಿ ನೆಲಮಟ್ಟದವರೆಗೂ ತಲುಪುವಂತೆ ನೋಡಿಕೊಳ್ಳುವದರಿಂದ ರೋಗದ ತೀವ್ರತೆ ಕಡಿಮೆಗೊಳಿಸಬಹುದು.
೭. ಮೇ ?ಜೂನ್ ತಿಂಗಳುಗಳಲ್ಲಿನ ಮಳೆಗಳ ಪ್ರಾರಂಭದೊಂದಿಗೆ ಮಡಿಗಳನ್ನು ಶೇಕಡಾ ೦.೧೨೫ ಮೆಟಲಾಕ್ಸಿಲ್೭೨ ಡಬ್ಲ್ಯೂ.ಪಿ,೫ -೧೦ ಲೀಟರ್ ದ್ರಾವಣವನ್ನು ಪ್ರತಿ ಬಳ್ಳಿಗೆ ಉಣಿಸಬೇಕು. ಅಲ್ಲದೇ ಇದೇ ದ್ರಾವಣ ಬಳ್ಳಿಗಳಿಗೆ ಸಿಂಪಡಣೆ ಮಾಡಬೇಕು .ಎಲ್ಲಾ ಬಳ್ಳಿಗಳ ಕಾಂಡಗಳ ಬುಡದಲ್ಲಿ ೪೫-೫೦ ಸೆಂ.ಮೀ. ಸುತ್ತಳತೆಯಲ್ಲಿ ಶೇಕಡಾ ೨ ರ ತಾಮ್ರದ ಆಕ್ಸಿಕ್ಲೋರೈಡ್ ೫೦ ಡಬ್ಲ್ಯೂ.ಪಿ, ೫-೧೦ ಲೀಟರ್ ನಂತರ ಪ್ರತೀ ಬಳ್ಳಿಗೆ ಉಣಿಸಬೇಕು. ಹಾಗೂ ಶೇಕಡಾ ೧ ರ ಬೋರ್ಡೋದ್ರಾವಣ ಸಿಂಪರಣೆ ಮಾಡಬೇಕು. ಅಲ್ಲದೇ ಶೇಕಡಾ ೦.೩ ರ ಪೊಟ್ಯಾಷಿಯಂ ಫೊಸ್ಪೊನೇಟ್ ಇದೇ ಕ್ರಮಗಳನ್ನು ಆಗಸ್ಟ್ -ಸೆಪ್ಟಂಬರ್ ?ಅಕ್ಟೋಬರ್ ತಿಂಗಳುಗಳಲ್ಲಿ ಮತ್ತೆ ಅನುಸರಿಸಬೇಕು.
ಇದಲ್ಲದೇ ಟ್ರೈಕೋಡರ್ಮ ವಿರಿಡೆ ಶಿಲೀಂಧ್ರವನ್ನು ೧ ಕಿ.ಗ್ರಾಂ ಬೇವಿನಹಿಂಡಿ ಅಥವಾ ೫ ಕಿ.ಗ್ರಾಂ ಕೊಟ್ಟಿಗೆಗೊಬ್ಬರದಲ್ಲಿ ಮಿಶ್ರಣ ಮಾಡಿ ಪ್ರತೀ ಬಳ್ಳಿಗೆ ೫೦ ಗ್ರಾಂ ಮಳೆ ಪ್ರಾರಂಭದೊಂದಿಗೆ ಮಡಿಗಳಲ್ಲಿ ಕೊಡಬೇಕು. ಅಕ್ಟೋಬರ್ ತಿಂಗಳುಗಳಲ್ಲಿ ಮತ್ತೆ ಅನುಸರಿಸಬೇಕು ಶೀಘ್ರ ಸೊರಗು ರೋಗದ ನಿರ್ವಹಣೆಗಾಗಿ ಶೇಕಡಾ ೧ ರ ಸೂಡೋಮೋನಾಸ್ ಫ್ಲುರೋಸೆನ್ಸ್ ಜೈವಿಕ ಶಿಲೀಂದ್ರನಾಶಕದ ಸಿಂಪರಣೆಯನ್ನು ಪ್ರತಿ ಬಳ್ಳಿಗೆ ೨ ಲೀಟರ್ ನಂತೆ ಕೈಗೊಳ್ಳಬೇಕು ಅಥವಾ ಶೇಕಡಾ ೧ ಸೂಡೋಮೋನಾಸ್ ಫ್ಲುರೋಸೆನ್ಸ್ ಜೈವಿಕ ನಾಶಕದ ೩ ಲೀಟರ್ ದ್ರಾವಣದಿಂದ ಪ್ರತೀ ಬಳ್ಳಿಯ ಬುಡವನ್ನು ತೋಯಿಸಬೇಕು. ಈ ಉಪಸಾರಗಳನ್ನು ಜೂನ್ ಹಾಗೂ ಆಗಸ್ಟ್ ತಿಂಗಳುಗಳಲ್ಲಿ ಕೈಗೊಳ್ಳಬೇಕು.
೨)ನಿಧಾನ ಸೊರಗು ರೋಗ:
ರೋಗದ ಲಕ್ಷಣಗಳು:
ಬಳ್ಳಿಗಳ ಎಲೆಗಳ ಭಾಗ ಹಳದಿ ವರ್ಣಕ್ಕೆ ತಿರುಗಿ ಎಲೆಗಳು ಉದುರುತ್ತವೆಯಲ್ಲದೇ ಬಳ್ಳಿಗಳು ನಿಧಾನವಾಗಿ ಹಿಮ್ಮುಖವಾಗಿ ಒಣಗುತ್ತವೆ .
ಬೇರುಗಳು ಬೇರು ಗಂಟು ಜಂತು ಹುಳುವಿನ ಬಾಧೆಗೆ ತುತ್ತಾಗಿ ಕೊಳೆತುಹೋಗುತ್ತವೆ. ಬಾಧೆಗೆ ತುತ್ತಾದ ಬಳ್ಳಿಗಳು ಅಕ್ಟೋಬರ್ ನಂತರ ತೇವಾಂಶ ಕಡಿಮೆಯಾಗುವುದರ ಜೊತೆಗೆ ಎಲೆಗಳು ಹಳದಿ ವರ್ಣಕ್ಕೆ ತಿರುಗುವುದು ಕಂಡು ಬರುತ್ತದೆ.
ಮೇ ಜೂನ್ ನಲ್ಲಿ ಮಳೆಯ ಪ್ರಾರಂಭದೊಂದಿಗೆ ಬಾಧೆಗೆ ತುತ್ತಾದ ಕೆಲ ಬಳ್ಳಿಗಳು ಸುಧಾರಿಸಿ ಹೊಸ ಬೆಳವಣಿಗೆ ತೋರಿಸುತ್ತವೆ. ಅದಾಗ್ಯೂ ಈ ತರಹದ ಲಕ್ಷಣಗಳು ಮುಂಬರುವ ಹಂಗಾಮುಗಳಲ್ಲಿ ಮತ್ತೆ ಮರುಕಳಿಸುತ್ತಾ ಹೋಗಿ ಬಳ್ಳಿಗಳಲ್ಲಿನ ಶಕ್ತಿ ಹಾಗೂ ಉತ್ಪಾದಕತೆ ಕುಂಠಿತವಾಗುತ್ತದೆ. ಬಳ್ಳಿಗಳ ಮೇಲೆ ಸಣ್ಣ ಸಣ್ಣ ಗಂಟುಗಳು ಕಂಡುಬರುತ್ತವೆ.
ನಿರ್ವಹಣಾ ಕ್ರಮಗಳು:
೧.ತೀವ್ರ ಬಾಧೆಗೊಂಡ ಬಳ್ಳಿಗಳನ್ನು ಕಿತ್ತು ನಾಶಪಡಿಸಬೇಕು. ನಾಟಿ ಮಾಡುವ ತಗ್ಗುಗಳಲ್ಲಿ ಪೋರೇಟ್ ೧೦ ಜಿ.ಯನ್ನು(೧೫ ಗ್ರಾಂ) ಅಥವಾ ಕಾರ್ಬೋಫ್ಯುರಾನ್ ೩ ಜಿ.(೫೦ ಗ್ರಾಂ) ನಾಟಿ ಮಾಡುವ ಪೂರ್ವದಲ್ಲಿ ಹಾಕಬೇಕು. ಬೇರು ಗಂಟು ಜಂತು ಹುಳುವಿನ ಬಾಧೆ ಇಲ್ಲದ ತುಂಡುಗಳನ್ನು ಹೊಗೆಯಿಂದ ಅಥವಾ ಸೂರ್ಯ ರಷ್ಮಿಯಿಂದ ಉಪಚರಿಸದ ಮಡಿಗಳಲ್ಲಿ ನಾಟಿಮಾಡಬೇಕು. ಫೋರೇಟ್ ೧೦ಜಿ.ಅಥವಾ ಕಾರ್ಬೋಫ್ಯುರಾನ್ ೩ಜಿ. ಮೇ ಜೂನ್ ನಲ್ಲಿ ಮತ್ತು ಸೆಪ್ಟಂಬರ್ ?ಅಕ್ಟೋಬರ್ ನಲ್ಲಿ ಮಡಿಗಳಲ್ಲಿ ಕೊಡಬೇಕು.
೨. ಇದರೊಟ್ಟಿಗೆ ಶೇ ೦.೨ ರ ತಾಮ್ರದ ಆಕ್ಸಿಕ್ಲೋರೈಡ್ ಡಬ್ಲ್ಯೂ.ಪಿ, ಅಥವಾ ಪೊಟ್ಯಾಷಿಯಂ ಪಾಸ್ಫೋರೇಟ್ ೫೦ ಶೇಕಡಾ ೩ ರ ದ್ರಾವಣ ಅಥವಾ ಮೆಟಲಾಕ್ಸಿನ್ ೭೨ ಡಬ್ಲ್ಯೂ.ಪಿ, ಶೇ೩ ರ ೦.೧೨೫ ದ್ರಾವಣವನ್ನು ಕಾಂಡದ ಸುತ್ತ ಮಣ್ಣಿನಲ್ಲಿ ಉಣಿಸಬೇಕು. ಬೇರುಗಳಿಗೆ ಧಕ್ಕೆಯಾಗದಂತೆ ಕ್ರಮಗಳನ್ನು ಅನುಸರಿಸಬೇಕು.
೩. ಮುಂಗಾರಿಗೆ ಮೊದಲು ೧ ಬಾರಿ ,ಮುಂಗಾರಿನ ಸಮಯದಲ್ಲಿ ೨-೩ ಬಾರಿ ಮತ್ತು ಮುಂಗಾರಿನ ನಂತರ ೧ ಬಾರಿ ಶೇ ೧ ರ ಬೋರ್ಡೋದ್ರಾವಣವನ್ನು ಬಳ್ಳಿಗಳಿಗೆ ಸಿಂಪಡಿಸಬೇಕು.
೪. ರೋಗವನ್ನು ತಡೆಗಟ್ಟಲು ಶೇ ೦.೧ ರ ಕಾರ್ಬನ್ ಡೈಜಿಂ ಅಥವಾ ಶೇ೦.೩ ರ ಕ್ಯಾಪ್ಟನ್ ನಿಂದ ಉಪಚರಿಸಬೇಕು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.