HomePage_Banner
HomePage_Banner
HomePage_Banner
HomePage_Banner

ಕಾರು ಚಲಾಯಿಸುತ್ತಿದ್ದಾಗಲೇ ಹೃದಯಾಘಾತ

 

ಕೇನಾಜೆಯ ಪೋಕರ್ ಕುಂಞಿ ನಿಧನ

ಕಾರು ಚಾಲನೆ ವೇಳೆಯೇ ಹೃದಯಾಘಾತದಿಂದ ಕೇನಾಜೆಯ ಪೋಕರ್ ಕುಂಞಿ (55) ಯವರು ಮೃತಪಟ್ಟ ಘಟನೆ ಕೆಲವೇ ಹೊತ್ತಿನ ಮುಂಚೆ ನಡೆದಿದೆ.

ಮಧ್ಯಾಹ್ನ 12 ರ ಸುಮಾರಿಗೆ ಅವರು ಕಾರಿನಲ್ಲಿ ಬರುತ್ತಿದ್ದಾಗ ಸುಳ್ಯ ಪೋಲೀಸ್ ಠಾಣೆ ಸಮೀಪ ಕಾರು ಸ್ಕೂಟಿಯೊಂದಕ್ಕೆ ತಾಗಿ ಮುಂದಕ್ಕೆ ಬಂದು‌ ಮತ್ತೊಂದು ಕಾರಿಗೆ ತಾಗಿ ನಿಂತಿತು. ಅವರು ಕಾರಿನ ಸ್ಟೇರಿಂಗ್ ಗೆ ತಲೆ ತಗ್ಗಿಸಿ ಬಿದ್ದರು. ಇದನ್ನು ನೋಡಿದ ಸ್ಥಳೀಯ ತರಕಾರಿ ಅಂಗಡಿ ಯವರು ಬಂದು ಕಾರಿನ ಡೋರ್ ತೆಗೆದು ಹ್ಯಾಂಡ್ ಬ್ರೇಕ್ ಹಾಕಿ ಕಾರು ನಿಲ್ಲಿಸಿದರು.

ಬಳಿಕ ಅಲ್ಲಿದ್ದವರು ಪೋಕರೆ ಕುಂಞಿಯವರನ್ನು ಸುಳ್ಯ ಸರಕಾರಿ ಆಸ್ಪತ್ರೆಗೆ ತಂದರು. ಆ ವೇಳೆಗೆ ಅವರು ಕೊನೆಯುಸಿರೆಳೆದಿದ್ದರೆಂದು ತಿಳಿದುಬಂದಿದೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.