HomePage_Banner
HomePage_Banner
HomePage_Banner
HomePage_Banner

ಉಡುಪಿ ಜಿಲ್ಲಾಧಿಕಾರಿಯವರ ತಾಂತ್ರಿಕ ಸಹಾಯಕರು ಮತ್ತು ಪದನಿಮಿತ್ತ ಭೂ ದಾಖಲೆಗಳ ಉಪನಿರ್ದೇಶಕರಾದ ಬಿ.ಕೆ.ಕುಸುಮಾಧರ ನಿವೃತ್ತಿ

 

ಉಡುಪಿ ಜಿಲ್ಲಾಧಿಕಾರಿಯವರ ತಾಂತ್ರಿಕ ಸಹಾಯಕರು ಮತ್ತು ಪದನಿಮಿತ್ತ ಭೂ ದಾಖಲೆಗಳ ಉಪನಿರ್ದೇಶಕರಾದ ಬಿ.ಕೆ.ಕುಸುಮಾಧರ ರವರು ಮೇ.31ರಂದು ನಿವೃತ್ತರಾಗಿದ್ದಾರೆ.

ಭಾರತೀಯ ವಾಯು ಸೇನೆಯಲ್ಲಿ 15 ವರ್ಷ ಸೇವೆ ಸಲ್ಲಿಸಿ ನಿವೃತ್ತಿಯ ಬಳಿಕ ಕೆನರಾ ಬ್ಯಾಂಕ್‌ನಲ್ಲಿ 4ವರ್ಷ ಸೇವೆಸಲ್ಲಿಸಿ ನಂತರ ಕೆಎಎಸ್ ಪಾಸ್ ಮಾಡಿ ಕರ್ನಾಟಕ ಸರಕಾರದ class 1 ಗಜೆಟೆಡ್ ಅಧಿಕಾರಿಯಾಗಿ ಸೇರ್ಪಡೆಗೊಂಡು 23.5 ವರ್ಷ ಸೇವೆ ಸಲ್ಲಿಸಿ ಇದೀಗ ಸೇವೆಯಿಂದ ನಿವೃತ್ತರಾಗಿದ್ದಾರೆ.

ಕುಸುಮಾಧರರವರು ಸುಳ್ಯ ತಾಲೂಕು ಕೂತ್ಕುಂಜ ಗ್ರಾಮದ ಬೇರ್ಯ ದಿ. ಪಠೇಲ್ ಕುಶಾಲಪ್ಪ ಗೌಡ ಮತ್ತು ದಿ.ಶ್ರೀಮತಿ ಜಾನಕಿ ದಂಪತಿಗಳ ಪುತ್ರ. ಪತ್ನಿ ಶ್ರೀಮತಿ ಭಾರತಿ ಕುಸುಮಾಧರ ಮಂಗಳೂರಿನಲ್ಲಿ  ಶಿಕ್ಷಕಿಯಾಗಿ  ಸೇವೆ ಸಲ್ಲಿಸುತ್ತಿದ್ದಾರೆ. ಪುತ್ರಿ ಶ್ರೀಮತಿ ಡಾ.ಶಿಲ್ಪಾ ಕಿರಣ್‌ರವರು ಬೆಂಗಳೂರಿನ ಅಪೋಲಾ ಆಸ್ಪತ್ರೆಯಲ್ಲಿ ವೈದ್ಯೆಯಾಗಿ ಸೇವೆಸಲ್ಲಿಸುತ್ತಿದ್ದಾರೆ. ಅಳಿಯ ಡಾ.ಕಿರಣ್ ಸಾಗರ್ ಆಸ್ಪತ್ರೆಯಲ್ಲಿ ವೈದ್ಯರಾಗಿ ಸೇವೆಸಲ್ಲಿಸುತ್ತಿದ್ದಾರೆ. ರಾಷ್ಟ್ರೀಯ ಕಬಡ್ಡಿ ತರಬೇತುದಾರರು ಮತ್ತು ನಿವೃತ್ತ ಯುವಸಬಲೀಕರಣ ಮತ್ತು ಕ್ರೀಡಾಧಿಕಾರಿ ಮಾಧವ ಬಿ.ಕೆ.ಇವರ ಸಹೋದರ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.