HomePage_Banner
HomePage_Banner
HomePage_Banner

ಪಿಎಸ್‌ಐ ನೇಮಕಾತಿ ಅರ್ಜಿ ಆಹ್ವಾನಕ್ಕೆ ತಡೆ

ರಾಜ್ಯ ಇಲಾಖೆಯಲ್ಲಿ ಖಾಲಿ ಇರುವ ಸಬ್ ಇಸ್ಪೆಕ್ಟರ್ ಹುದ್ದೆಗಳ ನೇಮಕಾತಿಗೆ ಜೂನ್ 1ರಿಂದ 30 ರ ವರೆಗೆ ಕರೆಯಲಾಗಿದ್ದ ಅರ್ಜಿ ಆಹ್ವಾನ ಆದೇಶಕ್ಕೆ ತಾತ್ಕಾಲಿಕವಾಗಿ ತಡೆನೀಡಲಾಗಿದೆ. 2020-21ನೇ ಸಾಲಿನಲ್ಲಿ ಕರೆಯಲಾಗಿದ್ದ ಪಿಎಸ್‌ಐ (ಸಿವಿಲ್) 431 ಮತ್ತು ಕಲ್ಯಾಣ ಕರ್ನಾಟಕ – 125 ಹುದ್ದೆಗಳ ನೇರ ನೇಮಕಾತಿಗೆ ಸರ್ಕಾರ ಅಧಿಸೂಚನೆ ಹೊರಡಿಸಿತ್ತು. ಜೂ.1 ರಿಂದ 30ರ ವರೆಗೆ ಅರ್ಜಿ ಸಹ ಆಹ್ವಾನಿಸಲಾಗಿತ್ತು. ಆಡಳಿತಾತ್ಮಕ ಕಾರಣಗಳಿಂದಾಗಿ ಅರ್ಜಿ ಆಹ್ವಾನ ದಿನಾಂಕವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ ಎಂದು ಪೊಲೀಸ್ ನೇಮಕಾತಿ ವಿಭಾಗದ ಎಡಿಜಿಪಿ ಅಮೃತ್ ಪಾಲ್ ತಿಳಿಸಿದ್ದಾರೆ.


ಇತ್ತೀಚೆಗೆ ಪಿಎಸ್‌ಐ ಹುದ್ದೆಗಳ ಆಕಾಂಕ್ಷಿಗಳ ವಯೋಮಿತಿಯನ್ನು ಸಾಮಾನ್ಯ ವರ್ಗಕ್ಕೆ 28 ರಿಂದ 30ಕ್ಕೆ ಮತ್ತು ಎಸ್‌ಸಿ, ಎಸ್‌ಟಿಗೆ 30 ರಿಂದ 32 ವರ್ಷಕ್ಕೆ ಹೆಚ್ಚಿಸಲಾಗಿತ್ತು. ಇದಕ್ಕೂ ಮೊದಲೇ ಪಿಎಸ್‌ಐಗಳ ನೇಮಕಾತಿಗೆ ಸರ್ಕಾರ  ಅಧಿಸೂಚನೆ ಹೊರಡಿಸಿದ ಪರಿಣಾಮ ವಯೋಮಿತಿ ಅಡಿಲಿಕೆ ಅನ್ವಯ ಆಗುತ್ತಿರಲಿಲ್ಲ. ಅದಕ್ಕಾಗಿ ಹೊಸದಾಗಿ ಅಧಿಸೂಚನೆ ಹೊರಡಿಸುವ ಸೂಚನೆ ಇದೆ. ಕೋವಿಡ್ – 19 ಲಾಕ್‌ಡೌನ್ ಜೂ.30ರ ವರೆಗೆ ವಿಸ್ತರಣೆಗೊಂಡ ಪರಿಣಾಮ ಅರ್ಜಿ ಆಹ್ವಾನ ದಿನಾಂಕ ರದ್ದು ಮಾಡಲಾಗಿದೆ ಎನ್ನಲಾಗಿದೆ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.