HomePage_Banner
HomePage_Banner
HomePage_Banner
HomePage_Banner

ಅರಂತೋಡು : ಕೊರೋನಾ ವೈರಸ್ ಕಾರ್ಯಪಡೆಯ ಸಭೆ

ಅರಂತೋಡು ಗ್ರಾಮ ಪಂಚಾಯತ್ ಕೋವಿಡ್ 19 ಕೊರೋನಾ ವೈರಸ್ ಕಾರ್ಯಪಡೆಯ ಸಭೆಯನ್ನು ಮೇ. 30 ರಂದು ನಡೆಸಲಾಯಿತು. ದಿನಾಂಕ ೦1-೦6-2020 ರಿಂದ ಅನ್ವಯಿಸುವಂತೆ ಈ ಕೆಳಗಿನ ನಿರ್ಣಯಗಳನ್ನು ಕೈಗೊಳ್ಳಲಾಯಿತು .
೧) ಸರಕಾರದ ಆದೇಶದ ಪ್ರಕಾರ ಅಂತಾರಾಜ್ಯದಿಂದ ಬಂದವರನ್ನು ಗುರುತಿಸಿ ಇನ್ಸ್ಟಿಟ್ಯೂಷನಲ್ ಕ್ವಾರಂಟೈನ್ ಅಥವಾ ಹೋಂ ಕ್ವಾರಂಟೈನ್ ನಲ್ಲಿ ವ್ಯವಸ್ಥೆ ಮಾಡುವುದು. ೨)ಅಂತರ್ ಜಿಲ್ಲೆಯಿಂದಲೂ ಹೊಸದಾಗಿ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಬಂದರೆ ಮನೆಗೆ ತೆರಳಿ ಕ್ವಾರಂಟೈನ್ ಬಗ್ಗೆ ಅರಿವು ಮೂಡಿಸುವುದು ಮತ್ತು ಹೋಂ ಕ್ವಾರಂಟೈನ್ ನಲ್ಲಿ ಇರುವಂತೆ ಅವರ ಮನವೊಲಿಸುವುದು. ೩)ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸರಕಾರದಿಂದ ಅನುಮತಿ ಪಡೆದಿರುವ ಎಲ್ಲ ವಾಣಿಜ್ಯ ಅಂಗಡಿಗಳ ವ್ಯಾಪಾರದ ಅವಧಿಯನ್ನು ಪೂರ್ವಾಹ್ನ ೭ ರಿಂದ ಅಪರಾಹ್ನ ೭ ಗಂಟೆಯವರೆಗೆ ವಿಸ್ತರಿಸುವುದು. ೪) ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸಂಘ ಸಂಸ್ಥೆಗಳು ಮತ್ತು ಆಸಕ್ತರ ಸಹಕಾರದೊಂದಿಗೆ ಪ್ರತಿ ವಾರ್ಡ್ನಲ್ಲಿ ಐದರಿಂದ ಏಳು ಜನರ ತಂಡವನ್ನು ರಚಿಸಿ ಅವರಿಗೆ ಡೆಂಗ್ಯೂ ಮಲೇರಿಯಾ ಮತ್ತು ಕೋರನ ವೈರಸ್ ಕುರಿತು ತರಬೇತಿಯನ್ನು ನೀಡಿ ಜನರಿಗೆ ಅರಿವು ಮೂಡಿಸಲು ಕ್ರಮ ಕೈಗೊಳ್ಳುವುದು . ೫) ಸರಕಾರದ ಹಂತದಲ್ಲಿ ಲಾಕ್ ಡೌನ್ ನಿಯಮಗಳು ಸಡಿಲ ಗೊಳ್ಳುತ್ತಿರುವುದರಿಂದ ಗ್ರಾಮಪಂಚಾಯಿತಿ ವ್ಯಾಪ್ತಿಯ ಪ್ರತಿಯೊಂದು ನಾಗರಿಕರು ಕೋರೋಣ ವೈರಸ್ ತಡೆಯಲು ಸ್ಯಾನಿಟೈಸರ್ ಬಳಕೆ, ಪದೇ ಪದೇ ಸಾಬೂನು ದ್ರಾವಣದಿಂದ ಕೈ ತೊಳೆಯುವುದು, ನಿರಂತರ ಮಾಸ್ಕ್ಗಳನ್ನು ಧರಿಸುವುದು ಮತ್ತು ಸಾಮಾಜಿಕ ಅಂತರ ಕಾಪಾಡುವುದು ಕುರಿತು ಕರಪತ್ರಗಳು ಮತ್ತು ಮೈಕಾ ಪ್ರಚಾರದ ಮೂಲಕ ಜನರಿಗೆ ನಿರಂತರ ಅರಿವು ಮೂಡಿಸುವುದು. ಸದರಿ ಸಭೆಯ ಅಧ್ಯಕ್ಷತೆಯನ್ನು ಗ್ರಾಪಂ ಅಧ್ಯಕ್ಷರಾದ ಲಿಲಾವತಿ ಕೊಡಂಕಿರಿ ಅವರ ವಹಿಸಿದ್ದರು. ಗ್ರಾಮ ಪಂಚಾಯಿತಿ ಉಪಾಧ್ಯಕ್ಷರಾದ ಶಿವಾನಂದ ಕುಕ್ಕುಂಬಳ ,ವೈದ್ಯಾಧಿಕಾರಿಗಳಾದ ಡಾಕ್ಟರ್ ಮಿಥುನ್ ಮತ್ತು ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಜಯಪ್ರಕಾಶ್ ಮತ್ತು ಕೋ ವಿಡ್ ಕಾರ್ಯಪಡೆಯ ಸದಸ್ಯರಾದ ಕೋರನ ವಾರಿಯರ್ಸ್, ಆರೋಗ್ಯ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರು ಮತ್ತು ಗ್ರಾಪಂ ಸದಸ್ಯರು ಅವರು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.