HomePage_Banner
HomePage_Banner
HomePage_Banner
HomePage_Banner

ಮಲೇಷ್ಯಾದಿಂದ ಬಂದ ಮಂಗಳೂರಿನ ವೈದ್ಯರಿಗೆ ಕೊರೋನಾ

 

ಅರಂತೋಡಿನ ಸಂಬಂಧಿಕರ ಮನೆಗೆ ಬಂದಿದ್ದ ಹಿನ್ನೆಲೆಯಲ್ಲಿ ಮನೆಯವರಿಗೆ ಕ್ವಾರಂಟೇನ್

ಮಲೇಷ್ಯಾದಿಂದ ಬಂದ ಮಂಗಳೂರಿನ ವೈದ್ಯರೊಬ್ಬರಿಗೆ ಇಂದು ಕೊರೋನಾ ದೃಢ ಪಟ್ಟಿದ್ದು, ಇಂದು ಅವರು ಅರಂತೋಡಿನ ಸಮೀಪದ ಸಂಬಂಧಿಕರ ಮನೆಯೊಂದಕ್ಕೆ ಬಂದಿದ್ದ ಹಿನ್ನೆಲೆಯಲ್ಲಿ ಆ ಮನೆಯವರನ್ನು ಹೋಂ‌ ಕ್ವಾರಂಟೇನ್ ನಲ್ಲಿರಿಸಲು ಸೂಚಿಸಲಾಗಿದೆ.

 

ಮಲೇಷ್ಯಾದಿಂದ ಬಂದಿದ್ದ ಈ ವೈದ್ಯರು ಬೆಂಗಳೂರಿನಲ್ಲಿ ಕ್ವಾರಂಟೇನ್ ನಲ್ಲಿದ್ದರು.‌ ಅಲ್ಲಿ ಅವರ ಗಂಟಲ ದ್ರವದ ಮಾದರಿಯನ್ನು ಪರೀಕ್ಷೆಗೆ ತೆಗೆದುಕೊಳ್ಳಲಾಗಿತ್ತು. ಮೇ. 29 ರಂದು ಅವರು ಅಲ್ಲಿಂದ ಮಂಗಳೂರಿನ ಮನೆಗೆ ಬಂದಿದ್ದರು.

ಇಂದು ಅವರು ಪತ್ನಿ ಹಾಗೂ ಮಗುವಿನೊಂದಿಗೆ ಅರಂತೋಡು ಬಳಿಯ ತನ್ನ ಸಂಬಂಧಿಕರ ಮನೆಗೆ ಬಂದಿದ್ದರು. ಅಲ್ಲಿರುವ ವೇಳೆ ಅವರಿಗೆ ಪಾಸಿಟಿವ್ ಇರುವುದಾಗಿ ಫೋನ್ ಬಂತೆನ್ನಲಾಗಿದೆ. ಕೂಡಲೇ ಅವರು ಮಂಗಳೂರಿಗೆ ತೆರಳಿ ಕೋವಿಡ್ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ.

ಅವರು ಬಂದಿದ್ದ ಅರಂತೋಡಿನ ಮನೆಯವರನ್ನು ಪ್ರಥಮ ಸಂಪರ್ಕದ ಹಿನ್ನೆಲೆಯಲ್ಲಿ ಹೋಂ ಕ್ವಾರಂಟೇನ್ ನಲ್ಲಿರಲು ಸೂಚಿಸಲಾಗಿದೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.