ಕಾರು ಡಿಕ್ಕಿ : ಪಾದಚಾರಿ ಮೃತ್ಯು

Advt_Headding_Middle
Advt_Headding_Middle
Advt_Headding_Middle

ಮಡಿಕೇರಿ ಕಡೆಯಿಂದ ಸುಳ್ಯ ಕಡೆಗೆ ಬರುತ್ತಿದ್ದ ಕಾರೊಂದು ಅರಂತೋಡಿನ ಬಿಳಿಯಾರು ಎಂಬಲ್ಲಿ ಪಾದಚಾರಿಯೊಬ್ಬರಿಗೆ ಡಿಕ್ಕಿ ಹೊಡೆದು, ಪಾದಚಾರಿ ಮೃತಪಟ್ಟ ಘಟನೆ ಇಂದು ಸಂಜೆ ನಡೆದಿದೆ.

ಅಡ್ಕಾರಿನ ವ್ಯಕ್ತಿಯೊಬ್ಬರ ಈ ಕಾರು ಉದಯನಗರದಲ್ಲಿ ಬರುತ್ತಿರುವಾಗ ಪಾದಚಾರಿ ರಸ್ತೆ ದಾಟಿದರೆಂದೂ, ಮಳೆಹನಿ ಬರುತ್ತಿದ್ದುದರಿಂದ ಬ್ರೇಕ್ ಹಿಡಿಯದೇ ಕಾರು ಜಾರಿ ಪಾದಚಾರಿಗೆ ಗುದ್ದಿ ರಸ್ತೆಯ ಇನ್ನೊಂದು ಮಗ್ಗುಲಿಗೆ ಹೋಗಿ ಪಲ್ಟಿಯಾಯಿತು.

Advertisement

ಆ ಸಂದರ್ಭ ಅಲ್ಲಿ ಸೇರಿದ ಯುವಕರು ಕಾರು ಚಾಲಕನ ಮೇಲೆ ಏರಿಹೋಗಿ ತೀವ್ರ ತರಾಟೆಗೆತ್ತಿಕೊಂಡರೆಂದು ತಿಳಿದು ಬಂದಿದೆ.

ಕಾರು ಗುದ್ದಿದುದರಿಂದ ಜಖಂಗೊಂಡ ಅಪರಿಚಿತ ಪಾದಚಾರಿಯನ್ನು ಸುಳ್ಯ ಸರಕಾರಿ ಆಸ್ಪತ್ರೆಗೆ ಕಳುಹಿಸಲಾಯಿತು. ಆದರೆ ಆ ವೇಳೆಗೆ ಆ ವ್ಯಕ್ತಿ ಮೃತಪಟ್ಟಿದ್ದರು. ಮೃತದೇಹ ಸುಳ್ಯ ಸರಕಾರಿ ಆಸ್ಪತ್ರೆಯ ಶವಾಗಾರದಲ್ಲಿ ಇರಿಸಲಾಗಿದೆ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.