HomePage_Banner
HomePage_Banner
HomePage_Banner
HomePage_Banner

ಐವರ್ನಾಡಿನಲ್ಲಿ ಸಹಕಾರ ವಿಮಾ ಸ್ಪಂದನಾ ಯೋಜನೆಯ ಸಾಂಕೇತಿಕ ಉದ್ಘಾಟನೆ

 

ಐವರ್ನಾಡು ಪ್ರಾಥಮಿಕ‌ ಕೃಷಿ ಪತ್ತಿನ ಸಹಕಾರಿ ಸಂಘವು ಹಲವಾರು ರೈತಪರ ಯೋಜನೆಗಳನ್ನು ಯಶಸ್ವಿಯಾಗಿ ಜಾರಿಗೆ ತಂದಿದ್ದು, ಇದೀಗ ಸಹಕಾರ ವಿಮಾ ಸ್ಪಂದನಾ ಯೋಜನೆಯನ್ನು ಪ್ರಾರಂಭಿಸಿದೆ.

ಐವರ್ನಾಡು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ವತಿಯಿಂದ ಗ್ರಾಮೀಣ ವಲಯದ ಅಸಂಘಟಿತ ಕೃಷಿ ಕೂಲಿ ಕಾರ್ಮಿಕರಿಗೆ ವಿಮಾ ಭದ್ರತಾ ಕಾರ್ಯಕ್ರಮ ಸಹಕಾರ ವಿಮಾ ಸ್ಪಂದನಾ ಯೋಜನೆಯ ಸಾಂಕೇತಿಕ ಉದ್ಘಾಟನಾ ಕಾರ್ಯಕ್ರಮವು ಜೂ.1 ರಂದು ನಡೆಯಿತು.

ಸಂಘದ ಅಧ್ಯಕ್ಷ ಎಸ್.ಎನ್.ಮನ್ಮಥ ಮತ್ತು ಎಸ್.ಬಿ.ಐ ಬ್ಯಾಂಕಿನ ಐವರ್ನಾಡು ಶಾಖಾ ಮೆನೇಜರ್ ಬ್ರಿಜೇಶ್ ರವರು ದೀಪ ಬೆಳಗಿಸಿ ಉದ್ಘಾಟಿಸಿ ಶುಭಹಾರೈಸಿದರು.

ಈ ಸಂದರ್ಭದಲ್ಲಿ ಸಂಘದ ಉಪಾಧ್ಯಕ್ಷ ವಿಕ್ರಂ ಪೈ,ಗ್ರಾಮ ಪಂಚಾಯತ್ ಉಪಾಧ್ಯಕ್ಷ ಬಾಲಕೃಷ್ಣ ಕೀಲಾಡಿ ,ಸಹಕಾರಿ ಸಂಘದ ನಿರ್ದೇಶಕರು,ಸದಸ್ಯರು ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.
ಸಂಘದ ಮುಖ್ಯಕಾರ್ಯನಿರ್ವಹಣಾಧಿಕಾರಿ ರವಿಪ್ರಸಾದ್ ಸಿ.ಕೆ.ಸ್ವಾಗತಿಸಿ,ವಂದಿಸಿದರು.

ಕೇಂದ್ರ ಸರಕಾರ ಪ್ರಾಯೋಜಿತ ಜೀವನ್ ಜ್ಯೋತಿ ಭೀಮಾ ಯೋಜನೆ ಮತ್ತು ಪ್ರಧಾನ ಮಂತ್ರಿ ಸುರಕ್ಷಾ ಯೋಜನೆಗಳಿಗೆ ಸಹಕಾರ ಸಂಘದ ಮೂಲಕ ಪ್ರಾರಂಭಿಸಲಾದ ” ಸಹಕಾರ ವಿಮಾ ಸ್ಪಂದನಾ ಯೋಜನೆ ” ಯಲ್ಲಿ ಸಹಕಾರ ಸಂಘದ ವತಿಯಿಂದ ಅಸಂಘಟಿತ ಕೃಷಿ ಕಾರ್ಮಿಕ ಶ್ರೇಣಿಯಲ್ಲಿ ಗುರುತಿಸಲಾದ ಐವರ್ನಾಡು ಗ್ರಾಮದ ಅಡಿಕೆ,ತೆಂಗು,ಮತ್ತು ಮರ ಏರುವ ಶ್ರಮಿಕರಿಗೆ ವಿಮಾ ಪ್ರೀಮಿಯಂ ಮೊತ್ತವನ್ನು ಉಚಿತವಾಗಿ ಭರಿಸಿ ಆ ಕುಟುಂಬಗಳಿಗೆ ವಿಮಾ ಭದ್ರತೆ ನೀಡುವ ಕಾರ್ಯಕ್ರಮ ಕೃಷಿ ವಲಯದ ಅಸಂಘಟಿತರಲ್ಲಿ ,ಅಸಂಘಟಿತರಾಗಿರುವ ಈ ಕಾರ್ಮಿಕರಿಗೆ ಕೇಂದ್ರ ಸರಕಾರ ಪ್ರಾಯೋಜಿತ ವಿಮಾ ಸೌಲಭ್ಯವನ್ನು ಹೊಂದಲು ಮತ್ತು ವಿಮಾ ಸೌಲಭ್ಯದ ಪ್ರಯೋಜನವನ್ನು ಇವರ ಅವಲಂಭಿತರಿಗೂ ಲಭ್ಯ ವಾಗುವಂತೆ ಪ್ರಯೋಜನ ಕಲ್ಪಿಸುವ ಈ ಕಾರ್ಯಕ್ರಮಕ್ಕೆ ಸಹಕಾರ ಸಂಘದ ವತಿಯಿಂದ ವಿಮಾ ಪ್ರೀಮಿಯಂ ಪಾವತಿಸುವ ಹಾಗೂ ಸಾಂಸ್ಥಿಕ ಬೆಂಬಲ ನೀಡುವ ವಿನೂತನ ಕಾರ್ಯ ಯೋಜನೆಯಾಗಿದ್ದು ಜನರು ಇದರ ಸದುಪಯೋಗಪಡಿಸಿಕೊಳ್ಳಬಹುದು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.