ಸಂಪಾಜೆ : ವರ್ತಕರ ಹಾಗೂ ಆಡಳಿತ ಮಂಡಳಿಯ ಜಂಟಿ ಸಭೆ

Advt_Headding_Middle
Advt_Headding_Middle
Advt_Headding_Middle

ಸಂಪಾಜೆ ಗ್ರಾಮ ಪಂಚಾಯತ್‌ನ ವಿಶೇಷ ಸಭೆಯು ಗ್ರಾಮ ಪಂಚಾಯತ್ ಸಭಾಭವನದಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ಸುಂದರಿ ಮುಂಡಡ್ಕ ರವರ ಅಧ್ಯಕ್ಷತೆಯಲ್ಲಿ ಗ್ರಾಮ ಪಂಚಾಯತ್ ಸಭಾಭವನದಲ್ಲಿ ಜರುಗಿತ್ತು.

ಕಾರ್ಯದರ್ಶಿಯವರಾದ ವಿದ್ಯಾಧರ ಸ್ವಾಗತಿಸಿ ವಿಚಾರ ಮಂಡಿಸಿದರು. ಸಭೆಯಲ್ಲಿ ಗ್ರಾಮದ ಸ್ವಚ್ಚತೆ ಹಾಗೂ ಗ್ರಾಮ ನೈರ್ಮಲ್ಯ ಹಾಗೂ ಕೋವಿಡ್-೧೯ ಬಗ್ಗೆ ವಿಸ್ತ್ಕತ ಚರ್ಚೆ ನಡೆಯಿತ್ತು ಲಯನ್ಸ್ ಕ್ಲಬ್ ಸದಸ್ಯರು ಕಾರ್ಮಿಕ ಮುಖಂಡರುಗಳು ಸಹ ಈ ದಿವಸ ಸಭೆಯಲ್ಲಿ ಉಪಸ್ಥಿತರಿದ್ದು ಸಲಹೆ ಸೂಚನೆ ನೀಡಿದರು.

ಗ್ರಾಮದ ಸ್ವಚ್ಚತೆ ಹಾಗೂ ಆರೋಗ್ಯದ ದೃಷ್ಟಿಯಿಂದ ಗ್ರಾಮದಲ್ಲಿ ಕೊರೋನಾ, ಡೆಂಗ್ಯೂ, ಮಲೇರಿಯ ಇತರ ಮಾರಕ ಜ್ವರಗಳು ಹರಡದಂತೆ ಮುಂಜಾಗ್ರತೆ ವಹಿಸುವುದು ಹಾಗೂ ಕಡ್ಡಾಯವಾಗಿ ಅರಿವು ಮೂಡಿಸುವುದು ಮತ್ತು ಮುಂದಿನ ದಿನಗಳಲ್ಲಿ ಕಟ್ಟು ನಿಟ್ಟಾಗಿ ಜಾರಿಗೊಳಿಸಲು ಸಭೆಯಲ್ಲಿ ತೀರ್ಮಾನಿಸಿ ಈ ಕೆಳಗಿನ ನಿರ್ಣಯ ಕೈಗೊಳ್ಳಲಾಯಿತ್ತು.

ಜಾಹೀರಾತು

೧. ಗ್ರಾಮದಲ್ಲಿ ಮತ್ತು ಸಾರ್ವಜನಿಕ ಸ್ಥಳದಲ್ಲಿ ಮಾಸ್ಕ್ ಧರಿಸತಕ್ಕದ್ದು ಹಾಗೂ ವರ್ತಕರು ಕಡ್ಡಾಯವಾಗಿ ಮಾಸ್ಕ್ ಧರಿಸಿ, ವ್ಯವಹಾರ ಮಾಡತಕ್ಕದ್ದು, ಹಾಗೂ ಗ್ರಾಹಕರಿಗೆ ಮಾಸ್ಕ್ ಧರಿಸುವ ಬಗ್ಗೆ ಸೂಚಿಸುವುದು ಹಾಗೂ ತಮ್ಮ ಅಂಗಡಿಗಳಲ್ಲಿ ಮಾಸ್ಕ ಬಗ್ಗೆ ಜಾಗೃತಿ ಹಾಗೂ ಪರಿಸರದಲ್ಲಿ ಉಗುಳಿದಂತೆ ಎಚ್ಚರ ವಹಿಸುವುದು.
೨. ಗ್ರಾಮದಲ್ಲಿ ವ್ಯವಹಾರ ನಡೆಸುವ ಹೋಟೆಲ್ ಉದ್ಯಮದವರು ಕಟ್ಟು ನಿಟ್ಟಾಗಿ ಸಭೆಯು ತೀರ್ಮಾನವನ್ನು ಪಾಲಿಸತಕ್ಕದ್ದು.
೩. ಹೋಟೆಲ್ ಗಳಲ್ಲಿ ತೆರೆದಿಟ್ಟ ಪದಾರ್ಥಗಳನ್ನು ಮಾರಾಟ ಮಾಡುವುದು ಶೌಚಾಲಯದಲ್ಲಿ ಸಾಕಾಷ್ಟು ನೀರಿನ ವ್ಯವಸ್ಥೆಯೊಂದಿಗೆ ಸೋಪ್ ಬಳಕೆ ಮಾಡಿ ಸಾರ್ವಜನಿಕ ಉಪಯೋಗಕ್ಕೆ ಇಡತಕ್ಕದ್ದು, ಸಾರ್ವಜನಿಕ ಸ್ಥಳಗಳಲ್ಲಿ ಉಗುಳುವುದು, ಕಶ್ಮಲ ವಸ್ತುಗಳನ್ನು ಹಾಕುವುದು ಹಾಗೂ ಇನ್ನಿತರ ಚಟುವಟಿಕೆಗಳನ್ನು ಪರಿಶೀಲಿಸಲು ಪ್ರತಿ ೧೫ ದಿನಕ್ಕೊಮ್ಮೆ ಪಂಚಾಯತ್ ಸಿಬ್ಬಂದಿ ಹೋಟೆಲ್ ಗೆ ಬಂದಾಗ ಪರಿಶೀಲನೆಗೆ ಅವಕಾಶ ಕಲ್ಪಿಸತಕ್ಕದು.
೪. ಕೋಳಿ ಅಂಗಡಿಯ ತ್ಯಾಜ್ಯವನ್ನು ಸಾರ್ವಜನಿಕ ಸ್ಥಳಗಳಲ್ಲಿ ಎಸೆಯದಂತೆ ಮುಂಜಾಗ್ರತೆ ವಹಿಸಬೇಕು. ತೆರೆದಿಟ್ಟ ಮಾಂಸಗಳನ್ನು ಮಾರಾಟ ಮಾಡುವಂತಿಲ್ಲ ಹಾಗೂ ಅಗತ್ಯ ಗ್ರಾಮ ಪಂಚಾಯತ್ ನ ನಿರ್ದೇಶನಗಳನ್ನು ಪಾಲಿಸತಕ್ಕದು.
೫. ಕಲ್ಲುಗುಂಡಿ ಪೇಟೆಯಲ್ಲಿರುವ ಚರಂಡಿಗಳನ್ನು ಹೊಳೆತ್ತಿ ಸರಾಗವಾಗಿ ನೀರು ಹರಿಯುವಂತೆ ಮಾಡಲು ಆಯಾ ಪ್ರದೇಶದ ವರ್ತಕರ ಸಹಕಾರದೊಂದಿಗೆ ಚರಂಡಿ ದುರಸ್ತಿಪಡಿಸಲು ತೀರ್ಮಾನಿಸಲಾಯಿತು.
೬. ಪ್ರತಿ ಅಂಗಡಿಗಳಲ್ಲಿ ಪರವಾನಿಗೆ ಕಡ್ಡಾಯವಾಗಿ ಇಡತಕ್ಕದು. ಪ್ರತಿ ತಿಂಗಳ ೧೫ ದಿನಕ್ಕೊಮ್ಮೆ ಪಂಚಾಯತ್ ಸಿಬ್ಬಂದಿ ವರ್ಗದವರು ಅಂಗಡಿಗಳಿಗೆ ಬಂದಾಗ ಸಾರ್ವಜನಿಕರಿಗೆ ಕಾಣುವಂತೆ ಪರವಾನಿಗೆ ತೂಗು ಹಾಕಬೇಕು ಹಾಗೂ ಈಗಾಗಲೇ ನವೀಕರಣ ಮಾಡದ ಅಂಗಡಿ ಪರವಾನಿಗೆ ಪ್ರತಿ ತಿಂಗಳು ರೂ ೨೦ ರಂತೆ ದಂಡನೆ ವಿಧಿಸಲು ನಿರ್ಣಯಿಸಲಾಯಿತು.
೭. ಪ್ರತಿ ಅಂಗಡಿಗಳಿಗೆ ಸಾಮಾಜಿಕ ಅಂತರವನ್ನು ಕಾಪಾಡುವುದು ಹಾಗೂ ಸಾನಿಟೈಸರ್ ಅಳವಡಿಸುವಂತೆ ನಿರ್ಣಯಿಸಲಾಯಿತು.
೮. ಪ್ರತಿ ತಿಂಗಳು ಸ್ವಚ್ಚತಾ ಶುಲ್ಕವನ್ನು ಅಂಗಡಿ ಮಾಲಕರು ವಸೂಲಾತಿಗೆ ಬಂದಾಗ ಕಡ್ಡಾಯವಾಗಿ ನೀಡುವುದು ತಪ್ಪಿದ್ದಲ್ಲಿ ಅವರ ಪರವಾನಿಗೆಯನ್ನು ಮುಟ್ಟುಗೋಲು ಹಾಕಲು ಈ ಸಭೆಯಲ್ಲಿ ತೀರ್ಮಾನಿಸಲಾಯಿತು. ಪರವಾನಿಗೆ ರಹಿತ ವ್ಯಾಪಾರಸ್ಥರ ಮೇಲೆ ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳಲು ತೀರ್ಮಾನಿಸಲಾಯಿತು. ಈಗಾಗಲೇ ಹಲವು ಬಾರಿ ನಿರ್ಣಯ ಕೈಗೊಂಡರೂ ಸೂಕ್ತ ಪರವಾನಿಗೆ ಪಡೆಯದೇ ಇರುವ ವರ್ತಕರು ೧ ವಾರದೊಳಗೆ ಕಛೇರಿಗೆ ಬಂದು ಪರವಾನಿಗೆಯನ್ನು ಪಡೆದುಕೊಳ್ಳುವಂತೆ ಸೂಚಿಸಲಾಗಿದೆ.
೯. ಸಾರ್ವಜನಿಕ ಸ್ಥಳಗಳಲ್ಲಿ ಸಾರ್ವಜನಿಕ ಚರಂಡಿಯ ಮೇಲೆ ನೀರು ತುಂಬಿದ ಟಯರ್ ಗಳು ಹಾಗೂ ಇನ್ನಿತರ ಗುಜರಿ ವಸ್ತುಗಳು ಇಡುವಂತಿಲ್ಲ. ಮತ್ತು ಗುಜರಿ ವಸ್ತುಗಳ ಮೇಲೆ ನೀರು ನಿಲ್ಲದಂತೆ ಎಚ್ಚರ ವಹಿಸಬೇಕು ಎಂದು ತೀರ್ಮಾನ ಕೈಗೊಳ್ಳಲಾಯಿತು.
ಸಭೆಯಲ್ಲಿ ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ಸುಂದರಿ ಮುಂಡಡ್ಕ, ಸದಸ್ಯರಾದ ಸೋಮಶೇಖರ್ ಕೊಯಿಂಗಾಜೆ, ಜಿ,ಕೆ ಹಮೀದ್, ಲುಕಾಸ್ ಟಿ.ಐ, ನಾಗೇಶ್ ಪಿ.ಆರ್, ಷಣ್ಮುಗಂ, ಶ್ರೀಮತಿ ಲೆತಿಶ್ಯಾ ಡಿಸೋಜ, ಕಟ್ಟಡ ಕಾರ್ಮಿಕ ಸಂಘದ ಅದ್ಯಕ್ಷರಾದ ಕೆ.ಪಿ ಜೋನಿ, ವರ್ತಕರ ಸಂಘದ ಅಧ್ಯಕ್ಷರಾದ ಯು.ಬಿ ಚಕ್ರಪಾಣಿ, ವರ್ತಕರ ಸಂಘದ ಕಾರ್ಯದರ್ಶಿಯವರಾದ ಕೆ.ಎ ರಜಾಕ್ ಮತ್ತು ಇನ್ನಿತರದ ಪ್ರಶಾಂತ್ ಇ.ವಿ, ಸುನೀಲ್ ಕುಮಾರ್, ವರೋನಿಕ ಡಿಸೋಜ, ಕೆ ಎಂ ಅಶ್ರಫ್, ಬಿ ಹಸೈನಾರ್, ಜೆರಾಲ್ಡ್ ಡಿಸೋಜ, ಅಬ್ದುಲ್ ಬಶೀರ್ ಮೊದಲಾದವರು ಉಪಸ್ಥಿತರಿದ್ದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.