HomePage_Banner
HomePage_Banner
HomePage_Banner
HomePage_Banner

ಜೂನ್ 9 ರಂದು ಪುತ್ತೂರಿನಲ್ಲಿ ಅಂಚೆ ಅದಾಲತ್

ಪುತ್ತೂರು ಅಂಚೆ ವಿಭಾಗದ ತ್ರೈಮಾಸಿಕ ಅಂಚೆ ಅದಾಲತ್ ಜೂನ್ 9ರಂದು 11 ಗಂಟೆಗೆ ಪುತ್ತೂರು ಅಂಚೆ ವಿಭಾಗದ ಹಿರಿಯ ಅಂಚೆ ಅಧೀಕ್ಷಕರ ಕಚೇರಿಯಲ್ಲಿ ನಡೆಯಲಿದೆ.
ಈ ಅದಾಲತ್ತಿನಲ್ಲಿ ಪುತ್ತೂರು, ಬಂಟ್ವಾಳ, ಬೆಳ್ತಂಗಡಿ, ಕಾರ್ಕಳ ಹಾಗೂ ಸುಳ್ಯ ತಾಲ್ಲೂಕುಗಳ ವ್ಯಾಪ್ತಿಯ ಅಂಚೆ ಸೇವೆಗೆ ಸಂಬಂಧಪಟ್ಟ ಎಲ್ಲ ರೀತಿಯ ಸಾರ್ವಜನಿಕ ಕುಂದು ಕೊರತೆಗಳನ್ನು ತಕರಾರುಗಳನ್ನು ಪರಿಶೀಲಿಸಲಾಗುವುದು.

ಸಾರ್ವಜನಿಕರು ಅಂಚೆ ಪುತ್ತೂರು ಅಂಚೆ ವಿಭಾಗಕ್ಕೆ ಸಂಬಂಧಪಟ್ಟ ದೂರುಗಳನ್ನು ಪತ್ರ ಮುಖೇನ ಅಂಚೆ ಅದಾಲತ್ ತಲೆಬರಹದಡಿಯಲ್ಲಿ ಜೂನ್ ರೊಳಗೆ ಹಿರಿಯ ಅಂಚೆ ಅಧೀಕ್ಷಕರು ಪುತ್ತೂರು ವಿಭಾಗ ಪುತ್ತೂರು 574201 ವಿಳಾಸಕ್ಕೆ ಅಥವಾ ದೂರುಗಳನ್ನು ವಾಟ್ಸಾಪ್ ಸಂಖ್ಯೆ 9448291073 ಕಳುಹಿಸಬಹುದು .ಹಾಗೆಯೇ ಅದೇ ದಿನ ಪೂರ್ವಾಹ್ನ ಗಂಟೆ 11ರಿಂದ 12 ರ ಒಳಗೆ ಸ್ಥಿರ ದೂರವಾಣಿ ಸಂಖ್ಯೆ 08251- 230201 ಗೆ ನೇರವಾಗಿ ಸಂಪರ್ಕಿಸಬಹುದು. ಪುತ್ತೂರು ಅಂಚೆ ವಿಭಾಗಕ್ಕೆ ಸಂಬಂಧಪಟ್ಟ ದೂರುಗಳನ್ನು ಮಾತ್ರ ಕಳುಹಿಸುವಂತೆ ಹಿರಿಯ ಅಂಚೆ ಅಧೀಕ್ಷಕರು, ಪುತ್ತೂರು ವಿಭಾಗ ಅವರ ಪ್ರಕಟಣೆ ತಿಳಿಸಿದೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.