HomePage_Banner
HomePage_Banner
HomePage_Banner
HomePage_Banner

ಮಳೆಹನಿ – ಹೊಸ ಚಿಗುರು

✍ ಚಂದ್ರಶೇಖರ ಎಂ. ಆಲೆಟ್ಟಿ

ಇಳೆಯ ಸಕಲಚಿತ್ತವು
ಹರುಷದಿ ಹೊಸ ಭರವಸೆಯೊಂದಿಗೆ ನಿಂತಿದೆ.
ಬಿಗಿದಪ್ಪಿಕೊಳ್ಳಲು ತಣ್ಣನೆಯ ಸ್ಪರ್ಶವ.
ಬಿಗಿದಪ್ಪಿಕೊಳ್ಳಲು ಬದುಕಿನ ಆಸರೆಯ.

ಹಂಬಲಿಸುವ ಧರೆಗೆ ಜೊತೆಯಾಗುವ ಪುಳಕದಲ್ಲಿ,
ನೀಲಿ ಆಕಾಶಕ್ಕೆ ಸವಾಲೆಸೆದ
ಕಾರ್ಮೋಡ ಬಿಗಿ ಹಿಡಿತದಿಂದ ಮೆಲ್ಲನೆ
ಜಾರಿ, ನಾ ಮುಂದು ತಾ ಮುಂದು
ಪ್ರಕೃತಿಮಾತೆಗೆ ಮಳೆಹನಿ ಮಿಂದು.
ಸುಗಂಧ ಪರಿಮಳ ಪಸರಿಸಲು.
ಹಚ್ಚ ಹಸಿರಿನ ಚಿಗುರೊಡೆಯಲು.

ಭಾವ ಜೀವಿಯೊಂದಿಗೆ ಬಲು ಆತ್ಮೀಯ.
ಬೀಸುವ ತಂಗಾಳಿಯಲ್ಲಿ ಮುದ್ದು ಮುಗುಳ್ನಗೆ,
ಚಿಟಪಟ ಹನಿಯ ಸಂಗೀತ ನಿನಾದ,
ಸಿಹಿಕಹಿ ನೆನಪುಗಳ ಮೆಲುಕು ಹೊಳೆಯಾಗಿ
ಹರಿಯುವುದು ನಿನ್ನೊಂದಿಗೆ.

ಓ ಮಳೆರಾಯ…
ಕ್ಷಮಿಸಿ ಬಿಡು. ನಿನಗೆ ವಿದಾಯ ಹೇಳುವ ಮನಸ್ಸು
ನನ್ನಲ್ಲಿಲ್ಲ…

✍ ಚಂದ್ರಶೇಖರ ಎಂ. ಆಲೆಟ್ಟಿ

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.