Breaking News

ಕೋಲ್ಚಾರು: ದರ್ಖಾಸು ಸೇತುವೆ ಕಾಮಗಾರಿ ಸಂಪೂರ್ಣ – ಸಂಚಾರಕ್ಕೆ ಮುಕ್ತ

Advt_Headding_Middle
Advt_Headding_Middle
Advt_Headding_Middle

ಆಲೆಟ್ಟಿ ಗ್ರಾಮದ ಕೋಲ್ಚಾರು ಪೈಂಬೆಚ್ಚಾಲಿನ ತೋಟಕೊಚ್ಚಿ ಎಂಬಲ್ಲಿ ನಿರ್ಮಾಣವಾಗುತ್ತಿದ್ದ ಸೇತುವೆ ಕಾಮಗಾರಿ ಪೂರ್ಣಗೊಂಡಿದ್ದು ಸಂಚಾರಕ್ಕೆ ಮುಕ್ತ ವಾಗಿದೆ.


ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಆಡಳಿತದ ಸರಕಾರವಿದ್ದಾಗ ಕರಾವಳಿ ಅಭಿವೃದ್ದಿ ಪ್ರಾಧಿಕಾರದ ಅದ್ಯಕ್ಷ ಮತ್ತು ಕುಮುಟಾ ವಿದಾನಸಭಾ ಕ್ಷೇತ್ರದ ಶಾಸಕರಾದ ಶ್ರೀಮತಿ ಶಾರದ ಶೆಟ್ಟಿ ಯವರು ರೂ.18 ಲಕ್ಷ ಅನುದಾನ ಮಂಜೂರುಗೊಳಿಸಿದ್ದರು.

ಜಿ.ಪಂಚಾಯತ್ ಸದಸ್ಯ ಹರೀಶ್ ಕಂಜಿಪಿಲಿ ಯವರು ರೂ.90000 ವನ್ನು ಸರಕಾರಕ್ಕೆ ಪಾವತಿ ಮಾಡಿ ಕಾಮಗಾರಿ ಕೆಲಸಕ್ಕೆ ಗುದ್ದಲಿ ಪೂಜೆ ನೆರವೇರಿಸಿದ್ದರು. ಅನುದಾನ ಸರಕಾರದಿಂದ ಮಂಜೂರುಗೊಂಡು ಗ್ರಾಮ ಪಂಚಾಯತ್ ವತಿಯಿಂದ ಸರಕಾರಕ್ಕೆ ರೂ.90000 ಮೊತ್ತ ಪಾವತಿಸಬೇಕಾಗಿತ್ತು. ಇದನ್ನು ಪಂಚಾಯತ್ ಆಡಳಿತ ಮಂಡಳಿಯವರು ನಿರಾಕರಿಸಿದರೆಂಬ ಕಾರಣಕ್ಕೆ ಈ ಭಾಗದ ನಾಗರೀಕರು ಪಂಚಾಯತ್ ಎದುರು ಒಂದು ದಿನದ ಪ್ರತಿಭಟನೆಯನ್ನು ಕೈಗೊಂಡಿದ್ದರು. ಸ್ಥಳಕ್ಕೆ ಆಗಮಿಸಿದ ಜಿ.ಪಂ.ಸದಸ್ಯ ಹರೀಶ್ ಕಂಜಿಪಿಲಿ ಭರವಸೆ ನೀಡಿದ ಮೇರೆಗೆ ಪ್ರತಿಭಟನೆ ಕೈಬಿಡಲಾಗಿತ್ತು. ದರ್ಖಾಸು ಎಂಬಲ್ಲಿ ತೋಡಿಗೆ ನಿರ್ಮಿಸಲಾದ ಸೇತುವೆಯ ಸಂಪರ್ಕದ ರಸ್ತೆಯ ಮೂಲಕ ತೋಟಕೊಚ್ಚಿ, ಪಾತಿಕಲ್ಲು, ಪುತ್ಯ, ಮಂಡೆಕೋಲು ಭಾಗಕ್ಕೆ ಸಂಪರ್ಕದ ರಸ್ತೆ ಯಾಗಿದ್ದು ತುಂಬಾ ಮನೆಗೆ ಪ್ರಯೋಜನವಾಗಿದೆ. ಈ ಸೇತುವೆ ನಿರ್ಮಾಣಕ್ಕಾಗಿ ಗ್ರಾ. ಪಂ.ಸದಸ್ಯೆ ಶ್ರೀಮತಿ ಗೀತಾ ಕೋಲ್ಚಾರು ಹಾಗೂ ಸ್ಥಳೀಯರಾದ ಮೂಸಾ ಪಿ.ಎಂ, ರಪೀಕ್ ಪಿ.ಎಂ, ಅದ್ದು ದರ್ಖಾಸು, ನಿಸಾರ್ ತೋಟಕೊಚ್ಚಿ ಮೊದಲಾದವರು ಸಹಕರಿಸಿರುತ್ತಾರೆ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.