Breaking News

ರಾಜ್ಯಕ್ಕೆ ಮಾದರಿಯಾಗುವ ಕಾರ್ಯ ಮಾಡಿದ ಸುಬ್ರಹ್ಮಣ್ಯ ಪಂಚಾಯತ್

Advt_Headding_Middle
Advt_Headding_Middle

 

ದುಡಿಯುವ ಕೈಗಳಿಗೆ ಉದ್ಯೋಗ ಖಾತ್ರಿಯಲ್ಲಿಯಡಿಯಲ್ಲಿ ಸಂಜೀವಿನಿ ಒಕ್ಕೂಟಕ್ಕೆ ಕೆಲಸ

ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಮಿಷನ್ ಸಹಯೋಗದೊಂದಿಗೆ ಪಂಚಾಯತ್ ವತಿಯಿಂದ ಸಂಜೀವಿನಿ ಒಕ್ಕೂಟವಾದ ಓಂ ಶ್ರೀ ಸಂಜೀವಿನಿ ಒಕ್ಕೂಟದ ವತಿಯಿಂದ ಉದ್ಯೋಗ ಖಾತ್ರಿಯ ಮೂಲಕ ಸಾರ್ವಜನಿಕ ಕೆಲಸವನ್ನು ಸುಬ್ರಹ್ಮಣ್ಯ ಗ್ರಾ.ಪಂ ಮಾಡುತಿದ್ದು ರಾಜ್ಯಕ್ಕೆ ಮಾದರಿ ಕಾರ್ಯ ಮಾಡಿದೆ.

 

ಸುಳ್ಯ ತಾಲ್ಲೂಕಿಗೆ ಈ ರೀತಿ ಯೋಜನೆ ಹಾಕಿಕೊಂಡ ಪ್ರಥಮ ಗ್ರಾಮ ಪಂಚಾಯತ್ ಎನ್ನಬಹುದು.

ಇತ್ತೀಚೆಗೆ ಪಂಚಾಯತ್ ನಲ್ಲಿ
ಸಂಜೀವಿನಿ ಸಿಬ್ಬಂದಿ ಹಾಗೂ ಪಂಚಾಯಿತಿ ಸಿಬ್ಬಂಧಿಗಳಿಗೆ ಈ ಕುರಿತು ಸಭೆ ಕರೆದು ಆಂದೋಲನ ರೀತಿಯಲ್ಲಿ ಉದ್ಯೋಗ ಚೀಟಿಯನ್ನು ಮಾಡಿಸಲಾಗಿತ್ತು. ಈ ಸಂದರ್ಭದಲ್ಲಿ ಸಂಜೀವಿನಿ ಸಿಬ್ಬಂದಿಗಳಾಗಿ ಹೊಸದಾಗಿ ಸುಮಾರು 30 ಜನರಿಗೆ ಉದ್ಯೋಗ ಚೀಟಿಯನ್ನು ಸದಸ್ಯರಿಗೆ ಮಾಡಲಾಗಿತ್ತು.


ಜೂ. 5 ರಿಂದ 22 ಜನ ಸಂಜೀವಿನಿ ಒಕ್ಕೂಟದ ಮಹಿಳೆಯರನ್ನು ಸೇರಿಸಿ ಸುಬ್ರಹ್ಮಣ್ಯದ ದೇವರ ಗದ್ದೆಯ ತೋಡಿನ ಕಾಡು ಕಡಿಯುವುದು, ಕೆಸರು ತೆಗೆಯುದು ಮುಂತಾದ ಅರ್ಥ ಪೂರ್ಣ ಕೆಲಸವನ್ನು ಮಾಡಿಸಲಾಗುತ್ತಿದೆ.

ಇದರಲ್ಲಿ ಹೆಚ್ಚಿನವರು ಮೊದಲ ಬಾರಿಗೆ ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಪಾಲ್ಗೊಂಡವರು. ಇಂದು ಮತ್ತೆ 5 ಜನ ಮಹಿಳೆಯರು ಹೊಸದಾಗಿ ಕೆಲಸಕ್ಕೆ ಸೇರಿದ್ದಾರೆ.


ಇತ್ತೀಚಿನ ವರೆಗೂ ಸ್ವಂತ ಕೆಲಸವನ್ನೇ ಉದ್ಯೋಗ ಖಾತ್ರಿಯಲ್ಲಿ ಮಾಡುತಿದ್ದು ಸಾರ್ವಜನಿಕ ಕೆಲಸವೊಂದನ್ನು ಒಟ್ಟಾಗಿ ಮಾಡುವುದು ಇದೇ ಮೊದಲಾಗಿದ್ದು ಇದು ಮಹತ್ವ ಪಡೆದಿದೆ. ಆರಂಭದಲ್ಲಿ ಪ್ರತಿಯೊಬ್ಬರಿಗೂ ಕನಿಷ್ಠ 14 ಮಾನವ ದಿನಗಳ ಕೆಲಸ ಕೊಡುವ ಯೋಜನೆಯನ್ನು ಹಾಕಿಕೊಂಡಿದೆ. ಒಂದು ಕುಟುಂಬಕ್ಕೆ ವರ್ಷಕ್ಕೆ 100 ಮಾನವ ದಿನಗಳ ಕೆಲಸ ಕೊಡಲು ಅವಕಾಶವಿದೆ.
ಗ್ರಾಮ ಪಂಚಾಯತ್ ವತಿಯಿಂದ ಕೆಲಸದ ಪೂರ್ವದಲ್ಲಿ ಎಲ್ಲಾ ಮಹಿಳೆಯರ ದೇಹದ ಉಷ್ಣತೆ ಪರೀಕ್ಷಿಸಿ, ಸರಕಾರದ ಕೋವಿಡ್- 19 ನಿಯಂತ್ರಣ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡಿದೆ.

ಈ ಹಿಂದೆ ತೋಡುಗಳ ಹೂಳನ್ನು ಈ ಯೋಜನೆ ಮುಖಾಂತರ ತೆಗೆಯಲು ಅವಕಾಶವಿರಲಿಲ್ಲ. ಈಗ ಅದಕ್ಕೆ ಅವಕಾಶ ದೊರೆತಿದೆ. ಈಗ ಆರಂಭಗೊಂಡಿರುವ ಕೆಲಸವನ್ನು ಉತ್ತಮ ರೀತಿಯಲ್ಲಿ ಮುಗಿಸುವುದು ನಮ್ಮ ಪ್ರಥಮ ಆದ್ಯತೆ. ಬೇಡಿಕೆಯಂತೆ ಮುಂದಿನ ದಿನಗಳಲ್ಲಿ ಕೆಲಸ ಕೊಡಲು ಸಿದ್ದರಿದ್ದೇವೆ.
– ಮುತ್ತಪ್ಪ ಪಿಡಿಒ ಗ್ರಾ.ಪಂ ಸುಬ್ರಹ್ಮಣ್ಯ

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.