Breaking News

ಯೇನೆಕಲ್ಲು: ಬಾನಡ್ಕ – ಬೋನಡ್ಕ ರಸ್ತೆಯಲ್ಲಿ ಘನ ವಾಹನಗಳು ಸಂಚರಿಸದಂತೆ ಮನವಿ

Advt_Headding_Middle
Advt_Headding_Middle

ಯೇನೆಕಲ್ಲು ಗ್ರಾಮದ ಬಾನಡ್ಕದಲ್ಲಿ ಕೆಂಪು ಕಲ್ಲಿನ ಕೋರೆ ಕೆಲಸ ನಡೆಯುತ್ತಿದ್ದು, ಮಳೆಗಾಲದಲ್ಲಿ ಬಾನಡ್ಕ ಬೋನಡ್ಕ ಮಣ್ಣಿನ ರಸ್ತೆಯಲ್ಲಿ ಘನ ವಾಹನಗಳು ಸಂಚರಿಸದಂತೆ ಬಾನಡ್ಕ ಭಾಗದ ಸಾರ್ವಜನಿಕರು ಸುಬ್ರಹ್ಮಣ್ಯ ಗ್ರಾ.ಪಂ.ಗೆ ಮನವಿ ಸಲ್ಲಿಸಿದ್ದಾರೆ.


ಈ ರಸ್ತೆ ಮಳೆಗಾಲದಲ್ಲಿ ತೀರಾ ಕೆಸರುಮಯವಾಗಿ ಪರಿವರ್ತನೆಗೊಂಡು ದ್ವಿಚಕ್ರ ವಾಹನ ಸಂಚಾರಕ್ಕೂ ಕಷ್ಟವಾಗುವುದರಿಂದ ಜೂನ್ ತಿಂಗಳ ಬಳಿಕ ಮಳೆಗಾಲ ಮುಗಿಯುವ ತನಕ ಈ ರಸ್ತೆಯಲ್ಲಿ ಕೆಂಪುಕಲ್ಲು ಸಾಗಿಸಬಾರದೆಂದು ಪಂಚಾಯತ್ ಗೆ ಮನವಿ ಮಾಡಲಾಗಿದೆ. ಸುಮಾರು 4 ವರ್ಷಗಳ ಹಿಂದೆಯೇ ಸುಬೇದಾರ್ ವಾಸುದೇವ ಬಾನಡ್ಕರವರ ನೇತೃತ್ವದಲ್ಲಿ ಪಂಚಾಯತ್ ಗೆ ಮನವಿ ಸಲ್ಲಿಸಿದ ಮೇರೆಗೆ ಗ್ರಾಮ ಸಭೆಯ ನಿರ್ಣಯದಂತೆ ಮುಖ್ಯ ರಸ್ತೆಯಿಂದ ಬಾನಡ್ಕ ರಸ್ತೆ ಆರಂಭವಾಗುವಲ್ಲಿ ಫಲಕ ಅಳವಡಿಸಲಾಗಿದೆಯಾದರೂ ಕಲ್ಲು ಸಾಗಾಟ ಮಾಡುವವರು ಫಲಕವನ್ನು ನಿರ್ಲಕ್ಷಿಸಿ ಕಲ್ಲು ಸಾಗಿಸುತ್ತಿದ್ದಾರೆ ಎಂದು ಈ ಭಾಗದ ಜನರ ಆರೋಪವಾಗಿದೆ.

ಈ ಬಗ್ಗೆ ಸ್ಥಳೀಯರಾದ ಮಾಜಿ ಸೈನಿಕ ವಾಸುದೇವ ಬಾನಡ್ಕರವರು ಪ್ರತಿಕ್ರಿಯಿಸಿ ‘ ಬಾನಡ್ಕ ಬೋನಡ್ಕ ರಸ್ತೆಯು ಮಣ್ಣಿನ ರಸ್ತೆಯಾಗಿರುವುದರಿಂದ ಮಳೆಗಾಲದಲ್ಲಿ ಲೋಡ್ ಗಾಡಿಗಳು ಸಂಚರಿಸಿದರೆ ರಸ್ತೆ ಸಂಪೂರ್ಣ ಹದಗೆಟ್ಟು ಊರಿನವರಿಗೆ ಸಂಚರಿಸಲು ಅನಾನುಕೂಲವಾಗುವುದರಿಂದ ಪಂಚಾಯತ್ ಗೆ ಜೂನ್ ಬಳಿಕ ಕಲ್ಲು ಸಾಗಾಟ ಮಾಡಲು ಅವಕಾಶ ನೀಡಬಾರದೆಂದು ಮನವಿ ಮಾಡಿದ್ದೇವೆ. ಗ್ರಾಮ ಸಭೆಯ ನಿರ್ಣಯದಂತೆ ಸೂಚನಾ ಫಲಕ ಅಳವಡಿಸಿದರೂ ಕಲ್ಲು ಸಾಗಿಸುವವರು ನಿರ್ಲಕ್ಷಿಸಿರುವುದು ಬೇಸರ ತಂದಿದೆ. ಇನ್ನು ಮುಂದೆಯಾದರೂ ಕೋರೆಗೆ ಸಂಬಂಧಿಸಿದವರು ಊರವರೊಂದಿಗೆ ಸಹಕರಿಸಬೇಕು’ ಎಂದು ಹೇಳಿದ್ದಾರೆ. ಪಂಚಾಯತ್ ಈ ಬಗ್ಗೆ ಯಾವ ಕ್ರಮ ಕೈಗೊಳ್ಳಲಿದೆಯೆಂದು ಕಾದು ನೋಡಬೇಕಿದೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.