ಕೃಷಿಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ತರಕಾರಿ ಬೀಜ ವಿತರಣೆ : ಶಾಸಕ ಅಂಗಾರ

Advt_Headding_Middle
Advt_Headding_Middle

 


“ಕೃಷಿಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಇಂದು ತರಕಾರಿ ಬೀಜಗಳನ್ನು ವಿತರಿಸಲಾಗುತ್ತಿದ್ದು, ಎಲ್ಲರೂ ತರಕಾರಿ ಬೆಳೆದು ಸ್ವಾವಲಂಬಿಗಳಾಗಬೇಕು” ಎಂದು ಶಾಸಕ ಎಸ್.ಅಂಗಾರ ಹೇಳಿದರು.

ಸಹಕಾರಿ ಸಂಘಗಳು ಮತ್ತು ಗ್ರಾಮ ವಿಕಾಸ ಸಮಿತಿ ವತಿಯಿಂದ ನಡೆಯುತ್ತಿರುವ ತರಕಾರಿ ಬೀಜ ವಿತರಣಾ ಕಾರ್ಯಕ್ರಮಕ್ಕೆ ಸುಳ್ಯ ಸಿ.ಎ.ಬ್ಯಾಂಕ್ ನಲ್ಲಿ ಚಾಲನೆ ನೀಡಿ ಅವರು ಮಾತನಾಡಿದರು.

“ತರಕಾರಿ ಬೆಳೆಯಲು ತುಂಬಾ ಜಾಗ ಬೇಕೆಂದು ಭಾವಿಸಬೇಡಿ. ಇರುವ ಜಾಗದಲ್ಲೇ ಇದನ್ನು ಬೆಳೆಯಬಹುದು. ಮತ್ತು ತರಕಾರಿಗಳಿಗೆ ರಾಸಾಯನಿಕ ಗೊಬ್ಬರವನ್ನು ಹಾಕದೇ‌ ಸಾವಯವವನ್ನೇ ಹಾಕಿದರೆ ಪೌಷ್ಟಿಕಾಂಶ ಹೆಚ್ಚು ದೊರೆಯುತ್ತದೆ” ಎಂದು ಹೇಳಿದರು.

ಸುಳ್ಯ ಸಿ.ಎ.ಬ್ಯಾಂಕ್ ಅಧ್ಯಕ್ಷ ಹರೀಶ್ ಬೂಡುಪನ್ನೆ ಅಧ್ಯಕ್ಷತೆ ವಹಿಸಿದರು. ತಾ.ಪಂ.ಅಧ್ಯಕ್ಷ ಚನಿಯ ಕಲ್ತಡ್ಕ ಕರಪತ್ರ ಬಿಡುಗಡೆ ಗೊಳಿಸಿದರು.

ಸುಳ್ಯ ತೋಟಗಾರಿಕಾಧಿಕಾರಿ ಸುಹಾನ, ಸುಳ್ಯದ ಉದ್ಯಮಿ ಮಧುಸೂದನ್, ಗ್ರಾಮ ವಿಕಾಸ ಸಮಿತಿಯ ಸಂಯೋಜಕರು ವಿನೋದ್ ಬೊಲ್ಮಲೆ ವೇದಿಕೆಯಲ್ಲಿದ್ದರು. ಗ್ರಾಮ ವಿಕಾಸ ಸಮಿತಿಯ ಸಂಚಾಲಕ ರಾಜೇಶ್ ಮೇನಾಲ ವಂದಿಸಿದರು. ಸಿ.ಎ. ಬ್ಯಾಂಕ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸುದರ್ಶನ್ ಸೂರ್ತಿಲ ಕಾರ್ಯಕ್ರಮ ನಿರೂಪಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.