ಬೆಳ್ಳಾರೆ ಜಕಾರಿಯಾ ಜುಮ್ಮಾ ಮಸೀದಿಯಲ್ಲಿ ಇಂದಿನಿಂದ ಪ್ರಾರ್ಥನೆಗೆ ಅವಕಾಶ

Advt_Headding_Middle
Advt_Headding_Middle

 

ಕೊರೊನಾ ವೈರಸ್ ತಡೆಗಟ್ಟುವ ನಿಟ್ಟಿನಲ್ಲಿ ಸರಕಾರವು ಕೈಗೊಂಡ ಕ್ರಮದಿಂದ ಪ್ರಾರ್ಥನಾ ಮಂದಿರಗಳ ಪ್ರವೇಶ ಸುಮಾರು 2 ತಿಂಗಳುಗಳಿಂದ ನಿರ್ಬಂಧಿಸಲಾಗಿದ್ದು ಇಂದಿನಿಂದ ಮತ್ತೆ ಪ್ರಾರ್ಥನೆಗೆ ಅವಕಾಶ ಕಲ್ಪಿಸಲಾಗಿದೆ.

ಬೆಳ್ಳಾರೆಯ ಮುಖ್ಯ ಪೇಟೆ ಸಮೀಪ ಇರುವ ಜಕಾರಿಯಾ ಜುಮ್ಮಾ ಮಸೀದಿ ಇಂದಿನಿಂದ ತೆರೆಯಲಾಗಿದೆ.

ಮಸೀದಿಗೆ ಬರುವವರು ಸ್ಯಾನಿಟೈಸರ್ ಮತ್ತು ಮುಖಕ್ಕೆ ಮಾಸ್ಕ್ ಕಡ್ಡಾಯವಾಗಿ ಹಾಕಿಕೊಂಡು ಬರಬೇಕು.

ಸರಕಾರದ ಆದೇಶಗಳನ್ನು
ಸಂಪೂರ್ಣ ವಾಗಿ ಪಾಲಿಸಲಾಗುವುದು.

ಮಸೀದಿಯಲ್ಲಿ ಪ್ರವೇಶಿಸುವವರಿಗೆ ಮತ್ತು ಹೊರಹೋಗುವ ವರಿಗೆ ಸೋಪ್ ಉಪಯೋಗಿಸಿ ಕೈಗಳನ್ನು ರೋಗಾಣು ಮುಕ್ತವಾಗಿಸಲು ವ್ಯವಸ್ಥೆ ಮಾಡಲಾಗಿದೆ.

ಅಂಗಶುದ್ದಿಯನ್ನು ಮನೆಯಿಂದಲೇ ಮಾಡಲು ನಿರ್ದೇಶನ ನೀಡಲಾಗಿದೆ.
ಮಸೀದಿಯ ಹೌಲುಗಳ ಬದಲು ನಲ್ಲಿ ನೀರಿನಿಂದ (ಟೇಪ್) ಅಂಗಶುದ್ದಿ.

ರೋಗಿಗಳು,ವೃದ್ಧರು,
ಮಕ್ಕಳು, ಪ್ರತಿರೋಧ ಶಕ್ತಿ ಕಮ್ಮಿ ಇರುವ ಮಂದಿಗೆ ಅವಕಾಶವಿಲ್ಲ.

ಅಪರಿಚಿತರು,ಯಾತ್ರಿಕರು ಮುಂತಾದವರಿಗೆ ಅನಿವಾರ್ಯ ವಾಗಿ ಬಂದರೆ ಮಸೀದಿಯ ಹೊರಗಿನ ಚಾವಡಿ ಯಲ್ಲಿ ನಮಾಜಿಗೆ ವ್ಯವಸ್ಥೆ ಮಾಡಲಾಗಿದೆ.

ಬಾಂಗಿಗೆ ಐದು ನಿಮಿಷಗಳ ಮೊದಲು ಮಸೀದಿಯನ್ನು ತೆರೆಯುವುದು ಜಮಾಅತನ್ನು ಹದಿನೈದು ನಿಮಿಷಗಳ ಒಳಗೆ ಮತ್ತು ಜುಮಾ ನಮಾಜು ಇಪ್ಪತ್ತು ನಿಮಿಷಗಳ ಒಳಗೆ ನಿರ್ವಹಿಸಿ ಇತರ ಸಮಯದಲ್ಲಿ ಮಸೀದಿಯನ್ನು ಬಂದ್ ಮಾಡಲಾಗುವುದು.

ಜನರು ನಮ್ಮೊಂದಿಗೆ ಸಹಕರಿಸಬೇಕು ಎಂದು ಮಸೀದಿ ಅಧ್ಯಕ್ಷ ಕೆ.ಎಂ.ಮಹಮ್ಮದ್ ಹಾಜಿಯವರು ತಿಳಿಸಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.