ಕ್ವಾರಂಟೈನ್ ಕ್ಯಾನ್ಸಲ್, ಮಹಾರಾಷ್ಟ್ರದಿಂದ ಬಂದವರ ಮನೆಯೇ ಸೀಲ್‌ಡೌನ್!

Advt_Headding_Middle
Advt_Headding_Middle

 


ಇನ್ನು ಮುಂದೆ ಸಾಂಸ್ಥಿಕ ಕ್ವಾರಂಟೈನ್ ರದ್ದು ಪಡಿಸಿ, ಪ್ರತಿ ವ್ಯಕ್ತಿಗೂ ಅವರವರ ಮನೆಯಲ್ಲಿಯೇ ಕ್ವಾರೆಂಟೈನ್ ಮಾಡಲಾಗುತ್ತದೆ ಎಂದು ಆರೋಗ್ಯ ಸಚಿವ ಶ್ರೀ ರಾಮುಲು ಹೇಳಿದ್ದಾರೆ.

ಉಡುಪಿಯಲ್ಲಿ ಇಂದು ಮಾತನಾಡಿದ ಅವರು, ವ್ಯಕ್ತಿಯ ಮನೆಯನ್ನು ಸಂಪೂರ್ಣ ಸೀಲ್ ಡೌನ್ ಮಾಡುತ್ತೇವೆ. ಸೀಲ್ ಮಾಡಿದ ಮೇಲೆ ಆತ ಮನೆಯಲ್ಲೇ ಇರಬೇಕು. ಹೊರಬಂದರೆ ಕೇಸ್ ಹಾಕುವ ತೀರ್ಮಾನ ಮಾಡಿದ್ದೇವೆ. ರಾಜ್ಯ ಮಟ್ಟದಲ್ಲೇ ಈ ತೀರ್ಮಾನ ತೆಗೆದುಕೊಂಡಿದ್ದೇವೆ ಎಂದಿದ್ದಾರೆ.

advertisement

ಜಿಲ್ಲಾಧಿಕಾರಿಗೆ ಜಿಲ್ಲೆಯ ಸಂಪೂರ್ಣ ಅಧಿಕಾರ ಕೊಡಲಾಗಿದೆ. ಸೀಲ್ ಡೌನ್ ಇದ್ದವರು ಹೊರಗೆ ಬಂದರೆ ಕೇಸ್ ಹಾಕಲಾಗುತ್ತದೆ. ಪೊಲೀಸ್, ಹೋಂ ಗಾರ್ಡ್ ಗಳನ್ನು ನೇಮಿಸಲಾಗುತ್ತದೆ. ಅದರೊಂದಿಗೆ ಆಶಾ, ಅಂಗನವಾಡಿ ಕಾರ್ಯಕರ್ತೆಯರೂ ನಿಗಾ ವಹಿಸಲಿದ್ದಾರೆ ಎಂದು ಹೇಳಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.