ಡೆಂಗ್ಯೂ ಹಾವಳಿಯನ್ನು ತಡೆಗಟ್ಟಲು ಮುಂಜಾಗೃತಾ ಕ್ರಮವನ್ನು ಕೈಗೊಳ್ಳುವ ಬಗ್ಗೆ ಮನವಿ

Advt_Headding_Middle
Advt_Headding_Middle

 

ಪೈಚಾರ್ ವ್ಯಾಪ್ತಿಯಲ್ಲಿ ಎರಡು ಮಕ್ಕಳನ್ನು ಸೇರಿಸಿ ಹತ್ತರಿಂದ ಹದಿನೈದು ಡೆಂಗ್ಯೂ ಪ್ರಕರಣಗಳು ಪತ್ತೆಯಾಗಿರುವುದಾಗಿ ತಿಳಿದು ಬಂದಿದ್ದು, ಈಗ ಡೆಂಗ್ಯೂವನ್ನು ತಡೆಗಟ್ಟುವ ಮುಂಜಾಗೃತಾ ಕ್ರಮವಾಗಿ ಜಾಲ್ಸೂರು ಗ್ರಾಮ ಪಂಚಾಯತ್ ಗೆ ಒಳಪಟ್ಟ ಪೈಚಾರ್ ವ್ಯಾಪ್ತಿಯಲ್ಲಾಗಲಿ ಸುಳ್ಯ ನಗರ ಪಂಚಾಯತ್ ವ್ಯಾಪ್ತಿಗೆ ಒಳಪಟ್ಟ ಅಂತಹ ಪ್ರದೇಶದಲ್ಲಿ ಮುಂಜಾಗ್ರತಾ ಕ್ರಮವಾಗಿ ಸರ್ಕಾರ ನಡೆಸುವಂತಹ ಯಾವುದೇ ಕ್ರಮವನ್ನು ಕೈಗೊಂಡಿರುವುದಿಲ್ಲ. ಅಲ್ಲದೆ ಕಳೆದ ಎರಡು ದಿವಸಗಳಲ್ಲಿ ಅತ್ಯಧಿಕ ಪ್ರಕರಣಗಳು ದಾಖಲಾದರೂ ಆಶಾ ಕಾರ್ಯಕರ್ತೆಯರ ಸಂದರ್ಶನ ನಡೆದಿರುವುದಿಲ್ಲ. ಆದ್ದರಿಂದ ಈ ಡೆಂಗ್ಯೂವನ್ನು ತಡೆಗಟ್ಟುವ ಸರಕಾರದಿಂದ ಲಭ್ಯವಿರುವಂತಹ ಸಕಲ ಸೌಲಭ್ಯಗಳನ್ನು ಈ ಪ್ರದೇಶಕ್ಕೆ ಒದಗಿಸಿಕೊಡಬೇಕೆಂದು ಎಸ್ ಡಿಪಿಐ ಪಕ್ಷದ ವತಿಯಿಂದ ಅಬೀದ್ ಪೈಚಾರ್ ಅವರು ಇಲಾಖೆಯ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರು.


ಈ ಸಂದರ್ಭದಲ್ಲಿ ಎಸ್ಡಿಪಿಐ ತಾಲ್ಲೂಕು ಕಾರ್ಯದರ್ಶಿ ಮುಸ್ತಫಾ ಎಂ ಕೆ., ನಗರ ಅಧ್ಯಕ್ಷ ಇಕ್ಬಾಲ್ ಸುಳ್ಯ, ಪೈಚಾರ್ ಅಧ್ಯಕ್ಷ ಅಬೀದ್ ಪೈಚಾರ್, ಅತ್ತರ್ ಮಹಮ್ಮದ್, ಮರ್ ಜೂಕ್ ಸುಳ್ಯ, ಇರ್ಷಾದ್ ಸುಳ್ಯ ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.