Breaking News

ಯೇನೆಕಲ್ಲು ಸಹಕಾರಿ ಸಂಘದಲ್ಲಿ ತರಕಾರಿ ಬೀಜ ವಿತರಣೆ

Advt_Headding_Middle
Advt_Headding_Middle

ಯೇನೆಕಲ್ಲು ಪ್ರಾ.ಕೃ.ಪ.ಸ.ಸಂಘ, ಗ್ರಾಮ ವಿಕಾಸ ಸಮಿತಿ ಯೇನೆಕಲ್ಲು ಮತ್ತು ಸಹಕಾರ ಭಾರತಿ ಆಶ್ರಯದಲ್ಲಿ ರೈತರಿಗೆ ವಿವಿಧ ಜಾತಿಯ ತರಕಾರಿ ಬೀಜಗಳ ವಿತರಣೆ ಮತ್ತು ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯ ಕಾರ್ಯಕ್ರಮ ಜೂ. 10ರಂದು ಸಂಘದ ಸಭಾ ಭವನದಲ್ಲಿ ನಡೆಯಿತು. ಸಂಘದ ಅಧ್ಯಕ್ಷ ಭವಾನಿಶಂಕರ ಪೂಂಬಾಡಿ, ಉಪಾಧ್ಯಕ್ಷ ಭರತ್ ನೆಕ್ರಾಜೆ, ನಿರ್ದೇಶಕರುಗಳಾದ ಕಿರಣ್ ಕುಮಾರ್ ಮಾದನಮನೆ, ಅಣ್ಣೋಜಿ ಗೌಡ ಕಟ್ಟ, ಶ್ರೀನಾಥ್ ಆಚಾರ್ಯ, ಸಂಘದ ಸಿಬ್ಬಂದಿ ವರ್ಗ, ಸಹಕಾರ ಭಾರತಿಯ ಸುಳ್ಯ ತಾಕೂಕು ಅಧ್ಯಕ್ಷ ಪ್ರವೀಣ್ ದೊಡ್ಡತೋಟ ಸೇರಿದಂತೆ ಸಂಘದ ಸದಸ್ಯರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ರೈತ ಸದಸ್ಯರಿಗೆ ತರಕಾರಿ ಬೀಜಗಳ ಸುಮಾರು 300 ಕಿಟ್ ವಿತರಿಸಲಾಯಿತು.

ಗುತ್ತಿಗಾರು ವಲಯ ಬಿ.ಜೆ.ಪಿ. ಶಕ್ತಿ ಕೇಂದ್ರದ ಅಧ್ಯಕ್ಷ ಶಿವಕುಮಾರ್ ನಡುತೋಟ ಸ್ವಾಗತಿಸಿ, ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರತನ್ ಕಲ್ಕುದಿ ವಂದಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.