Breaking News

ಪಂಜ: ತರಕಾರಿ ಬೀಜ ವಿತರಣೆ ಕಾರ್ಯಕ್ರಮ “ಕೃಷಿ ಸಂಸ್ಕೃತಿಯನ್ನು ಬೆಳೆಸಿ”- ನ.ಸೀತಾರಾಮ

Advt_Headding_Middle
Advt_Headding_Middle

“ಕೈಗಾರಿಕರಣ ಕ್ರಾಂತಿಯಿಂದ ನಮ್ಮ ಕೃಷಿ ಸಂಸ್ಕೃತಿಯ ಮೇಲೆ
ಬಹಳಷ್ಟು ಪರಿಣಾಮಗಳು ಬೀರಿದೆ. ಇದರಿಂದಾಗಿ ಪರಿಸರ, ಬದುಕಿನಲ್ಲಿ ಅನೇಕ ಸಮಸ್ಯೆಗಳು ಎದುರಾಗಿದೆ. ಕೊರೋನಾ ಮಹಾಮಾರಿ ಯಿಂದ ವಿಶ್ವವೇ ಕಂಗೆಟ್ಟಿದೆ.ಕೃಷಿ ಸಂಸ್ಕೃತಿ ಗಟ್ಟಿಯಾಗಲಿ, ಜೀವನ ಮೌಲ್ಯಗಳು ಬೆಳೆಯಲಿ.” ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಪ್ರಮುಖ್ ನಾ. ಸೀತಾರಾಮ ಹೇಳಿದರು .

ಅವರು ಜೂ.೧೦ ರಂದು. ಪಂಜ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ, ಗ್ರಾಮ ವಿಕಾಸ ಸಮಿತಿ ಪಂಜ ಐವತ್ತೊಕ್ಲು, ಕೂತ್ಕುಂಜ, ಬಳ್ಪ, ಕೇನ್ಯ ಇವರ ವತಿಯಿಂದ ಪಂಜ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಸಭಾಭವನದಲ್ಲಿ ಜರುಗಿದ ತರಕಾರಿ ಬೀಜ ವಿತರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ, ದಿಕ್ಸೂಚಿ ಭಾಷಣ ಮಾಡಿದರು. ಸಭಾಧ್ಯಕ್ಷತೆಯನ್ನು ಪಂಜ ಪ್ರಾಥಮಿಕ ಕೃಷಿ ಪತ್ತಿನ ಅಧ್ಯಕ್ಷ ಸುಬ್ರಹ್ಮಣ್ಯ ಕುಳ ವಹಿಸಿದ್ದರು.

ಮುಖ್ಯ ಅತಿಥಿಯಾಗಿ ಪಂಜ ಗ್ರಾ.ಪಂ. ಅಧ್ಯಕ್ಷ ಕಾರ್ಯಪ್ಪ ಗೌಡ ಚಿದ್ಗಲ್ಲು , ಸಂಘದ ನಿಕಟಪೂರ್ವ ಅಧ್ಯಕ್ಷ, ಹಾಲಿ ನಿರ್ದೇಶಕ ಚಂದ್ರಶೇಖರ ಶಾಸ್ತ್ರಿ, ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ನೇಮಿರಾಜ ಪಲ್ಲೋಡಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಪಾರ್ವತಿ ಕೃಷ್ಣ ನಗರ ಪ್ರಾರ್ಥಿಸಿದರು. ನಿತ್ಯಾನಂದ ಮೇಲ್ಮನೆ ನಿರೂಪಿಸಿದರು. ಸುಬ್ರಮಣ್ಯ ಕುಳ ಸ್ವಾಗತಿಸಿದರು. ನೇಮಿರಾಜ ಪಲ್ಲೋಡಿ ವಂದಿಸಿದರು. ,’ಆತ್ಮ ನಿರ್ಭರ ಭಾರತ” ಕ್ಕಾಗಿ ಒಂದು ಪುಟ್ಟ ಹೆಜ್ಜೆ
ಭಿತ್ತಿಪತ್ರವನ್ನು ಬಿಡುಗಡೆ ಗೊಳಿಸಲಾಯಿತು .

ಮಾಸ್ಕ್ ಧರಿಸಿ, ಅಂತರ ಕಾಯ್ದುಕೊಂಡು
ಕಾರ್ಯಕ್ರಮ ಜರಗಿತು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.