Breaking News

ಕೊಡಗು ಸಂಪಾಜೆ: ರೈತರ ಹಿತರಕ್ಷಣಾ ಸಮಿತಿ ರಚನೆ

Advt_Headding_Middle
Advt_Headding_Middle

ಕೊಡಗು ಸಂಪಾಜೆ ಗ್ರಾಮದ ರೈತರ ಹಿತರಕ್ಷಣಾ ಸಮಿತಿ ರಚನೆ ಕುರಿತಂತೆ ಗ್ರಾಮದ ಕೃಷಿಕರ ಸಭೆಯು ಗ್ರಾಮ ಪಂಚಾಯತಿ ಸಭಾಭವನದಲ್ಲಿ ಜೂ.11ರಂದು ನಡೆಯಿತು.
ಕೊಡಗು ಸಂಪಾಜೆ ಗ್ರಾಮ ಪಂಚಾಯತಿ ಅಧ್ಯಕ್ಷ ಕುಮಾರ ಚಿದ್ಕಾರ್ ಅಧ್ಯಕ್ಷತೆ ವಹಿಸಿದ್ದರು. ಸಭೆಯಲ್ಲಿ ನಿವೃತ್ತ ಶಿಕ್ಷಕ ಕೆ.ಕೆ. ವೆಂಕಪ್ಪ ಮಾಸ್ತರ್ ಅವರು ಮಾತನಾಡಿ ” ಗ್ರಾಮದಲ್ಲಿ ಅಡಿಕೆ ಕೃಷಿಕರು ಹಳದಿ ರೋಗದಿಂದ ಸಂಕಷ್ಟದಲ್ಲಿದ್ದಾರೆ. ಉಪ ಕೃಷಿ ಬೆಳೆಗಳಾದ ಕೊಕ್ಕೊ, ರಬ್ಬರ್ ಸೇರಿದಂತೆ ಕಾಡುತ್ಪತಿ ಬೆಳೆಗಳಲ್ಲಿ ಶೇಕಡಾ 75 ರಷ್ಟು ಮಂಗ, ಆನೆ ಸೇರಿದಂತೆ ಕಾಡುಪ್ರಾಣಿಗಳ ಉಪಟಳದಿಂದ ನಾಶವಾಗುತ್ತಿದೆ. ಹಾಗಾಗಿ ರೈತರಿಗೆ ಪರಸ್ಪರ ಕೃಷಿ ಬೆಳೆಯ ಬಗ್ಗೆ, ಚರ್ಚಿಸುವ ಸಲುವಾಗಿ ರೈತರ ಹಿತರಕ್ಷಣಾ ಸಮಿತಿ ರಚನೆ ಮಾಡಬೇಕಾಗಿದೆ ಎಂದು ಹೇಳಿದರು.


ಈ ಸಂದರ್ಭದಲ್ಲಿ ಸಂಪಾಜೆ ಪಯಸ್ವಿನಿ ಬ್ಯಾಂಕ್ ನ ಮಾಜಿ ಅಧ್ಯಕ್ಷ, ಹಾಲಿ ಸದಸ್ಯ ಬಿ.ಎ. ಗಣಪತಿ, ಕೊ.ಸಂಪಾಜೆ ಶಾಲಾ ಎಸ್ ಡಿ.ಎಂ.ಸಿ. ಅಧ್ಯಕ್ಷ ಪುರುಷೋತ್ತಮ ಬಾಳೆಹಿತ್ಲು, ಜಯಪ್ರಕಾಶ್ ಭಟ್ ಗಾಣಿಗದ್ದೆ , ಉತ್ತಯ್ಯ ಕಡಂಬಡ್ಕ ಸೇರಿದಂತೆ ಗ್ರಾಮದ ಕೃಷಿಕರು ಉಪಸ್ಥಿತರಿದ್ದು, ಸೂಕ್ತ ಸಲಹೆ, ಸೂಚನೆಗಳನ್ನು ನೀಡಿದರು.


ಬಳಿಕ ರೈತರ ಹಿತರಕ್ಷಣಾ ವೇದಿಕೆಯನ್ನು ರಚಿಸಲಾಗಿದ್ದು, ಅಧ್ಯಕ್ಷರಾಗಿ ಕೆ.ಕೆ. ವೆಂಕಪ್ಪ ಮಾಸ್ತರ್, ಕಾರ್ಯದರ್ಶಿಯಾಗಿ ಪುರುಷೋತ್ತಮ ಬಾಳೆಹಿತ್ಲು, ಖಜಾಂಜಿಯಾಗಿ ಹುಕ್ರಪ್ಪ ಗೌಡ ಹೊದ್ದೆಟ್ಟಿ ಆಯ್ಕೆಯಾದರು. ಸದಸ್ಯರುಗಳಾಗಿ ಗ್ರಾಮ ಪಂಚಾಯತಿ ಅಧ್ಯಕ್ಷ ಕುಮಾರ ಚಿದ್ಕಾರ್, ಜಯಪ್ರಕಾಶ್ ಭಟ್ ಗಾಣಿಗದ್ದೆ, ಉತ್ತಯ್ಯ ಕಡಂಬಡ್ಕ, ಬಿ.ಎ. ಗಣಪತಿ ಆಯ್ಕೆಯಾದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.