ನಗರ ಪಂಚಾಯತ್ ಮಾರುಕಟ್ಟೆಯ ಬೃಹತ್ ಮರಗಳಿಗೆ ಕೊಡಲಿಯೇಟು

Advt_Headding_Middle
Advt_Headding_Middle

ಸುಳ್ಯ ನ.ಪಂ.ಎದುರುಗಡೆಯ ಮೀನು ಮಾರುಕಟ್ಟೆಯ ಪಕ್ಕದಲ್ಲಿರುವ ಹಳೇ ತರಕಾರಿ ಮಾರುಕಟ್ಟೆಯ ಆವರಣದಲ್ಲಿದ್ದ ಮೂರು ಬೃಹತ್ ದೇವದಾರು ಮರಗಳಿಗೆ ನ.ಪಂ.ಕೊಡಲಿಯೇಟು ಹಾಕಿದೆ. ಬೃಹತ್ ಗಾತ್ರದ 2 ಮರಗಳನ್ನು ಸ್ವಲ್ಪ ಉದ್ದದ ಕಾಂಡಗಳನ್ನು ಬಾಕಿ ಉಳಿಸಿ, ಸಂಪೂರ್ಣ ಗೆಲ್ಲುಗಳನ್ನು ಕಡಿದು ಬೋಳು ಮಾಡಲಾಗಿದೆ. ಇನ್ನೊಂದು ಮರದ ಗೆಲ್ಲುಗಳನ್ನು ಕಡಿಯಲಾಗುತ್ತಿದೆ.


ಈ ಬಗ್ಗೆ ನ.ಪಂ.ನ್ನು ಸಂಪರ್ಕಿಸಿ, ವಿಚಾರಿಸಿದಾಗ ಮರಗಳ ಗೆಲ್ಲುಗಳು ಅಪಾಯಕಾರಿಯಾಗಿದ್ದುದರಿಂದ ಅರಣ್ಯ ಇಲಾಖೆಗೆ ಹೇಳಿ ಕಡಿಸಲಾಗುತ್ತಿದೆ ಎಂಬ ಉತ್ತರ ದೊರೆತಿದೆ. ಆದರೆ ಅಪಾಯಕಾರಿಯಾಗಿರುವ ಗೆಲ್ಲನ್ನು ಮಾತ್ರ ಕಡಿಯುವುದು ಬಿಟ್ಟು, ಇಡೀ ಮರದ ಸಂಪೂರ್ಣ ಗೆಲ್ಲುಗಳನ್ನು ಕಡಿದು ಬೋಳುಗೊಳಿಸಲಾಗಿದೆ. ಇದರಿಂದಾಗಿ ವಿಶಾಲವಾಗಿ ಕೊಂಬೆಗಳನ್ನು ಚಾಚಿ, ಆ ಪ್ರದೇಶಕ್ಕೆ ನಾಲ್ಕಾರು ದಶಕಗಳಿಂದ ನೆರಳು ನೀಡುತ್ತಿದ್ದ ಮರ ಬೆತ್ತಲೆಯಾಗಿ, ಬಿಸಿಲು ಆವರಿಸಿಕೊಂಡಿದೆ.

ಮುಂದಕ್ಕೆ ಮರದ ಗೆಲ್ಲು ಬಿದ್ದು, ಅಪಾಯ ಸಂಭವಿಸಬಹುದೆಂಬ ನಿರೀಕ್ಷೆಯಲ್ಲಿ ಗೆಲ್ಲುಗಳನ್ನು ತೆಗೆಯಲು ಅರಣ್ಯ ಇಲಾಖೆಗೆ ಬರೆದುಕೊಂಡಿದ್ದೆವು. ಅವರು ಎಲ್ಲಾ ಗೆಲ್ಲುಗಳನ್ನು ಕಡಿದು, ಬೋಳುಗೊಳಿಸಿದ್ದಾರೆಂದು ಗೊತ್ತಿಲ್ಲ. ನಾನು ಸ್ಥಳಕ್ಕೆ ಹೋಗಿ ಪರಿಶೀಲಿಸುತ್ತೇನೆ.
                                                                                                                                                         – ಮತ್ತಡಿ, ನ.ಪಂ. ಮುಖ್ಯಾಧಿಕಾರಿ

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.