ಆಲೆಟ್ಟಿ :ಬಿ.ಜೆ.ಪಿ.ಗ್ರಾಮ ಸಮಿತಿ ಕಾರ್ಯಕರ್ತರ ಸಭೆ

Advt_Headding_Middle
Advt_Headding_Middle

ಆಲೆಟ್ಟಿ ಭಾರತೀಯ ಜನತಾ ಪಕ್ಷದ ಗ್ರಾಮ ಸಮಿತಿ ಕಾರ್ಯಕರ್ತರ ಸಭೆಯು ಜೂ.11 ರಂದು ಆಲೆಟ್ಟಿ ಸೊಸೈಟಿ ಸಭಾಂಗಣದಲ್ಲಿ ನಡೆಯಿತು.

ಅರಂತೋಡು ಶಕ್ತಿ ಕೇಂದ್ರದ ಅಧ್ಯಕ್ಷ ಕರುಣಾಕರ ಹಾಸ್ಪಾರೆ ಯವರು ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭದಲ್ಲಿ ಸುಳ್ಯ ನ.ಪಂ.ಸದಸ್ಯ ವಿನಯ ಕಂದಡ್ಕ ರವರು ಮಾತನಾಡಿ ಮುಂದಿನ ಗ್ರಾಮ ಪಂಚಾಯತ್ ಚುನಾವಣೆಯನ್ನು ಎದುರಿಸುವ ನಿಟ್ಟಿನಲ್ಲಿ ಹಿಂದಿನ 5 ವರ್ಷದ ಆಡಳಿತ ಅವಧಿಯಲ್ಲಿ ಕೈಗೊಂಡ ಗ್ರಾಮದ ಅಭಿವೃದ್ಧಿ ಕಾರ್ಯಗಳ ಬಗ್ಗೆ ಜನತೆಗೆ ತಿಸುವಂತಾಗಬೇಕು. ಪ್ರತೀ ಮನೆ ಮನೆಗೆ ಭೇಟಿ ನೀಡಿ ಪ್ರದಾನಿ ನರೇಂದ್ರ ಮೋದಿಯವರ ಒಂದು ವರ್ಷದ ಸರಕಾರದ ಸಾಧನೆಗಳ ಕರಪತ್ರ ಹಂಚಿ ಪ್ರಚಾರಪಡಿಸಬೇಕು. ಸ್ವದೇಶಿ ವಸ್ತುಗಳನ್ನು ಬಳಸುವಂತೆ ಎಲ್ಲರೂ ಸಂಕಲ್ಪ ಮಾಡುವ ಬಗ್ಗೆ ನಿರ್ಧಾರ ಕೈಗೊಳ್ಳುಂತೆ ತಿಳಿಸಿದರು.


ಈ ಸಂದರ್ಭದಲ್ಲಿ ಸೊಸೈಟಿ ಅಧ್ಯಕ್ಷ ಶ್ರೀಪತಿ ಭಟ್ ಮಜಿಗುಂಡಿ, ಪಂಚಾಯತ್ ಅಧ್ಯಕ್ಷ ಹರೀಶ್ ರಂಗತ್ತಮಲೆ, ಸುದರ್ಶನ ಪಾತಿಕಲ್ಲು, ಸುಧಾಕರ ಆಲೆಟ್ಟಿ, ತೀರ್ಥಕುಮಾರ್ ಕುಂಚಡ್ಕ, ಶಿವರಾಮ ಕಾಪುಮಲೆ,ವಸಂತ ಬಾಳೆಹಿತ್ಲು, ಶ್ರೀಮತಿ ವೇದಾವತಿ ಆಲೆಟ್ಟಿ,ಬಾಲಕೃಷ್ಣ ಆಳ್ವ ಅರಂಬೂರು, ದಿನೇಶ್ ಆಲೆಟ್ಟಿ, ಮಹೇಶ್ ಮೊರಂಗಲ್ಲು, ಪದ್ಮಯ್ಯ ಪಡ್ಪು ಅರಂಬೂರು, ಪ್ರದೀಪ್ ಕೊಲ್ಲರಮೂಲೆ, ಪ್ರಶಾಂತ್ ಕೋಲ್ಚಾರು, ಗುರುರಾಜ್ ಭಟ್ ಎಲಿಕ್ಕಳ, ಉಮೇಶ್ ಕುಲಾಲ್ ಆಲೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.