ಪ್ರಸಕ್ತ ಸನ್ನಿವೇಶದಲ್ಲಿ ಶಾಲೆ ಆರಂಭಿಸುವುದು ಸರಿಯಲ್ಲ : ಶರೀಫ್ ಭಾರತ್ ಬಾಳಿಲ

Advt_Headding_Middle
Advt_Headding_Middle

ಮಹಾಮಾರಿ ಕೊರೊನ ಕೋವಿಡ್ 19 ರೋಗವು ದಿನದಿಂದ ದಿನಕ್ಕೆ ಹೆಚ್ಚಾಗುತ್ತಾ ಇದ್ದು ಸರಕಾರ ಮತ್ತು ಅಧಿಕಾರಿಗಳು ಪರಿಸ್ಥಿತಿಯನ್ನು ನಿಯಂತ್ರಿಸಲು ಹರಸಾಹಸ ಪಡುತ್ತಿದ್ದಾರೆ ಇದರ ಜೊತೆಗೆ ಜನಸಾಮಾನ್ಯರು ಕೂಡಾ ಪರಿಸ್ಥಿತಿಯನ್ನು ಅವಲೋಕನ ಮಾಡಿಕೊಂಡು ಅದನ್ನು ತಡೆಯಲು ಮುಂಜಾಗ್ರತಾ ಕ್ರಮವನ್ನು ಕೈಗೊಳ್ಳುತ್ತಿದ್ದಾರೆ. ಇಂತಹ ಸಂಧರ್ಭದಲ್ಲಿ ಈ ಶೈಕ್ಷಣಿಕ ವರ್ಷವನ್ನು ಈಗಲೇ ಆರಂಭಿಸುವುದು ಸರಿಯಲ್ಲ.ಪ್ರಸ್ತುತ ಶಾಲೆ ಆರಂಭಿಸುವ ಬಗ್ಗೆ ಖಾಸಗಿ ವಿದ್ಯಾಸಂಸ್ಥೆಗಳ ಒತ್ತಡ ಮತ್ತು ಲಾಬಿಯು ಇರುವ ಬಗ್ಗೆ ಸಂಶಯ ಮೂಡುತ್ತಿದೆ. ಒಂದು ವೇಳೆ ಶಾಲೆ ಪುನರಾರಂಭಗೊಂಡು ಇದರಿಂದ ವಿದ್ಯಾರ್ಥಿಗಳಿಗೆ ಏನಾದರೂ ತೊಂದರೆ ಉಂಟಾದರೆ ಅಥವಾ ವಿದ್ಯಾರ್ಥಿಗಳಿಗೆ ವೈರಸ್ ಬಾಧಿಸಿದರೆ ಇದಕ್ಕೆ ಶಾಲಾ ಮುಖಸ್ಥರು ಅಥವಾ ಸಂಬಂಧಪಟ್ಟ ಅಧಿಕಾರಿಗಳನ್ನು ನೇರ ಹೊಣೆಗಾರರನ್ನಾಗಿ ಮಾಡುವ ಸುತ್ತೋಲೆಯನ್ನು ಇಲಾಖೆಯು ಹೊರಡಿಸಬೇಕು.

ಶರೀಫ್ ಭಾರತ್ ಬಾಳಿಲ
ಆರ್ಟಿಐ ಕಾರ್ಯಕರ್ತರು,
ಮಾಜಿ ಅಧ್ಯಕ್ಷರು ಗ್ರಾಮ ಪಂಚಾಯತ್ ಬಾಳಿಲ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.