ಜೂ.16ರಂದು ಕನಕಮಜಲಿನಲ್ಲಿ ಯುವಕ ಮಂಡಲದ ವತಿಯಿಂದ ಹಣ್ಣಿನ ಗಿಡಗಳು ಮತ್ತು ಹಲಸಿನ ಹಣ್ಣಿನ ಖಾದ್ಯಗಳ ಮಾಹಿತಿ ಶಿಬಿರ

Advt_Headding_Middle
Advt_Headding_Middle

ಕನಕಮಜಲು ಗ್ರಾಮ ಪಂಚಾಯತಿ ಮತ್ತು ಯುವಜನ ವಿಕಾಸ ಕೇಂದ್ರ ಯುವಕಮಂಡಲ ಕನಕಮಜಲು ಇದರ ವತಿಯಿಂದ ಹಣ್ಣಿನ ಗಿಡಗಳು ಮತ್ತು ಹಲಸಿನ ಹಣ್ಣಿನ ಖಾದ್ಯಗಳ ಕುರಿತು ಮಾಹಿತಿ ಶಿಬಿರವು ಕನಕಮಜಲಿನ ಶ್ರೀ ಆತ್ಮಾರಾಮ ಭಜನಾ ಮಂದಿರದ ಸಭಾಭವನದಲ್ಲಿ ಜೂ.16ರಂದು ನಡೆಯಲಿದೆ.
ಗ್ರಾಮ ಪಂಚಾಯತಿ ಅಧ್ಯಕ್ಷೆ ಶ್ರೀಮತಿ ಜಯಲತ ಗಬ್ಬಲಡ್ಕ ಅಧ್ಯಕ್ಷತೆ ವಹಿಸಲಿದ್ದಾರೆ.

ಕಾರ್ಯಕ್ರಮದಲ್ಲಿ ನಮ್ಮ ಪರಿಸರದಲ್ಲಿ ಬೆಳೆಯುವ ಹಣ್ಣಿನ ಗಿಡಗಳು ಎಂಬ ವಿಷಯದ ಕುರಿತು ಅಡಿಕೆ ಪತ್ರಿಕೆಯ ಅಂಕಣಕಾರರಾದ ಅನಿಲ್ ಬಳಂಜ,ಹಾಗೂ ಹಲಸಿನ ಹಣ್ಣಿನ ಖಾದ್ಯಗಳು ಎಂಬ ವಿಷಯದ ಕುರಿತು ಶ್ರೀಮತಿ ಶೈಲಜ ಬಳಂಜ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿ ಮಾಹಿತಿ ನೀಡಲಿದ್ದಾರೆ.
ಗ್ರಾ.ಪಂ. ಉಪಾಧ್ಯಕ್ಷ ಶ್ರೀಧರ ಕುತ್ಯಾಳ, ಕನಕಮಜಲು ಪ್ರಾ.ಕೃ.ಪ.ಸ.ಸಂಘದ ಉಪಾಧ್ಯಕ್ಷ ನಾರಾಯಣ ಬೊಮ್ಮೆಟ್ಟಿ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿರಲಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.