Breaking News

ಬಾಲ ಕಾರ್ಮಿಕ ಪದ್ಧತಿ ಮುಕ್ತ ಗೊಳಿಸಲು ನಿರಂತರ ಜಾಗೃತಿ

Advt_Headding_Middle
Advt_Headding_Middle

 

ಸುಳ್ಯದಲ್ಲಿ ಬಾಲ ಕಾರ್ಮಿಕ ನಿರ್ಮೂಲನಾ ಜಾಗೃತಿ ಜಾಥಾಕ್ಕೆ ಚಾಲನೆ ನೀಡಿದ ತಹಶೀಲ್ದಾರ್

ಬಾಲ ಕಾರ್ಮಿಕ ಪದ್ದತಿಯನ್ನು ನಿರ್ಮೂಲನೆಗೊಳಿಸಲು ನಿರಂತರ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳುವುದರ ಜತೆಗೆ ಮಕ್ಕಳನ್ನು ಯಾವುದೇ ಸಂಸ್ಥೆಗಳಲ್ಲಿ ದುಡಿಸಿಕೊಳ್ಳುವುದು ಕಂಡು ಬಂದರೆ ಕ್ರಮ ಕೈಗೊಳ್ಳಲಾಗುವುದು ಎಂದು ಸುಳ್ಯ ತಹಶೀಲ್ದಾರ್ ಅನಂತಶಂಕರ್ ಹೇಳಿದ್ದಾರೆ.

ಜೂ.13ರಂದು ಕಾರ್ಮಿಕ ಇಲಾಖೆಯ ಆಶ್ರಯದಲ್ಲಿ ನಡೆಯುತ್ತಿರುವ ಬಾಲ್ಯಾವಸ್ಥೆ ಹಾಗೂ ಕಿಶೋರಾವಸ್ಥೆಯ ಕಾರ್ಮಿಕರ ನೇಮಕಾತಿಯ ವಿರುದ್ದ ನಡೆದ ಜಾಗೃತಿ ಜಾಥಾಕೆ ತಾಲೂಕು ಕಚೇರಿ ಎದುರು ಚಾಲನೆ‌ನೀಡಿದ‌ ತಹಶೀಲ್ದಾರ್ ಬಳಿಕ ಮಾತನಾಡಿದರು.

ಕಾರ್ಮಿಕ ಇಲಾಖೆ ಅಧಿಕಾರಿ ಗಣಪತಿ ಹೆಗ್ಡೆಯವರು 14 ವರ್ಷದೊಳಗಿನ ಮಕ್ಕಳನ್ನು ಕೆಲಸಕ್ಕೆ ಸೇರಿಸಿಕೊಂಡರೆ ಆಗುತ್ತಿರುವ ಅಪಾಯ ಮತ್ತು ನೇಮಿಸಿಕೊಂಡವರ ವಿರುದ್ದ ಕಾನೂನು ಕ್ರಮದ ಕುರಿತು ವಿವರ ನೀಡಿದರು. ಈ ಸಂದರ್ಭದಲ್ಲಿ ತಾಲೂಕು ಕಚೇರಿ ಸಿಬ್ಬಂದಿಗಳು, ಕಾರ್ಮಿಕ ಇಲಾಖೆಯವರು ಉಪಸ್ಥಿತರಿದ್ದರು.

ತಾಲೂಕು ಕಚೇರಿ ಎದುರಿನಿಂದ ಹೊರಟ ಈ‌ ಜಾಗೃತಿ ಜಾಥಾ ಸುಳ್ಯ ನಗರದಾದ್ಯಂತ ‌ಸಂಚರಿಸಲಿದೆ.

 

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.