Breaking News

ನಗರದ ವರ್ತಕರಿಂದ ತ್ಯಾಜ್ಯ ವಿಲೇವಾರಿ ಶುಲ್ಕ ಸಂಗ್ರಹ ಸಲ್ಲದು : ಡಿ.ಎಂ.ಶಾರಿಕ್

Advt_Headding_Middle
Advt_Headding_Middle

ಸುಳ್ಯ ನಗರ ಪಂಚಾಯತ್ ವರ್ತಕರಿಂದ ತ್ಯಾಜ್ಯ ವಿಲೇವಾರಿ ಬಾಬ್ತು ಸಂಗ್ರಹಿಸುವ ಕ್ರಮ ಸರಿಯಲ್ಲ ಎಂದು ದಕ್ಷಿಣ ಕನ್ನಡ ಜಿಲ್ಲಾ ಆಮ್ ಆದ್ಮಿ ಪಕ್ಷದ ಮುಖಂಡ ಡಿ.ಎಂ. ಶಾರಿಕ್ ಹೇಳಿದ್ದಾರೆ.


ಈಗ ಕೊರೋನಾ ಸಾಂಕ್ರಾಮಿಕ ರೋಗ ಹರಡುತ್ತಿದ್ದು ವರ್ತಕರು ಯಾವುದೇ ತರದ ವ್ಯಾಪಾರ ವಹಿವಾಟು ಕಳೆದ ಏಪ್ರಿಲ್ ತಿಂಗಳಿನಿಂದ ಇಲ್ಲದೇ ಕಂಗಾಲಾಗಿರುವ ಸಂದರ್ಭದಲ್ಲಿ ವರ್ತಕರಿಂದ ತ್ಯಾಜ್ಯ ವಿಲೇವಾರಿ ಬಗ್ಗೆ ಸಂಗ್ರಹಿಸುತ್ತಿರುವ ಮೊತ್ತ ಖಂಡನೀಯ. ವರ್ತಕರ ಹಿತಾಸಕ್ತಿ ಈ ಸಂದರ್ಭದಲ್ಲಿ ಕಾಯದೆ ಅವರಿಗೆ ಗಾಯದ ಮೇಲೆ ಬರೆ ಎಳೆಯುವಂತೆ ಮಾಡುವುದು ಎಷ್ಟು ಮಾತ್ರಕ್ಕೂ ಸರಿಯಲ್ಲ. ಇದಕ್ಕೆ ಸಾಮೂಹಿಕವಾಗಿ ವರ್ತಕರು ಖಂಡಿತವಾಗಿಯೂ ಆಕ್ಷೇಪ ಹೇಳಲೇಬೇಕು. ಅಲ್ಲದೇ ವರ್ತಕರ ಸಂಘದ ಪದಾಧಿಕಾರಿಗಳು ಕೂಡ ಇದಕ್ಕೆ ಸೂಕ್ತ ರೀತಿಯಲ್ಲಿ ಸ್ಪಂದಿಸಲೇಬೇಕು. ಕೊರೊನ ಸೋಂಕು ಹತೋಟಿಗೆ ಬಂದ ನಂತರ ವಾಣಿಜ್ಯ ವ್ಯವಹಾರ ಸರಿಹೋದ ನಂತರ ಸಂಗ್ರಹಿಸುವುದು ಸೂಕ್ತ ಎಂದು ಅವರು ತಿಳಿಸಿದ್ದಾರೆ.
ಡಿ.ಎಂ. ಶಾರಿಕ್
ಆಮ್ ಆದ್ಮಿ ಪಾರ್ಟಿ ದ.ಕ. ಜಿಲ್ಲೆ

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.