Breaking News

ದುಗಲಡ್ಕ; ವಿದ್ಯುತ್ ಕಂಬ ಬದಲಾಯಿಸಬೇಕಿದೆ

Advt_Headding_Middle
Advt_Headding_Middle

ದುಗಲಡ್ಕದ ನೀರಬಿದಿರೆ ಎಂಬಲ್ಲಿ ವಿದ್ಯುತ್ ಕಂಬ ಒಂದು ಅಪಾಯದ ಸ್ಥಿತಿಯಲ್ಲಿದ್ದು ಮೆಸ್ಕಾಂ ವಿದ್ಯುತ್ ಕಂಬವನ್ನು ಬದಲಾಯಿಸಬೇಕಾಗಿದೆ.


ದುಗಲಡ್ಕದಿಂದ ಉಬರಡ್ಕಕ್ಕೆ ಹೋಗುವ ಮಾರ್ಗದಲ್ಲಿ ಕೊಯಿಕುಳಿ ರಸ್ತೆ ತಿರುಗುವಲ್ಲಿ ಈ ವಿದ್ಯುತ್ ಕಂಬ ರಸ್ತೆಯ ಕಡೆಗೆ ವಾಲಿಕೊಂಡಿರುವ ಸ್ಥಿತಿಯಲ್ಲಿದೆ.ಈ ಕಂಬದ ಮೂಲಕ ಹತ್ತಕ್ಕೂ ಹೆಚ್ಚು ತಂತಿ ಹಾದುಹೋಗಿದ್ದು ಅಪಾಯ ಸಂಭವಿಸಬಹುದಾಗಿದೆ.

ಮಳೆಗಾಲ ಪ್ರಾರಂಭವಾಗಿರುವುದರಿಂದ ಅಪಾಯ ಸಂಭವಿಸುವುದಕ್ಕಿಂತ ಮುಂಚಿತವಾಗಿ ಕಂಬವನ್ನು ಬದಲಾಯಿಸಿ, ಹೊಸ ಮಾದರಿಯ ಕಂಬವನ್ನು ಹಾಕುವ ಕೆಲಸವನ್ನು ಮೆಸ್ಕಾಂ ಮಾಡಬೇಕೆಂದು ಜನರು ಆಗ್ರಹಿಸಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.