Breaking News

ಜಿಲ್ಲೆಯಲ್ಲಿ ಕೊರೋನಾ ಸ್ಫೋಟ : ಇಂದು 30 ಪಾಸಿಟಿವ್

Advt_Headding_Middle
Advt_Headding_Middle

 

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶನಿವಾರ 30 ಕೊರೊನಾ ಪಾಟಿಸಿವ್ ವರದಿಯಾಗಿದೆ. ಇವರಲ್ಲಿ 25 ಮಂದಿ ಗಲ್ಫ್ ನಿಂದ ಬಂದವರಾಗಿದ್ದರೆ, ಉಳಿದ ಐವರು ಮಹಾರಾಷ್ಟ್ರದಿಂದ ಬಂದವರು. ಜಿಲ್ಲೆಯಲ್ಲಿ ಒಟ್ಟು ಪ್ರಕರಣಗಳ ಸಂಖ್ಯೆ 271ಕ್ಕೇರಿದೆ.

ಉಡುಪಿ ಜಿಲ್ಲೆಯಲ್ಲಿ ಇಂದು 14 ಪ್ರಕರಣಗಳು ವರದಿಯಾಗಿವೆ. ಇವರಲ್ಲಿ ಎಲ್ಲರೂ ಮಹಾರಾಷ್ಟ್ರದಿಂದ ಬಂದವರಾಗಿದ್ದಾರೆ. ಜಿಲ್ಲೆಯಲ್ಲಿ ಒಟ್ಟು ಪ್ರಕರಣಗಳ ಸಂಖ್ಯೆ 1005 ಕ್ಕೇರಿದೆ.

ರಾಜ್ಯದಲ್ಲಿ ಇಂದು 308 ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು, ಇವರಲ್ಲಿ 208 ಮಂದಿ ಅಂತಾರಾಜ್ಯ/ ರಾಷ್ಟ್ರದಿಂದ ಬಂದವರು. ರಾಜ್ಯದಲ್ಲಿ ಒಟ್ಟು ಪ್ರಕರಣಗಳ ಸಂಖ್ಯೆ 6824ಕ್ಕೇರಿದೆ. ಇಂದು 3 ಮಂದಿ ಮೃತಪಟ್ಟಿದ್ದು, ಒಟ್ಟು ಮೃತಪಟ್ಟವರ ಸಂಖ್ಯೆ 81ಕ್ಕೆ ಏರಿದೆ.

ಕೇರಳದಲ್ಲಿ ಇಂದು 85 ಮಂದಿಯಲ್ಲಿ ಕೊರೊನಾ ಸೋಂಕು ಪತ್ತೆಯಾಗಿದ್ದು, ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 2407 ಕ್ಕೇರಿದೆ. 19 ಮಂದಿ ಮೃತಪಟ್ಟಿದ್ದಾರೆ. ಕಾಸರಗೋಡು ಜಿಲ್ಲೆಯಲ್ಲಿ ಇಂದು 9 ಮಂದಿಯಲ್ಲಿ ಸೋಂಕು ದೃಢಪಟ್ಟಿದ್ದು, ಜಿಲ್ಲೆಯಲ್ಲಿ ಒಟ್ಟು ಸೋಂಕಿತರ ಸಂಖ್ಯೆ 361ಕ್ಕೇರಿದೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.