ಕನಕಮಜಲು: ಬೈಕ್- ಕಾರು ಅಪಘಾತ, ಬೈಕ್ ಸವಾರನಿಗೆ ಗಾಯ ಆಸ್ಪತ್ರೆಗೆ ದಾಖಲು

Advt_Headding_Middle
Advt_Headding_Middle

ಬೈಕ್ ಹಾಗೂ ಕಾರು ಮಧ್ಯೆ ಪರಸ್ಪರ ಢಿಕ್ಕಿ ಸಂಭವಿಸಿ ಬೈಕ್ ಸವಾರ ತಲೆಗೆ ಗಾಯಗೊಂಡು ಆಸ್ಪತ್ರೆಗೆ ದಾಖಲಾದ ಘಟನೆ ಕನಕಮಜಲಿನಲ್ಲಿ ಜೂ.13ರಂದು ರಾತ್ರಿ ಸಂಭವಿಸಿದೆ.

ಅಡ್ಕಾರಿನ ಬಾಲಕೃಷ್ಣ ಎಂಬವರು ತಮ್ಮ ಬೈಕ್ ನಲ್ಲಿ ಕನಕಮಜಲು ಕಡೆಯಿಂದ ಜಾಲ್ಸೂರು ಕಡೆಗೆ ಬರುತ್ತಿದ್ದ ಸಂದರ್ಭದಲ್ಲಿ ಮೈಸೂರಿನಿಂದ ಮಂಗಳೂರಿಗೆ ತೆರಳುತ್ತಿದ್ದ ಇಂಡಿಕಾ ಕಾರು ಬೈಕ್ ಗೆ ಢಿಕ್ಕಿ ಹೊಡೆಯಿತು.

ಪರಿಣಾಮ ಬೈಕ್ ಚಲಾಯಿಸುತ್ತಿದ್ದ ಬಾಲಕೃಷ್ಣ ಅವರು ರಸ್ತೆಗೆ ಎಸೆಯಲ್ಪಟ್ಟು ತಲೆಗೆ ಗಾಯಗೊಂಡರು. ತಕ್ಷಣ ಸ್ಥಳೀಯರು ಸೇರಿ ಸುಣ್ಣಮೂಲೆಯ ಹಸನ್ ಅವರ ಕಾರಿನಲ್ಲಿ ಮಹಮ್ಮದ್ ರಿಯಾಜ್, ಮಹಮ್ಮದ್ ಹಸನ್, ಅಮೃತ್ ಕುದ್ಕುಳಿ ಮತ್ತು ಸ್ಥಳೀಯರ ಸಹಕಾರದಿಂದ ಗಾಯಾಳುವನ್ನು ಸುಳ್ಯದ ಕೆವಿಜಿ ಆಸ್ಪತ್ರೆಗೆ ಕರೆತಂದು ದಾಖಲಿಸಿರುವುದಾಗಿ ತಿಳಿದುಬಂದಿದೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.