ಗಿರೀಶ್ ಎ.ಕೆ. ಜ್ಯೂನಿಯರ್ ಕಮಾಂಡಿಂಗ್ ಆಫೀಸರ್ ಆಗಿ ಭಡ್ತಿ

Advt_Headding_Middle
Advt_Headding_Middle

ಕೂತ್ಕುಂಜ ಗ್ರಾಮದ ಆರ್ನೋಜಿ ಮನೆತನದ ಗಿರೀಶ್ ಎ. ಕೆ. ಭೂ ಸೇನೆಯಲ್ಲಿ ಹವಾಲ್ದಾರ್ ಹುದ್ದೆಯಿಂದ ಮುಂಭಡ್ತಿ ಹೊಂದಿ ಜ್ಯೂನಿಯರ್ ಕಮಾಂಡಿಂಗ್ ಆಫೀಸರ್ ಆಗಿ ನೇಮಕಹೊಂದಿದ್ದಾರೆ.

೧೯೯೮ ರಲ್ಲಿ ಸೇನೆಗೆ ಸೇರಿರುವ ಇವರು ತಮಿಳುನಾಡಿನ ಊಟಿಯಲ್ಲಿ ತನ್ನ ತರಭೇತಿ ಪಡೆದು ಜಮ್ಮುಕಾಶ್ಮಿರ, ಅಸ್ಸಾಂ, ಅರುಣಾಚಲ ಪ್ರದೇಶ, ಕೇರಳದ ತಿರುವನಂತಪುರ, ಮಧ್ಯಪ್ರದೇಶ ಬೋಪಾಲ್, ಪಶ್ಚಿಮ ಬಂಗಾಳ, ಚೀನಾ ಗಡಿಭಾಗ, ಮದ್ರಾಸ್ ಮುಂತಾದ ದೇಶದ ಹೆಚ್ಚಿನ ಗಡಿಭಾಗಗಳಲ್ಲಿ ಕರ್ತವ್ಯ ನಿರ್ವಹಿಸಿದ್ದಾರೆ. ಕಳೆದ ವರ್ಷಗಳಿಂದ ಹವಾಲ್ದಾರ್ ಆಗಿದ್ದು ೨೦೧೯ ರಲ್ಲಿ ಜೆಸಿಒ ತರಭೇತಿ ಪಡೆದು ಇತ್ತೀಚೆಗೆ ಜ್ಯೂನಿಯರ್ ಕಮಾಂಡಿಂಗ್ ಆಫೀಸರ್ ಆಗಿ ಮುಂಭಡ್ತಿ ಹೊಂದಿರುವ ಇವರು ಹಿಮಾಚಲ ಪ್ರದೇಶದಲ್ಲಿ ಕರ್ತವ್ಯ ನಿರ್ವಹಿಸುತಿದ್ದಾರೆ.

ಪ್ರಾಥಮಿಕ ಶಿಕ್ಷಣವನ್ನು ಕೂತ್ಕುಂಜ, ಪಂಜ ಶಾಲೆಯಲ್ಲಿ ಪಡೆದು, ಪ್ರೌಢ ಮತ್ತು ಪಿಯು ಶಿಕ್ಷಣವನ್ನು ಪಂಜದಲ್ಲಿ ಪಡೆದಿರುತ್ತಾರೆ. ಮೈಸೂರು ಯುನಿವರ್ಸಿಟಿಯಲ್ಲಿ ಪದವಿ ಶಿಕ್ಷಣವನ್ನು ಪೂರೈಸಿದ್ದಾರೆ. ಕೂತ್ಕುಂಜ ಗ್ರಾಮದ ಪಂಜ ಆರ್ನೋಜಿ ಎ.ಕೆ ನಾರಾಯಣ ಗೌಡ ಮತ್ತು ಉಮಾವತಿ ದಂಪತಿಗಳ ಪುತ್ರ. ಇವರ ಪತ್ನಿ ಚಿತ್ರಕಲಾ, ಮಕ್ಕಳು ಲಿಶ್ಮಿತಾ, ಹಿತಾರ್ಥ್.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.