ಪಂಜ: ಲಯನ್ಸ್ ಕ್ಲಬ್ ಜಿಲ್ಲಾ ರಾಜ್ಯಪಾಲರ ಭೇಟಿ, ಪದಗ್ರಹಣ ಸಮಾರಂಭ

Advt_Headding_Middle
Advt_Headding_Middle

 

ಪಂಜ ಲಯನ್ಸ್ ಕ್ಲಬ್‌ಗೆ ಜಿಲ್ಲಾ ರಾಜ್ಯಪಾಲರ ಅಧೀಕೃತ ಭೇಟಿ ಮತ್ತು ೨೦೨೦-೨೧ ನೇ ಸಾಲಿನ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಕ್ಲಬ್‌ನ ಅಧ್ಯಕ್ಷ ಸುರೇಶ್ ಕುಮಾರ್ ನಡ್ಕರವರ ಮನೆಯಲ್ಲಿ ಜರುಗಿತು.ಜಿಲ್ಲಾ ರಾಜ್ಯಪಾಲ ರೊನಾಲ್ಡ್ ಐಸಾಕ್ ಗೋಮ್ಸ್ ಮತ್ತು ಅವರ ಪತ್ನಿ ಅನಿತಾ ಗೋಮ್ಸ್ ಮುಖ್ಯ ಅತಿಥಿಗಳಾಗಿದ್ದರು. ಕ್ಲಬ್‌ನ ಅಧ್ಯಕ್ಷ ಸುರೇಶ್ ಕುಮಾರ್ ನಡ್ಕ ಅಧ್ಯಕ್ಷತೆ ವಹಿಸಿದ್ದರು. 

ಜಿಲ್ಲಾ ಉಪರಾಜ್ಯಪಾಲ ಡಾ.ಗೀತಾಪ್ರಕಾಶ್, ಪ್ರಾಂತೀಯ ಅಧ್ಯಕ್ಷ ಕೃಷ್ಣ ಪ್ರಶಾಂತ್ ,ವಲಯಾಧ್ಯಕ್ಷ ಬಿಟ್ಟಿ ಬಿ ನೆಡುನೀಲಂ, ,ರಾಜ್ಯಪಾಲರ ಪ್ರಾಂತೀಯ ಪ್ರತಿನಿಧಿ ಡಾ.ಪ್ರಕಾಶ್ ಡಿ.ಸೋಜ, ನಿಕಟಪೂರ್ವಾಧ್ಯಕ್ಷ ತುಕರಾಮ್ ಏನೆಕಲ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.ಪಂಜ ಶ್ರೀ ಶಾರದಾಂಭ ಭಜನಾ ಮಂದಿರಕ್ಕೆ ಭಾಷಣ ಪೀಠವನ್ನು ಕ್ಲಬ್‌ನ ವತಿಯಿಂದ ಕೊಡುಗೆಯಾಗಿ ನೀಡಲಾಯಿತು. ಜಿಲ್ಲಾ ಪೂರ್ವ ರಾಜ್ಯಪಾಲ ಯಂ ಬಿ ಸದಾಶಿವರನ್ನು ಗೌರವಿಸಲಾಯಿತು.ಅಭಿಮಾನಿ ಬಳಗದಿಂದ ಇತ್ತೀಚೆಗೆ ಹುಟ್ಟು ಹಬ್ಬದ ೭೦ ನೇ ವರ್ಷಾಚರಣೆಯನ್ನು ಸಂಭ್ರಮಿಸಿದ ಪಾಂತೀಯ ಪೂರ್ವಾಧ್ಯಕ್ಷ ಜಾಕೆ ಮಾಧವ ಗೌಡ ದಂಪತಿಯನ್ನು ಗೌರವಿಸಲಾಯಿತು.೨೦೨೦-೨೧ ನೇ ಸಾಲಿನ ಅಧ್ಯಕ್ಷರಾಗಿ ಕುಮಾರ ಸ್ವಾಮಿ ಕಿನ್ನಿಕುಮೇರಿ ,ಕಾಯದರ್ಶಿಯಾಗಿ ಕುಸುಮಾಧರ ಕೆಮ್ಮೂರು.ಕೋಶಾಧ್ಯಕ್ಷ ಕರುಣಾಕರ ಎಣ್ಣೆಮಜಲು ಮತ್ತು ಅವರ ತಂಡಕ್ಕೆ ರಾಜ್ಯಪಾಲರು ಪ್ರಮಾಣ ವಚನ ಬೋಧಿಸಿದರು.ಜಿಲ್ಲಾ ರಾಜ್ಯಪಾಲ ಮತ್ತು ಅವರ ಪತ್ನಿಯನ್ನು ಸನ್ಮಾನಿಸಲಾಯಿತು.ಲಯನ್ಸ್ ಸ್ಥಾಪಕ ಸದಸ್ಯರನ್ನು ಗೌರವಿಸಲಾಯಿತು.ನಿಯೋಜಿತ ಪ್ರಾಂತೀಯ ಅಧ್ಯಕ್ಷ ಸಂತೋಷ್ ಕುಮಾರ್ ಶೆಟ್ಟಿ,ಮಂಗಳೂರಿನ ಮಂಗಳಾದೇವಿ ಲಯನ್ಸ್ ಕ್ಲಬ್ ಸದಸ್ಯ ರುಕ್ಮಯ್ಯ ಗೌಡ, ಗುತ್ತಿಗಾರು ಲಯನ್ಸ್ ಕ್ಲಬ್ ಕಾರ್ಯದರ್ಶಿ ಪ್ರವೀಣ್ ಮುಂಡೋಡಿ, ಪಂಜ ಲಯನ್ಸ್ ಕ್ಲಬ್ ಸದಸ್ಯರು ಉಪಸ್ಥಿತರಿದ್ದರು. ಸುರೇಶ್ ಕುಮಾರ್ ನಡ್ಕ ಸ್ವಾಗತಿಸಿದರು.ಶಶಿಧರ ಪಳಂಗಾಯ ವರದಿ ವಾಚಿಸಿದರು. ಕರುಣಾಕರ ಎಣ್ಣೆಮಜಲು ವಂದಿಸಿದರು.


About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.