ಸುಳ್ಯ : ಗಾಂಧೀ ರಾಯಲ್ಸ್ ಗ್ರೂಪ್ ಸದಸ್ಯರ ಸಮ್ಮಿಲನ “ಗೆಟ್ ಟುಗೆದರ್”

Advt_Headding_Middle
Advt_Headding_Middle

 

ಬಶೀರ್ ನ್ಯಾಷನಲ್ ಹಾಗೂ ಮನ್ಸೂರ್ ಮೆಟ್ರೋ ನಿರ್ವಹಣೆಯ ಕ್ರೀಡೆ, ಸಾಮಾಜಿಕ, ಸಾಂಸ್ಕ್ರಿತಿಕ ರಂಗದಲ್ಲಿ ಹೆಸರು ಮಾಡಿದ ಗಾಂಧಿನಗರ ವ್ಯಾಪ್ತಿಯ ವಾಟ್ಸಾಪ್ ಗ್ರೂಪ್ ಗಾಂಧೀ ರಾಯಲ್ಸ್‌ನ ಸದಸ್ಯರ ಸ್ನೇಹ ಸಮ್ಮಿಲನ ಜೂನ್ 14 ರಂದು ಸುಳ್ಯ ಪರಿವಾರಕಾನದಲ್ಲಿ ನೂತನವಾಗಿ ಸ್ಥಾಪಿತಗೊಂಡ ಗ್ರ್ಯಾಂಡ್ ಪರಿವಾರ್ ಆಡಿಟೋರಿಯಂನಲ್ಲಿ ನಡೆಯಿತು.

ಕಾರ್ಯಕ್ರಮವನ್ನು ಬಶೀರ್ ಕುಂಙಿ ಖಿರಾಅತ್ ಪಠಿಸುವುದರ ಮೂಲಕ ಚಾಲನೆಯನ್ನು ನೀಡಿ, ಕಾರ್ಯಕ್ರಮದ ಕೇಂದ್ರ ಬಿಂದು ಬಷೀರ್ ನ್ಯಾಷನಲ್ ಸೇರಿದ ಸರ್ವರನ್ನೂ ಸ್ವಾಗತಿಸಿ, ಗ್ರೂಪಿನ ಕಾರ್ಯಚಟುವಟಿಕೆಯ ಬಗ್ಗೆ ಶ್ಲಾಘನೀಯ ವ್ಯಕ್ತಪಡಿಸಿ, ಹಾಗೂ ಇನ್ನೋರ್ವ ನಿರ್ವಾಹಕರಾದ ಮನ್ಸೂರ್ ಮೆಟ್ರೋರವರು ಕಾರ್ಯ ಚಟುವಟಿಕೆಗಳ ಬಗ್ಗೆ , ಹಾಗೂ ನಮ್ಮ ಮುಂದೆ ಇರುವ ಚಾರಿಟೀಗಳಂತಹ ಮಹತ್ತರವಾದ ಕಾರ್ಯಕ್ರಮದ ಬಗ್ಗೆ ಅವಲೋಕನ ನಡೆಸಿ , ಸದಸ್ಯರುಗಳಿಗೆ ಮನಮುಟ್ಟಿಸಿದರು. ಕಾರ್ಯಕ್ರಮದಲ್ಲಿ ಮುಖ್ಯವಾಗಿ ಲಾಕ್-ಡೌನ್ ಸಂದರ್ಭದಲ್ಲಿ ಏರ್ಪಡಿಸಿದ ಆನ್-ಲೈನ್ ಕ್ವಿಝ್ ಸ್ಪರ್ದೆಯ ವಿಜೇತರಿಗೆ ಬಹುಮಾನ ವಿತರಣೆ ಅದೇ ರೀತಿ ಮಿಮಿಕ್ರಿ, ಹಾಡು, ನೇರ ಕ್ವಿಝ್ ಮುಂತಾದ ಮನರಂಜನೀಯ ಕಾರ್ಯಕ್ರಮನ್ನು ಹಮ್ಮಿಕೊಂಡಿತ್ತು.
ಗ್ರೂಪಿನಲ್ಲಿ ಅಡಗಿರುವ ಕೆಲವೊಂದು ಪ್ರತಿಭೆಗಳನ್ನು ಗುರುತಿಸಿ ಅವರನ್ನು ಸಮಾಜಕ್ಕೆ ಗುರುತಿಸಲಾಯಿತು. ಸುಳ್ಯ ನಗರ ಪಂಚಾಯತ್ ಸದಸ್ಯರಾದ ಶರೀಫ್ ಕಂಠಿ, ಸರಕಾರಿ ನೌಕರರಾದ ತನ್ವೀರ್ ಮೆಸ್ಕಾಮ್, ಲಾಕ್-ಡೌನ್ ವೇಳೆಯಲ್ಲಿ ಬಡವರ ಬಂಧು ಎಂದೇ ಪ್ರಸಿದ್ದಿಯಾದ ಸಿದ್ದೀಕ್ ಅಜ್ಜಪ್ಪ ಕಲ್ಲುಮುಟ್ಲು, ಮುಸ್ತಫ ಮೋಮೋ ಅವರನ್ನು ಗುರುತಿಸಲಾಯಿತು.

ಮೊಯಿದೀನ್ ಶರ್ಫಾನ್ ಕಾರ್ಯಕ್ರಮ ನಿರೂಪಿಸಿ, ಯುವ ಸಾಮಾಜಿಕ ಕಾರ್ಯಕರ್ತ ಶೆಮೀರ್ ಮೊಬೈ ಹಾರ್ಟ್ ವಂದಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.